janadhvani

Kannada Online News Paper

1

ಮುಂದಿನ ವಾರದಿಂದ ಪರಿಷ್ಕೃತ ನಿತಾಖಾತ್ ಯೋಜನೆಯ ಎರಡನೇ ಹಂತ ಜಾರಿ

ಸಂಸ್ಥೆಗಳನ್ನು ಕಡು ಹಸಿರು, ಹಸಿರು, ತಿಳಿ ಹಸಿರು ಮತ್ತು ಕೆಂಪು ಎಂದು ವರ್ಗೀಕರಿಸಲಾಗಿದೆ.

ರಿಯಾದ್: ಮುಂದಿನ ವಾರದಿಂದ ಸೌದಿ ಅರೇಬಿಯಾದಲ್ಲಿ ಪರಿಷ್ಕೃತ ನಿತಾಖಾತ್-Nitaqat(ಸ್ವದೇಶೀಕರಣ) ಯೋಜನೆಯ ಎರಡನೇ ಹಂತವನ್ನು ಜಾರಿಗೆ ತರಲಾಗುತ್ತದೆ. ಸಂಸ್ಥೆಯಲ್ಲಿನ ಒಟ್ಟು ಉದ್ಯೋಗಿಗಳಲ್ಲಿ ಐದು ಪ್ರತಿಶತದಷ್ಟು ಸೌದಿ ಪ್ರಜೆಗಳನ್ನು ನೇಮಿಸಿಕೊಳ್ಳಬೇಕಾಗುತ್ತದೆ. ಇದು ಎಲ್ಲಾ ಸಂಸ್ಥೆಗಳಿಗೂ ಅನ್ವಯಿಸುತ್ತದೆ. ನಿತಾಖಾತ್ ಮಟ್ಟವನ್ನು ಪರಿಶೀಲಿಸುವ ಲಿಂಕ್‌ಗಳನ್ನು ಸಂಸ್ಥೆಗಳಿಗೆ ಹಸ್ತಾಂತರಿಸಲಾಗಿದೆ ಎಂದು ಕಾರ್ಮಿಕ ಇಲಾಖೆ ತಿಳಿಸಿದೆ.

ಡಿಸೆಂಬರ್ 1, 2021 ರಿಂದ 2024 ರವರೆಗೆ ಮುಂದುವರಿಯುವ ಯೋಜನೆಯಾಗಿದೆ
ನಿತಾಖಾತ್. ಇದನ್ನು ಸಾಮಾಜಿಕ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು(Saudi Arabia Ministry of Human Resources and Social Development) ಮೂರು ಹಂತಗಳಲ್ಲಿ ಜಾರಿಗೊಳಿಸುತ್ತಿದೆ. ಇದರ ಎರಡನೇ ಹಂತವು ಫೆಬ್ರವರಿ 1 ರಿಂದ ಜಾರಿಗೆ ಬರಲಿದೆ. ಪ್ರತಿ ಸಂಸ್ಥೆಯು ಪೂರೈಸಬೇಕಾದ ಸೌದೀಕರಣ ಮಟ್ಟವನ್ನು ಸಚಿವಾಲಯವು ಈ ಹಿಂದೆ ಘೋಷಿಸಿತ್ತು.ಇದರ ಪ್ರಕಾರ ಸೌದಿ ಉದ್ಯೋಗಿಗಳ ಸಂಖ್ಯೆ ಸಂಸ್ಥೆಯಲ್ಲಿ ಇರಬೇಕು.

ಸಂಸ್ಥೆಗಳನ್ನು ಕಡು ಹಸಿರು, ಹಸಿರು, ತಿಳಿ ಹಸಿರು ಮತ್ತು ಕೆಂಪು ಎಂದು ವರ್ಗೀಕರಿಸಲಾಗಿದೆ. ಇದು ಸೌದೀಕರಣದ ಮಾನದಂಡಗಳನ್ನು ಪೂರೈಸದ ಸಂಸ್ಥೆಗಳ ಸ್ಥಾನಮಾನವನ್ನು ಕಡಿಮೆ ಮಾಡುತ್ತದೆ.

ಕೆಂಪು ವರ್ಗದ ಸಂಸ್ಥೆಗಳಿಗೆ ಯಾವುದೇ ಸರ್ಕಾರಿ ಸೇವೆ ಲಭಿಸುವುದಿಲ್ಲ. ಕೆಂಪು ವರ್ಗದಲ್ಲಿರುವ ಸಂಸ್ಥೆಗಳ ಉದ್ಯೋಗಿಗಳು ಕಂಪನಿಯ ಅನುಮತಿಯಿಲ್ಲದೆ ಸಂಸ್ಥೆಯನ್ನು ಬದಲಾಯಿಸುವ ಅವಕಾಶವಿದೆ.

ಸರ್ಕಾರಿ ಸೇವೆಗಳು ಲಭಿಸುವ ಅತ್ಯಂತ ಕೆಳ ಮಟ್ಟದ ವರ್ಗವಾಗಿದೆ ತಿಳಿ ಹಸಿರು. ಹೆಚ್ಚಿನ ಸಂಸ್ಥೆಗಳು ಈ ವರ್ಗದಲ್ಲಿದೆ. ಸೌದೀಕರಣದ ಹೊಸ ಹಂತವನ್ನು ಅನುಸರಿಸದಿದ್ದರೆ, ಈ ವರ್ಗವು ಕೆಂಪು ವರ್ಗಕ್ಕೆ ಸೇರಲಿದೆ.

ಐದಕ್ಕಿಂತ ಕಡಿಮೆ ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆಗಳು ಒಂದು ಸೌದಿ ಪ್ರಜೆಯನ್ನು ನೇಮಿಸಿಕೊಳ್ಳಬೇಕಾಗುತ್ತದೆ. ಆದರೆ ಅದಕ್ಕಿಂತ ಹೆಚ್ಚಿನ ಉದ್ಯೋಗಿಗಳಿದ್ದಲ್ಲಿ, ಸಚಿವಾಲಯವು ನಿಗದಿಪಡಿಸಿದ ಮಾನದಂಡಗಳ ಪ್ರಕಾರ ದೇಶೀಕರಣ ಪೂರ್ಣಗೊಳಿಸಬೇಕು.

ಪರಿಷ್ಕೃತ ನಿತಾಖಾತ್‌ನಲ್ಲಿ ದೇಶದ ಎಲ್ಲಾ ಸಂಸ್ಥೆಗಳನ್ನು ಅವುಗಳ ಕಾರ್ಯಾಚರಣೆಯ ವಿಧಾನಕ್ಕೆ ಅನುಗುಣವಾಗಿ 37 ವರ್ಗಗಳಾಗಿ ವರ್ಗೀಕರಿಸಲಾಗಿದೆ.

1
1
1

error: Content is protected !! Not allowed copy content from janadhvani.com