ರಿಯಾದ್: ಸೌದಿ ಅರೇಬಿಯಾದ ಉತ್ತರ ಪ್ರಾಂತ್ಯದಲ್ಲಿ ಭಾರೀ ಹಿಮಪಾತವಾಗಿದೆ. ತಬೂಕ್‌ನ ಅಲ್ ಲೌಝ್ ಪರ್ವತಗಳಲ್ಲಿ(Jabal al-Lawz) ಮತ್ತೆ ಹಿಮ ಬಿದ್ದಿದೆ. ಮಂಗಳವಾರ ರಾತ್ರಿಯಿಂದ ಆರಂಭವಾದ ಹಿಮಪಾತ ಬುಧವಾರ ಬೆಳಗಿನ ಜಾವದವರೆಗೂ ಮುಂದುವರಿದಿತ್ತು. ಪರ್ವತಗಳು ನೀರಿನಿಂದ ಆವೃತವಾಗಿವೆ. ಈ ಪ್ರದೇಶದಲ್ಲಿ ಚಳಿಯೂ ಜೋರಾಗಿದೆ.
ಒಂದು ವಾರದ ಹಿಂದೆ ಅಲ್ ಲೌಝ್ ಪರ್ವತಗಳಲ್ಲಿ((Jabal al-Lawz)) ಇದೇ ರೀತಿಯ ಭಾರೀ ಹಿಮಪಾತವಾಗಿತ್ತು. ತಬೂಕ್ ಮತ್ತು ಸುತ್ತಮುತ್ತಲಿನ ಅನೇಕ ಜನರು ಹಿಮದಿಂದ ಆವೃತವಾದ ಪರ್ವತಗಳನ್ನು ನೋಡಲು ಆಗಮಿಸಿದ್ದು, ಪ್ರವಾಸಿಗರ ಹರಿವಿನಿಂದಾಗಿ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ.
ಈ ಪ್ರದೇಶದಲ್ಲಿ ನಾಳೆಯಿಂದ ತೀವ್ರ ಚಳಿಯ ಅನುಭವವಾಗಲಿದೆ ಎಂದು ರಾಷ್ಟ್ರೀಯ ಹವಾಮಾನ ಕೇಂದ್ರ(Saudi National Meteorological Center) ತಿಳಿಸಿದೆ. ತಬೂಕ್, ಅಲ್-ಜವ್ಫ್, ಹಾಯಿಲ್ ಮತ್ತು ಉತ್ತರ ಗಡಿ ಪ್ರಾಂತ್ಯಗಳಲ್ಲಿ ಕನಿಷ್ಠ ತಾಪಮಾನವು ಶೂನ್ಯ ಡಿಗ್ರಿಯಿಂದ ಐದು ಡಿಗ್ರಿಗಳಿಗೆ ಇಳಿಯುತ್ತದೆ. ರಿಯಾದ್ ಮತ್ತು ಅಲ್ ಖಸೀಮ್ ಪ್ರಾಂತ್ಯಗಳು ಮತ್ತು ಪೂರ್ವ ಪ್ರಾಂತ್ಯದ ಉತ್ತರ ಭಾಗದವರೆಗೆ ವಿಪರೀತ ಚಳಿ ಇರಲಿದೆ. ಈ ಸ್ಥಳಗಳಲ್ಲಿ ತಾಪಮಾನವು ಐದು ಡಿಗ್ರಿಯಿಂದ ಒಂಬತ್ತು ಡಿಗ್ರಿಗಳ ವರೆಗೆ ಇಳಿಯಲಿದೆ ಎಂದು ರಾಷ್ಟ್ರೀಯ ಹವಾಮಾನ ಕೇಂದ್ರ ತಿಳಿಸಿದೆ.
















ಇನ್ನಷ್ಟು ಸುದ್ದಿಗಳು
ದುಬೈ-ಇಸ್ರೇಲ್ ವಿಮಾನದಲ್ಲಿ ಪೈಲಟ್ಗಳ ನಡುವೆ ಸಂಘರ್ಷ : ಸೌದಿಯಲ್ಲಿ ತುರ್ತು ಭೂಸ್ಪರ್ಶ
ಅಣು-ವಿಕಿರಣ ಸೋರಿಕೆಯಾದರೆ ಏನು ಮಾಡಬೇಕು?; ಜಾಗರೂಕತೆಯ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದ CDAA
ಒಮಾನ್:ಕಾರ್ಮಿಕ ಕಾಯ್ದೆ ಉಲ್ಲಂಘನೆ ವಿರುದ್ಧ ಕಠಿಣ ಕ್ರಮ- ಫೀಲ್ಡ್ ತಪಾಸಣೆಗೆ ಮುಂದಾದ ಕಾರ್ಮಿಕ ಸಚಿವಾಲಯ
ರಸ್ತೆ ಬದಿಯ ಪೈಪ್ ಸರಿಪಡಿಸಿದ ಭಾರತೀಯ ಡೆಲಿವರಿ ಯುವಕ – ದುಬೈ ಸರ್ಕಾರದ ಗೌರವ
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ