ವಿಟ್ಲ : ಸುನ್ನೀ ಶಿಕ್ಷಕರ ಒಕ್ಕೂಟ ಸಾಲೆತ್ತೂರು ರೇಂಜ್ ವ್ಯಾಪ್ತಿಯ ಮದ್ರಸ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಲಾ ಸಾಹಿತ್ಯ ಸ್ಪರ್ಧೆ “ಪ್ರತಿಭಾ ಸಂಗಮ”ವು ಬೊಳ್ಮಾರ್ ನಲ್ಲಿ ಸಾಲೆತ್ತೂರು ರೇಂಜ್ ಅಧ್ಯಕ್ಷ ಸಿದ್ದೀಕ್ ಸಅದಿ ಯವರ ಅಧ್ಯಕ್ಷತೆಯಲ್ಲಿ ಜರಗಿತು.
ಸಬ್ ಜೂನಿಯರ್ ಜೂನಿಯರ್, ಸೀನಿಯರ್, ಜನರಲ್ ವಿಭಾಗಗಳ ಕಿರಾಅತ್, ಹಿಫ್ಲ್, ಭಾಷಣ, ಹಾಡು, ಪ್ರಬಂಧ, ಕ್ವಿಝ್, ಸಯನ್ಸ್ ಮೋಡಲ್ ಸೇರಿದಂತೆ 75 ವಿಷಯಗಳಲ್ಲಿ ಸ್ಪರ್ಧೆ ನಡೆಯಿತು. 300 ರಷ್ಟು ಸ್ಪರ್ಧಾರ್ಥಿಗಳು ಭಾಗವಹಿಸಿದ ಪ್ರತಿಭಾ ಸಂಗಮದಲ್ಲಿ ಬಾಳೆಪುಣಿ ಮದ್ರಸ ಚಾಂಪಿಯನ್ ಆಗಿ ಹೊರಹೊಮ್ಮಿತು.ಕಟ್ಟತ್ತಿಲ ಮದ್ರಸ ದ್ವಿತೀಯ,ಬೊಳ್ಮಾರ್ ಮದ್ರಸ ತೃತೀಯ ಸ್ಥಾನವನ್ನು ಪಡೆದುಕೊಂಡಿತು.
ಸಬ್ ಜೂನಿಯರ್ ಕಲಾ ಪ್ರತಿಭೆಯಾಗಿ ಅಬೂಬಕರ್ ಮುಫ್ರಿಷ್ ಬಂಡಮಗೇರು,
ಜೂನಿಯರ್ ಕಲಾ ಪ್ರತಿಭೆಯಾಗಿ ರಹ್ಫಾನ್ ಕಟ್ಟತ್ತಿಲ, ಸೀನಿಯರ್ ಕಲಾ ಪ್ರತಿಭೆಯಾಗಿ ಮುಹಮ್ಮದ್ ಅನೀಶ್ ಶಾಝ್ ಮತ್ತು ಮಿದ್ಲಾಜ್ ಬೊಳ್ಮಾರ್, ಜನರಲ್ ಕಲಾಪ್ರತಿಭೆಯಾಗಿ ಮುಹಮ್ಮದ್ ಅಶ್ರಫ್ ಕಟ್ಟತ್ತಿಲ ಆಯ್ಕೆಯಾದರು.ಬೆಳಗ್ಗೆ ಬೊಳ್ಮಾರ್ ಜಮಾಅತ್ ಅಧ್ಯಕ್ಷ ಅಬ್ದುಲ್ಲ ಹಾಜಿ ಧ್ವಜಾರೋಹಣ ಗೈಯ್ಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಜೆ ನಡೆದ ಸಮಾರೋಪ ಸಮಾರಂಭವನ್ನು ಇಬ್ರಾಹಿಂ ಫೈಝಿ ಕಟ್ಟತ್ತಿಲ ಉದ್ಘಾಟಿಸಿದರು.
ಚಯರ್ಮ್ಯಾನ್ ಮುಹಮ್ಮದ್ ಮಿಸ್ಬಾಹಿ ವಿಜೇತ ತಂಡಗಳಿಗೆ ಟ್ರೋಫಿ ವಿತರಿಸಿದರು. ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ,
ರೇಂಜ್ ಗೌರವಾಧ್ಯಕ್ಷ ಸಯ್ಯಿದ್ ಶರಫುದ್ದೀನ್ ತಂಙಳ್ ನಡಿಬೈಲ್, ರಾಜ್ಯ ಪ್ರತಿಭಾ ಸಂಗಮ ಕನ್ವೀನರ್ ಇಬ್ರಾಹಿಂ ನಈಮಿ, ಜಿಲ್ಲಾ ಪ್ರತಿಭಾ ಸಂಗಮ ಸಮಿತಿ ಚಯರ್ಮ್ಯಾನ್ ಇಬ್ರಾಹಿಂ ಖಲೀಲ್ ಮಾಲಿಕಿ. ಎಸ್ ಜೆಎಂ ಜಿಲ್ಲಾ ನಾಯಕ ಯಅಕೂಬ್ ಲತೀಫಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಉಮರ್ ಹಾಜಿ ಬೊಳ್ಮಾರ್,ಅಬ್ದುಲ್ಲ ಬೊಳ್ಮಾರ್ ರೇಂಜ್ ಮಿಷನರಿ ಉಪಾಧ್ಯಕ್ಷ ರಫೀಕ್ ಸಖಾಫಿ ಬೊಳ್ಮಾರ್ ಝೈನುಲ್ ಆಬಿದೀನ್
ನಈಮಿ ಮುಂತಾದವರು ಉಪಸ್ಥಿತರಿದ್ದರು.
ರೆಂಜ್ ಪ್ರಧಾನ ಕಾರ್ಯದರ್ಶಿ ಹೈದರ್ ಅಶ್ರಫಿ ಕಟ್ಟತ್ತಿಲ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಮುಸ್ತಫಾ ಸಖಾಫಿ ಕೂಡುರಸ್ತೆ ಕೃತಜ್ಞತೆ ಸಲ್ಲಿಸಿದರು.