ಮಂಗಳೂರು: ಇತ್ತೀಚೆಗೆ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಸುರತ್ಕಲ್ ಫಾಝಿಲ್ ಪ್ರಕರಣದಲ್ಲಿ ಪೊಲೀಸರು ಆರೋಪಿಗಳ ಪೈಕಿ ಓರ್ವ ವ್ಯಕ್ತಿಗೆ ತಕ್ಷಣ ಜಾಮೀನು ಲಭ್ಯವಾಗುವ ರೀತಿಯಲ್ಲಿ ಪ್ರಕರಣವನ್ನು ಸಡಿಲ ಗೊಳಿಸಲಾಗಿದೆ.
ಇದರ ಪರಿಣಾಮವಾಗಿ, ಆರೋಪಿಯು ಇಂದು ಮುಖ್ಯವಾಗಿ ಇತರರಿಗೆ ಹಣಕಾಸಿನ ಬೇಡಿಕೆಗೆ ಬೆದರಿಕೆ ಒಡ್ಡಿದ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಹತ್ಯಾ ಪ್ರಕರಣದಲ್ಲಿ ಪೊಲೀಸರ ಸಡಿಲಿಕೆ ನಿಲುವು ಮತ್ತು ಅಸಮರ್ಪಕ ತನಿಖೆಯೇ ಇಂತಹ ಬೆಳಲಣಿಗೆಗೆ ಕಾರಣ.
ಬಿಡುಗಡೆಗೊಂಡ ಆರೋಪಿತರ ಜಾಮೀನುಗಳನ್ನು ರದ್ದುಗೊಳಿಸಿ ತಕ್ಷಣ ಪ್ರಕರಣವನ್ನು ಉನ್ನತ ತನಿಖಾ ತಂಡಕ್ಕೆ ಪ್ರಕರಣವನ್ನು ಸಮರ್ಪಕಗೊಳಿಸಲು ಸರ್ಕಾರ ನಿರ್ದೇಶಿಸಬೇಕಿದೆ ಮತ್ತು ಹತ್ಯಾ ತಂಡಕ್ಕೆ ಹಣಕಾಸಿನ ಭರವಸೆ ನೀಡಿದ ಬಗ್ಗೆ ತನಿಖೆ ನಡೆಸಿ, ಹಣ ಕಾಸು ಒದಗಿಸುವ ಮೂಲವನ್ನು ಮತ್ತು ವ್ಯಕ್ತಿಗಳನ್ನು ಕೂಡಾ ಈ ಪ್ರಕರಣದಲ್ಲಿ ಬಂಧಿಸಬೇಕಾಗಿದೆ ಎಂದು ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷರಾದ ಕೆ.ಅಶ್ರಫ್(ಮಾಜಿ ಮೇಯರ್) ಆಗ್ರಹಿಸಿದ್ದಾರೆ.