ರಿಯಾದ್: ಈ ವರ್ಷ (2023) ಹಜ್ ಮಾಡಲು ಬಯಸುವವರು ಸಂಪೂರ್ಣ ಪ್ರಮಾಣದ ಕೋವಿಡ್ ವ್ಯಾಕ್ಸಿನೇಷನ್‌ಗಳನ್ನು ತೆಗೆದುಕೊಂಡಿರಬೇಕು ಎಂದು ಸೌದಿ ಹಜ್ ಮತ್ತು ಉಮ್ರಾ ಸಚಿವಾಲಯ(Saudi Ministry of Hajj and Umrah) ಹೇಳಿದೆ. ಹಜ್‌ಗೆ ಅರ್ಜಿ ಸಲ್ಲಿಸಿರುವವರು ಪೂರ್ಣ ಕೋವಿಡ್ ಲಸಿಕೆಯನ್ನು ಪಡೆದಿರಬೇಕು ಎಂಬ ಷರತ್ತನ್ನು ಪೂರೈಸಬೇಕು.
ಟ್ವಿಟರ್‌ನಲ್ಲಿ (Twitter) ವ್ಯಕ್ತಿಯೊಬ್ಬರು ಕೇಳಿದ ಪ್ರಶ್ನೆಗೆ ಸಚಿವಾಲಯ ಈ ಉತ್ತರ ನೀಡಿದೆ. ಅಲ್ಲದೆ ಮೆನಿಂಜೈಟಿಸ್ ಲಸಿಕೆ(Meningitis Vaccine) ಮತ್ತು ಕಾಲೋಚಿತ ಇನ್ಫ್ಲುಯೆನ್ಸ ಲಸಿಕೆ (Seasonal influenza vaccine) ತೆಗೆದುಕೊಳ್ಳಬೇಕು. ಯಾವುದೇ ದೀರ್ಘಕಾಲದ ಗಂಭೀರ ಕಾಯಿಲೆಗಳು ಅಥವಾ ಯಾವುದೇ ಸಾಂಕ್ರಾಮಿಕ ರೋಗಗಳು ಇರಬಾರದು ಎಂದು ಆರೋಗ್ಯ ನಿಬಂಧನೆಗಳಲ್ಲಿ ಉಲ್ಲೇಖಿಸಲಾಗಿದೆ.