janadhvani

Kannada Online News Paper

ಮಂಜನಾಡಿ ಸೆಕ್ಟರ್ ಮಹಾಸಭೆ : ನೂತನ ತೌಡುಗೋಳಿ ಸೆಕ್ಟರ್ ಸಮಿತಿ ಅಸ್ತಿತ್ವಕ್ಕೆ

ಮುಡಿಪು : ಎಸ್ಸೆಸ್ಸೆಫ್‌ ಮಂಜನಾಡಿ ಸೆಕ್ಟರ್ ಇದರ ವಾರ್ಷಿಕ ಮಹಾಸಭೆಯು ದಿನಾಂಕ 14/02/2023 ಮಂಗಳವಾರ ದಂದು ಸುನ್ನೀ ಸೆಂಟರ್ ಮಂಜನಾಡಿ ಯಲ್ಲಿ ಸೆಕ್ಟರ್ ಅಧ್ಯಕ್ಷರಾದ ಮುನೀರ್ ಕಲ್ಮಿಂಜ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಇಬ್ರಾಹಿಂ ಅಹ್ಸನಿ ಪ್ರಾರ್ಥನೆಗೈದು ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಸಭೆಯನ್ನು ಉದ್ಘಾಟಿಸಿದರು, ಪ್ರಧಾನ ಕಾರ್ಯದರ್ಶಿ ಶಿಹಾಬ್ ತೌಡುಗೋಳಿ ಸ್ವಾಗತಿಸಿ ವರದಿ ವಾಚಿಸಿದರು. ಫಿನಾನ್ಸ ಕಾರ್ಯದರ್ಶಿ ಅಶ್ರಫ್ ಕಲ್ಕಟ್ಟ ಲೆಕ್ಕಪತ್ರ ಮಂಡಿಸಿದರು.

ಡಿವಿಶನ್‌ ವೀಕ್ಷಕರಾಗಿ ಎಸ್ಸೆಸ್ಸೆಫ್‌ ಮುಡಿಪು ಡಿವಿಶನ್ ಕ್ಯಾಂಪಸ್ ಕಾರ್ಯದರ್ಶಿ ಹಾಗೂ ಮಂಜನಾಡಿ ಸೆಕ್ಟರ್ ಇನ್ಸ್‌ಪೆಕ್ಟರ್ ಆದ ಇಲ್ಯಾಸ್ ಪೊಟ್ಟೊಳಿಕೆ ಆಗಮಿಸಿದ್ದರು. ಮಸೂದ್ ಬಾಹಸನಿ, ಹಮೀದ್ ಬಂಡಸಾಲೆ, ಅನೀಸ್ ಕೊಲ್ಲರಕೋಡಿ, ಮಜೀದ್ ಮಂಜನಾಡಿ, ಉಬೈದುಲ್ಲಾ ಆರ್.ಜಿ.ನಗರ, ಝೈನುದ್ದೀನ್ ಇರಾ ಉಪಸ್ಥಿತರಿದ್ದರು. ಮುಡಿಪು ಡಿವಿಶನ್ ಅಧ್ಯಕ್ಷರಾದ ಮನ್ಸೂರ್ ಹಿಮಮಿ ಉಸ್ತಾದ್ ಸಂಘಟನಾ ತರಬೇತಿ ನಡೆಸಿಕೊಟ್ಟರು.

ತೌಡುಗೋಳಿ ಸೆಕ್ಟರ್ ಅಸ್ತಿತ್ವಕ್ಕೆ:

ಎಸ್.ಎಸ್.ಎಫ್ ಮುಡಿಪು ಡಿವಿಷನ್‌ನ ನೂತನ ಸೆಕ್ಟರ್ ಆಗಿ ತೌಡುಗೋಳಿ ಸೆಕ್ಟರ್ ಅಸ್ತಿತ್ವಕ್ಕೆ ತರಲಾಯಿತು.

ನೂತನ ಸಮಿತಿ ರಚನೆ: ಎಸ್ಸೆಸ್ಸೆಫ್‌ ತೌಡುಗೋಳಿ ಸೆಕ್ಟರ್‌ ಇದರ ಅಧ್ಯಕ್ಷರಾಗಿ ARS ಅಬ್ದುಲ್ ರಹಿಮಾನ್ ಸಾರ್ತಬೈಲ್ , ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ರಶೀದ್ ಕಲ್ಮಿಂಜ , ಪಿನಾನ್ಸ್ ಸೆಕ್ರೆಟರಿ ಯಾಗಿ ಮುಹಮ್ಮದ್ ಕೌಸರ್ ತೌಡುಗೋಳಿ ಆಯ್ಕೆಗೊಂಡರು.

ಕಾರ್ಯದರ್ಶಿಗಳಾಗಿ ರಾಶಿದ್ ಅಲ್ ಜಲಾಲಿ ಪೊಟ್ಟೊಳಿಕೆ, ಫಾರೂಕ್ ತೌಡುಗೋಳಿ, ಹಸನ್ ಫಯಾಝ್ ತೌಡುಗೋಳಿ, ನಾಸಿರ್ ಹನೀಫಿ ಪೊಟ್ಟೊಳಿಕೆ, ನಾಝಿಮ್ ಪೊಟ್ಟೊಳಿಕೆ, ಫಝಲ್ ಕಲ್ಮಿಂಜ, ಅಬ್ದುಲ್ ರಹ್ಮಾನ್ ಪೊಟ್ಟೊಳಿಕೆ, ತ್ವಯ್ಯಿಬ್ ತೌಡುಗೋಳಿ ಹಾಗೂ ಎಂಟು ಸದಸ್ಯರನ್ನೊಳಗೊಂಡ ಸಮಿತಿಯನ್ನು ರಚಿಸಲಾಯಿತು.

ಮಂಜನಾಡಿ ಸೆಕ್ಟರ್
SSF ಮಂಜನಾಡಿ ಸೆಕ್ಟರ್ ಇದರ ನೂತನ ಅಧ್ಯಕ್ಷರಾಗಿ ಅಶ್ರೀಫ್ ಮಳ್ಹರಿ, ಪ್ರಧಾನ ಕಾರ್ಯದರ್ಶಿಯಾಗಿ ಮುಹ್ಸಿನ್‌ ಅನ್ಸಾರ್ ನಗರ ಹಾಗೂ ಫಿನಾನ್ಸ್ ಕಾರ್ಯದರ್ಶಿಯಾಗಿ ಕಲೀಲ್ ಕಟ್ಟೆಮಾರ್ ಆಯ್ಕೆ ಗೊಂಡರು ಹಾಗೂ 8 ಕಾರ್ಯದರ್ಶಿ ಗಳನ್ನೊಳಗೊಂಡ 19 ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.

ಈ ಸಮಯದಲ್ಲಿ SSF ಮಂಜನಾಡಿ ಸೆಕ್ಟರ್‌ನಲ್ಲಿ ಸಕ್ರಿಯವಾಗಿ ಕಾರ್ಯಾಚರಿಸಿ ಇದೀಗ SYSಗೆ ಪಾದಾರ್ಪಣೆಗೈಯ್ಯುತ್ತಿರುವ
ಇಬ್ರಾಹಿಂ ಅಹ್ಸನಿ, ಮಸೂದ್ ಬಾಅಸನಿ, ಶಿಹಾಬ್ ತೌಡುಗೋಳಿ, ರಫೀಕ್ ಕೊಳ್ಳರಕೋಡಿ, ಬಾತಿಷ್ ಹಿಮಮಿ ಸಖಾಫಿ, ಶರೀಫ್ ಕಲ್ಮಿಂಜ, ಅಶ್ರಫ್ ಕಲ್ಕಟ್ಟ ಮನ್ಸೂರ್ ಮೋರ್ಲ, ಶಬೀರ್ ಕೊಳ್ಳರಕೋಡಿ ರವರಿಗೆ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.
ಕೊನೆಯಲ್ಲಿ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಶೀದ್ ವಂದಿಸಿದರು.