janadhvani

Kannada Online News Paper

ಮತೀಯ ಹತ್ಯೆಗಳನ್ನು ಸಮರ್ಥಿಸಿ ಶರಣ್ ಪ್ರಚೋದನಕಾರಿ ಹೇಳಿಕೆ: ಪೊಲೀಸರು ಕ್ರಮ ಕೈಗೊಳ್ಳಬೇಕು

ಪ್ರವೀಣ್ ಹತ್ಯೆಗೆ ಪ್ರತೀಕಾರವಾಗಿ ಸುರತ್ಕಲ್‌ನಲ್ಲಿ ಮುಸ್ಲಿಂ ಯುವಕನ ಕೊಲೆ ಮಾಡಿದ್ದೇವೆ ಎಂದ ಶರಣ್ ಪಂಪ್ವೆಲ್

ಮಂಗಳೂರು: ವಿ.ಎಚ್.ಪಿ ಪ್ರೇರಿತ ತುತ್ತೂರಿ ಸೇವಕ ಶರಣ್ ಪಂಪ್ವೆಲ್ ಮೂಲಕ, ಮುಂದಿನ ತನ್ನ ರಾಜಕೀಯ ಅಸ್ತಿತ್ವದ ಬೆಳವಣಿಗೆಗಳನ್ನು ಗುರಿಯಾಗಿಸಿ,ಬಜರಂಗದಳ ‘ಶೌರ್ಯ ಯಾತ್ರೆ’ ಹೆಸರಿನಲ್ಲಿ ಕರ್ನಾಟಕದಾದ್ಯಂತ ಮತೀಯ ಪ್ರಚೋದನೆಯನ್ನು ಸೃಷ್ಟಿಸುವ ಹುನ್ನಾರದಿಂದ ಪ್ರಚೋದನಕಾರಿ ಹೇಳಿಕೆಗಳಿಗೆ ನಾಂದಿ ಹಾಡಲಾಗುತ್ತಿದೆ ಎಂದು ಮುಸ್ಲಿಮ್ ಒಕ್ಕೂಟದ ಅಧ್ಯಕ್ಷರಾದ ಕೆ.ಅಶ್ರಫ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅದರ ಭಾಗವಾಗಿ ಗುಜರಾತಿನ ಮುಸ್ಲಿಮರ ಹತ್ಯೆ, ಸುರತ್ಕಲ್ ಫಾಝಿಲ್ ಹತ್ಯೆ, ತುಮಕೂರಿನಲ್ಲಿ ಸಂಭಾವ್ಯ ಗಲಭೆಗೆ ಪ್ರಚೋದನೆ, ಒಬ್ಬನನ್ನು ಮುಟ್ಟಿದರೆ ಹತ್ತು ಜನ ಆಸ್ಪತ್ರೆಯಲ್ಲಿ ಇರುತ್ತಾರೆ ಎಂಬ ಸಂಭಾವ್ಯ ಹಲ್ಲೆಗೆ ಪ್ರಚೋದನೆ, ‘ ನಮ್ಮ ಕೈಯಲ್ಲಿ ತಲವಾರು ಇರುತ್ತದೆ ‘ ಎಂಬ ಹೇಳಿಕೆಯಿಂದ ಅಪರಾಧಕ್ಕೆ ಪ್ರೇರಣೆ ಹೊಂದುವಂತಹ ಹೇಳಿಕೆಯನ್ನು ಸಾರ್ವಜನಿಕವಾಗಿ ಮತ್ತು ಮುಕ್ತವಾಗಿ ಕಾನೂನಿನ ಏಜೆಂಟ್ಗಳ ಸಮಕ್ಷಮವೇ ನೀಡಿರುತ್ತಾರೆ.

ಶರಣ್ ಎಂಬ ವಿ.ಎಚ್.ಪಿ ಏಜೆಂಟ್ ನ ಮುಖಾಂತರ ಕರ್ನಾಟಕದಾದ್ಯಂತ ಈ ರೀತಿಯಲ್ಲಿ ಗಲಭೆಗೆ ಮುನ್ನುಡಿ ಬರೆಯಲಾಗುತ್ತದೆ. ಮುಂದಿನ ದಿನಗಳಲ್ಲಿ ಗಲಭೆ ಸ್ಫೋಟ ಗೊಂಡರೆ ಅದಕ್ಕೆ ಮುಖ್ಯ ಕಾರಣ ಈ ಹೇಳಿಕೆಗಳಿಂದಲೇ ಎಂಬುದನ್ನು ವಿವೇಚಿಸಿ ಪೊಲೀಸರು ತಕ್ಷಣ ಪ್ರಕರಣ ದಾಖಲಿಸ ಬೇಕಿದೆ. ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ಶರಣ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮುಸ್ಲಿಮ್ ಒಕ್ಕೂಟ ಆಗ್ರಹಿಸುತ್ತಿದೆ. ಇಲ್ಲದಿದ್ದಲ್ಲಿ ಇದರ ವಿರುದ್ಧ ಪ್ರತಿಭಟನೆ ಅನಿವಾರ್ಯವಾಗಲಿದೆ ಎಂದು ಕೆ.ಅಶ್ರಫ್(ಮಾಜಿ ಮೇಯರ್) ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತುಮಕೂರಿನಲ್ಲಿ ನಡೆದ ಬಜರಂಗದಳದ ಶೌರ್ಯ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಶರಣ್ ಪಂಪ್ವೆಲ್, ಗುಜರಾತಿನ 59 ಕರಸೇವಕರ ಹತ್ಯೆಯ ಪ್ರತೀಕಾರಕ್ಕೆ 2 ಸಾವಿರ ಜನರ ಹತ್ಯೆ ಹಿಂದೂಗಳು ನಪುಂಸಕರಲ್ಲ ಎಂಬುದನ್ನು ತೋರಿಸುತ್ತದೆ ಎಂದಿದ್ದಾರೆ. ಇದು ಹಿಂದೂಗಳ ಪರಾಕ್ರಮ.

ಉಳ್ಳಾಲದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಶರಣ್, ಪ್ರವೀಣ್ ನೆಟ್ಟಾರು ಹತ್ಯೆಯಾದಾಗ ಹಿಂದೂ ಸಮಾಜ ಕಣ್ಣೀರಲ್ಲಿ ಮುಳುಗಿತ್ತು. ಆದರೆ ನಾವು ಹಿಂದೂ ಬಲಿದಾನ ನೋಡಿ ಸುಮ್ಮನೇ ಕೂರಲಿಲ್ಲ, ಸುರತ್ಕಲ್‌ಗೆ ಹೋಗಿ ನುಗ್ಗಿ ಮುಸ್ಲಿಂ ಯುವಕನ ಕೊಲೆ ಮಾಡಿದ್ದೇವೆ. ಇದರ ವಿಡಿಯೋವನ್ನು ನೀವೆಲ್ಲ ನೋಡಿದ್ದೀರಾ..? ಎಂದು ಹೇಳುವ ಮೂಲಕ ಪ್ರವೀಣ್ ನೆಟ್ಟಾರು ಕೊಲೆಗೆ ಪ್ರತೀಕಾರವಾಗಿ ಫಾಜಿಲ್ ಹತ್ಯೆ ನಡೆದಿದೆ ಎಂಬ ವಿಚಾರವನ್ನು ಶರಣ್ ಪಂಪ್‌ವೆಲ್ ಸಮರ್ಥಿಸಿಕೊಂಡಿದ್ದಾರೆ.

error: Content is protected !! Not allowed copy content from janadhvani.com