janadhvani

Kannada Online News Paper

ಮಂಜನಾಡಿ ‘ಅಲ್ ಮದೀನ’ ವಿದ್ಯಾರ್ಥಿಗಳಿಂದ ಮಾದಕ ವ್ಯಸನ ವಿರುದ್ದ ಜಾಗೃತಿ ಯಾತ್ರೆ

ರಾಜ್ಯಾದ್ಯಂತ ಸಂಚರಿಸಿ, ಪಟ್ಟಣಗಳಲ್ಲಿ, ಪ್ರಮುಖ ಕೇಂದ್ರಗಳಲ್ಲಿ ಕರಪತ್ರ ವಿತರಣೆ ಮೂಲಕ ಜನಜಾಗೃತಿ ಕಾರ್ಯಕ್ರಮ

ಮಂಗಳೂರು: ಅಲ್‌ ಮದೀನಾ ಮಂಜನಾಡಿ ಸಂಸ್ಥೆಯಲ್ಲಿ ಕಲಿಯುತ್ತಿರುವ ದ‌ಅ್‌ವಾ ವಿದ್ಯಾರ್ಥಿಗಳು ರಾಜ್ಯಾದ್ಯಂತ ಮಾದಕ ವ್ಯಸನಗಳ ವಿರುದ್ಧ ಸುಮಾರು ಸಾವಿರ ಕಿಲೋಮೀಟರ್ ಸಂಚರಿಸಿ ಹಾಗೂ ಪಟ್ಟಣಗಳಲ್ಲಿ, ಪ್ರಮುಖ ಕೇಂದ್ರಗಳಲ್ಲಿ ಕರಪತ್ರ ವಿತರಣೆ ಮೂಲಕ ಜನಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.ಸಂಸ್ಥೆಯ ಜನರಲ್ ಮ್ಯಾನೇಜರ್ ಅಬ್ದುಲ್ ಖಾದರ್ ಸಖಾಫಿ ಉಸ್ತಾದರ ನಿರ್ದೇಶನದಂತೆ ನಡೆಯುವ ಈ ಅಭಿಯಾನಕ್ಕೆ ದಅವಾ ಕಾಲೇಜು ಪ್ರಾಂಶುಪಾಲರಾದ ಅಬ್ದುಲ್ ಸಲಾಂ ಅಹ್ಸನಿ ರವರ ಸಂಪೂರ್ಣ ಸಹಕಾರದೊಂದಿಗೆ ಅಲ್-ಮದೀನಾ ಕ್ಯಾಂಪಸಿನಿಂದ ಆರಂಭಗೊಂಡು ರಾಜ್ಯದ ರಾಜಧಾನಿಯಲ್ಲಿ ಈ ಯಾತ್ರೆಯು ಸಮಾಪ್ತಿ ಗೊಳ್ಳಲಿದೆ ಎಂದು ವ್ಯವಸ್ಥಾಪಕರು ತಿಳಿಸಿದ್ದಾರೆ.ಸಂಸ್ಥೆಯಲ್ಲಿ ಜರುಗಿದ ಬೃಹತ್ ಹುಬ್ಬುರಸೂಲ್ ಕಾನ್ಫರೆನ್ಸ್ ಕಾರ್ಯಕ್ರಮದ ವೇದಿಕೆಯಲ್ಲಿ ಇದರ ಭಾಗವಾಗಿ ಮಾದಕ ವ್ಯಸನಗಳ ಬಗ್ಗೆ ನೌಫಲ್ ಮರ್ಝೂಖಿ ಭಾಷಣಗೈದರು, ದಅವಾ ಕಾಲೇಜು ವಿದ್ಯಾರ್ಥಿಗಳಿಂದ ಘೋಷವಾಕ್ಯ, ಅನ್ವರ್ ಮರ್ಝೂಖಿ ಮತ್ತು ತಂಡದಿಂದ ಕ್ರಾಂತಿ ಗೀತೆಯು ವೇದಿಕೆಯಲ್ಲಿ ನಡೆಯಿತು.

ಸಂಸ್ಥೆಯ ಪ್ರವೇಶ ದ್ವಾರದಲ್ಲಿ ಮಾದಕ ವ್ಯಸನ ಗಳಿಂದ ಉಂಟಾಗುವ ಪರಿಣಾಮವನ್ನು ವಿವರಿಸುವ ಸೈನ್ಸ್ ಮಾಡಲ್, ಹಾಗೂ ಬಿತ್ತಿ ಪತ್ರಗಳನ್ನು ಬರೆದು ತೂಗು ಹಾಕಿದ್ದು ಸಂದರ್ಶಕರ ಗಮನ ಸೆಳೆಯುತ್ತಿದೆ.

error: Content is protected !! Not allowed copy content from janadhvani.com