janadhvani

Kannada Online News Paper

ಜೆಟ್ ಏರ್‌ವೇಸ್ ನಲ್ಲಿ ಉಚಿತವಾಗಿ ಟೆಲಿವಿಷನ್‌ ಕೊಂಡೊಯ್ಯಬಹುದು

ಕುವೈಟ್ ಸಿಟಿ: ಕುವೈಟ್ ನಿಂದ 48 ಇಂಚುಗಳವರೆಗಿನ ಟೆಲಿವಿಷನ್‌ ಗಳನ್ನು ಈಗ ಜೆಟ್ ಏರ್‌ವೇಸ್ ಮುಖಾಂತರ ಉಚಿತವಾಗಿ ಭಾರತಕ್ಕೆ ಕೊಂಡೊಯ್ಯಬಹುದಾಗಿದೆ.ಪ್ರಸ್ತುತ ಕೊಂಡೊಯ್ಯಬೇಕಾದರೆ 19 ದಿನಾರ್‌ಗಳನ್ನು ಪಾವತಿಸ ಬೇಕಾಗಿತ್ತು.

ಕುವೈತ್ ನಿಂದ ಮಂಗಳೂರಿಗೆ ಮತ್ತು ಕೋಝಿಕ್ಕೋಡ್ ವಿಮಾನ ನಿಲ್ದಾಣಗಳಿಗೆ ಸರಕು ಶುಲ್ಕವನ್ನು ಕೂಡ ಸಡಿಲಿಸಲಾಗಿದೆ ಎಂದು ಜೆಟ್ ಏರ್‌ವೇಸ್ ನ ಕುವೈಟ್ ಮ್ಯಾನೇಜರ್ ಬಿಬಿನ್ ಬಾಲಕೃಷ್ಣನ್ ಹೇಳಿದ್ದಾರೆ.

ಎಕಾನಮಿಯಲ್ಲಿ ಕಡಿಮೆ ಪಾವತಿಯ ಟಿಕೆಟ್‌ಗೆ 35 ಕೆಜಿ ಮತ್ತು ಇತರ ಟಿಕೆಟ್‌ಗಳ ಯಾತ್ರಿಕರಿಗೆ 40 ಕೆ.ಜಿ. ಬ್ಯಾಗೇಜ್ ಗೊಂಡೊಯ್ಯಬಹುದಾಗಿದೆ.ಪ್ರಸ್ತುತ, ಎಲ್ಲಾ ಗ್ರಾಹಕರಿಗೆ 30 ಕೆಜಿ ನೀಡಲಾಗಿತ್ತು.

ಹೆಚ್ಚುವರಿ ಬ್ಯಾಗೇಜ್ ದರಗಳನ್ನು ಕೂಡ ಕಡಿಮೆ ಮಾಡಲಾಗಿದೆ.ಪ್ರಸ್ತುತ, ಹೆಚ್ಚುವರಿ ಕಿಲೋ ಒಂದಕ್ಕೆ ಏಳು ದಿನಾರ್‌ಗಳನ್ನು ವಿಧಿಸಲಾಗುತ್ತಿದೆ.

ಹೊಸ ಶುಲ್ಕದ ಅನುಸಾರ ಐದು ಕಿಲೋಗ್ರಾಂಗೆ 11 ದಿನಾರ್ ಗಳು, 10 ಕೆಜಿ ಗೆ 14 ದಿನಾರ್‌ಗಳು 15 ಕೆಜಿ ಗೆ 24 ದಿನಾರ್‌ಗಳು ಮತ್ತು 20 ಕೆಜಿ ಗೆ 28 ದಿನಾರ್ ವಿಧಿಸಲಾಗುತ್ತದೆ.