janadhvani

Kannada Online News Paper

ಸೌದಿ: ವಿದೇಶೀಯರಿಗಾಗಿ ವೈಯಕ್ತಿಕ ಭೇಟಿ ವಿಸಾ- ದೇಶಾದ್ಯಂತ ಮುಕ್ತವಾಗಿ ಪ್ರಯಾಣಿಸಲು ಅವಕಾಶ

ವೈಯಕ್ತಿಕ ಭೇಟಿ ವೀಸಾದಲ್ಲಿ ಉಮ್ರಾ, ಮದೀನಾ ಝಿಯಾರತ್ ನಿರ್ವಹಿಸಬಹುದು, ಐತಿಹಾಸಿಕ ಮತ್ತು ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡಬಹುದು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬಹುದು

ರಿಯಾದ್: ಸೌದಿ ಅರೇಬಿಯಾಕೆ ಆಗಮಿಸಲು ವಿದೇಶಿಯರಿಗೆ ವೈಯಕ್ತಿಕ ಭೇಟಿ ವೀಸಾ (Personal Visit Visa) ವನ್ನು ಪರಿಚಯಿಸಲಾಗಿದೆ. ಸೌದಿ ಅರೇಬಿಯಾಕ್ಕೆ ಭೇಟಿ ನೀಡಲು ಸೌದಿ ನಾಗರಿಕರ ಸ್ನೇಹಿತರು ಮತ್ತು ಪರಿಚಯಸ್ಥರಿಗೆ ವೈಯಕ್ತಿಕ ಭೇಟಿ ವೀಸಾಗಳನ್ನು ನೀಡುವುದಕ್ಕೆ ಸಂಬಂಧಿಸಿದ ವಿವರಗಳನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯವು (The Ministry of Foreign Affairs) ಪ್ರಕಟಿಸಿದೆ.

ವೈಯಕ್ತಿಕ ಭೇಟಿ ವೀಸಾದಲ್ಲಿ ಸೌದಿ ಅರೇಬಿಯಾಕ್ಕೆ ಪ್ರವೇಶಿಸುವವರು ದೇಶಾದ್ಯಂತ ಮುಕ್ತವಾಗಿ ಪ್ರಯಾಣಿಸಬಹುದು, ಉಮ್ರಾ ನಿರ್ವಹಿಸಬಹುದು, ಮದೀನಾ ಝಿಯಾರತ್ ನಿರ್ವಹಿಸಬಹುದು, ಐತಿಹಾಸಿಕ ಮತ್ತು ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡಬಹುದು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬಹುದು. ಸೌದಿ ಪ್ರಜೆಗಳು(Saudi Citizens) ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವೀಸಾ ವೇದಿಕೆಯ(Visa Platform https://visa.mofa.gov.sa) ಮೂಲಕ ವೈಯಕ್ತಿಕ ಭೇಟಿ ವೀಸಾಗಳಿಗೆ ಅರ್ಜಿ ಸಲ್ಲಿಸಬೇಕು.

ಸೌದಿ ಅರೇಬಿಯಾಕ್ಕೆ ಭೇಟಿ ನೀಡಲು ಆಹ್ವಾನಿಸಿದವರಿಗೆ ಸಂಬಂಧಿಸಿದ ಮಾಹಿತಿಯನ್ನು ಒದಗಿಸುವ ಮೂಲಕ ಮತ್ತು ಅಫಿಡವಿಟ್ ಅನ್ನು ಸ್ವೀಕರಿಸುವ ಮೂಲಕ ಅರ್ಜಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದವರಿಗೆ ವೀಸಾಗಳನ್ನು ನೀಡಲಾಗುತ್ತದೆ.

ಇದರ ನಂತರ, ಸೌದಿ ಅರೇಬಿಯಾಕ್ಕೆ ಭೇಟಿ ನೀಡಲು ಆಹ್ವಾನಿಸಲ್ಪಟ್ಟವರು ಪ್ರವೇಶ ವೀಸಾ ಅರ್ಜಿಯನ್ನು(Entry Visa Application) ಭರ್ತಿ ಮಾಡಬೇಕು, ಶುಲ್ಕಗಳು ಮತ್ತು ವೈದ್ಯಕೀಯ ವಿಮೆ ಶುಲ್ಕಗಳನ್ನು ವೀಸಾ ವೇದಿಕೆಯ ಮೂಲಕ ಪಾವತಿಸಬೇಕು ಮತ್ತು ಅರ್ಜಿ ಮತ್ತು ಪಾಸ್‌ಪೋರ್ಟ್ ಅನ್ನು ಸೌದಿ ರಾಯಭಾರ ಕಚೇರಿ ಅಥವಾ ಆಯಾ ದೇಶಗಳಲ್ಲಿನ ದೂತಾವಾಸಕ್ಕೆ ಸಲ್ಲಿಸಬೇಕು. ವೀಸಾವನ್ನು ತಮ್ಮ ಪಾಸ್‌ಪೋರ್ಟ್‌ನಲ್ಲಿ ಸ್ಟ್ಯಾಂಪ್ ಮಾಡಿದ ನಂತರ ದೇಶದ ಎಲ್ಲಾ ವಿಮಾನ ನಿಲ್ದಾಣಗಳು, ಗಡಿ ಪೋಸ್ಟ್‌ಗಳು ಮತ್ತು ಬಂದರುಗಳ ಮೂಲಕ ಸಂದರ್ಶಕರು ಸೌದಿ ಅರೇಬಿಯಾವನ್ನು ಪ್ರವೇಶಿಸಬಹುದು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

error: Content is protected !! Not allowed copy content from janadhvani.com