janadhvani

Kannada Online News Paper

ಕಿನ್ಯಾ: ಪುಣ್ಯ ಪ್ರವಾದಿ ﷺ ಗೆ ಸಮಾನರಾದ ವ್ಯಕ್ತಿ ಜಗತ್ತಿನಲ್ಲಿಲ್ಲ- ರಫೀಖ್ ಸಅದಿ ಉಸ್ತಾದ್

ನಾಡಿಗೆ ನಲ್ಮೆಯ ಸಂತಸ ತಂದ ಮುತ್ತು ಹಬೀಬರ ಮೀಲಾದ್ ಕಾಲ್ನಡಿಗೆ ಜಾಥಾ

ಕಿನ್ಯಾ: ಜಗತ್ತಿನಲ್ಲಿ ಕಣ್ಮರೆಯಾದ ಅಸಂಖ್ಯಾತ ನಾಯಕರಲ್ಲಿ ಪುಣ್ಯ ಪ್ರವಾದಿ ﷺ ರವರಿಗೆ ಸಮಾನವಾದ ಒಬ್ಬ ವ್ಯಕ್ತಿಯನ್ನು ಕಾಣಲು ಸಾಧ್ಯವಿಲ್ಲ ಎಂದು ಪ್ರಮುಖ ವಾಗ್ಮಿ ಬಹು ಮುಹಮ್ಮದ್ ರಫೀಖ್ ಸಅದಿ ದೇಲಂಪಾಡಿ ಹೇಳಿದರು.ಅವರು, ವಿಶ್ವ ಪ್ರವಾದಿ ﷺ ಯ ಜನ್ಮ ಮಾಸಾಚರಣೆಯ ಪ್ರಯುಕ್ತ SჄS ಹಾಗೂ SSF ಕಿನ್ಯ ಘಟಕದ ವತಿಯಿಂದ ಅ.23 ರಂದು ನಡೆಸಲಾದ ‘ಹುಬ್ಬುರ್ರಸೂಲ್ ಕಾನ್ಫರೆನ್ಸ್’ ನಲ್ಲಿ ಮುಖ್ಯ ಭಾಷಣ ನಡೆಸಿ ಮಾತನಾಡಿದರು. ಪ್ರವಾದಿಯ ಗುಣಗಾನ ಹೇಳುವ ಸಮಾವೇಶ ಎಲ್ಲಕ್ಕಿಂತ ಮಿಗಿಲು ಎಂದ ಅವರು ವಿಶ್ವ ಪ್ರವಾದಿಯ ಜೀವನ ಚರಿತ್ರೆಯನ್ನು ಮನ ಮುಟ್ಟುವಂತೆ ಸಭಿಕರಿಗೆ ವಿವರಿಸಿದರು.ಸಂಜೆ 07:00 ಕ್ಕೆ ಬೆಳರಿಂಗೆ ಗ್ರೌಂಡ್ ನಲ್ಲಿ SჄS ಕಿನ್ಯ ಸೆಂಟರ್,ಮೀಲಾದ್ ಸ್ವಾಗತ ಸಮಿತಿ ಅಧ್ಯಕ್ಷ ಹಾಜಿ ಬಿ.ಎಂ ಇಸ್ಮಾಈಲ್ ಪರಮಾಂಡ ರವರ ಅಧ್ಯಕ್ಷತೆಯಲ್ಲಿ ಹುಬ್ಬುರ್ರಸೂಲ್ ಸಮಾವೇಶ ಜರಗಿತು,ಬುಖಾರಿ ಜುಮುಅ ಮಸ್ಜಿದ್ ಖತೀಬ್ ಅಬೂಬಕರ್ ಸಿದ್ದೀಖ್ ಫಾಳಿಲಿ ಉದ್ಘಾಟಿಸಿ ಮಾತನಾಡಿದರು.ಕಿನ್ಯ ಕೇಂದ್ರ ಜುಮುಅ ಮಸ್ಜಿದ್ ಅಧ್ಯಕ್ಷ ಕೆ.ಸಿ ಇಸ್ಮಾಈಲ್ ಹಾಜಿ,ಕಿನ್ಯ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಅಬ್ದುಲ್ ಹಮೀದ್ ಪಾಲಡಿ,SჄS ಕಿನ್ಯ ಸೆಂಟರ್ ದಅ್’ವಾ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಸಖಾಫಿ ಕಾರ್ಯಕ್ರಮಕ್ಕೆ ಶುಭ ಹಾರೈಸಿ ಮಾತನಾಡಿದರು.ಕಿನ್ಯ ಕೇಂದ್ರ ಜುಮುಅ ಮಸ್ಜಿದ್ ಕೋಶಾಧಿಕಾರಿ ಸಾದುಕುಂಞಿ ಹಾಜಿ ಸಾಗ್ ಬಾಗ್,SჄS ರಾಜ್ಯ ಸಮಿತಿ ನಾಯಕ ಕೆ.ಎಚ್ ಇಸ್ಮಾಈಲ್ ಸಅದಿ,ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ನಾಯಕರಾದ ಇರ್ಫಾನ್ ನೂರಾನಿ,ಆಶಿಖ್ ಮೀಂಪ್ರಿ, ಇರ್ಫಾನ್ ಸಖಾಫಿ,SჄS ದ.ಕ ವೆಸ್ಟ್ ನಾಯಕ ಎಂ.ಕೆ.ಎಂ ಇಸ್ಮಾಈಲ್, ಸೆಂಟರ್ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ. ಎಂ ಇಸ್ಮಾಈಲ್ ಸಾಗ್, ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್ ಅಧ್ಯಕ್ಷ ಬಾವು ಪಡ್ಪು, ಕುರಿಯ ಮುಹಮ್ಮದೀಯ ಮಸ್ಜಿದ್ ಅಧ್ಯಕ್ಷ ಅಬೂಬಕರ್ ಕುರಿಯ, ಫಯಾಝ್ ಕಿನ್ಯ, ಮೀಂಪ್ರಿ ಮಸ್ಜಿದ್ ಅಧ್ಯಕ್ಷ ಅಬ್ಬಾಸ್, ಸುನ್ನೀ ಸಂಘದ ನಾಯಕ ಇ.ಕೆ ಇಬ್ರಾಹೀಂ ಕುಂಞಿ, ಕಿನ್ಯ ರೇಂಜ್ ಪ್ರಧಾನ ಕಾರ್ಯದರ್ಶಿ ಮುಸ್ತಫಾ ಫೈಝಿ ಪಡ್ಪು, SჄS ಕಿನ್ಯ ಸೆಂಟರ್ ಕೋಶಾಧಿಕಾರಿ ಪಿ.ಎಂ ಉಸ್ಮಾನ್ ಝುಹ್ರಿ ಕುರಿಯ, ವಿ.ಎ ಮುಹಮ್ಮದ್ ಮುಸ್ಲಿಯಾರ್ ಕೂಡಾರ, ಹುಸೈನ್ ಹಾಜಿ ಪನೀರ್, ಮುಹಮ್ಮದ್ ಹನೀಫ್ ಪನೀರ್, ಹಸೈನಾರ್ ಹಾಜಿ ಉಕ್ಕುಡ, ನೂರುಲ್ ಉಲಮಾ ಮದ್ರಸ ಮುಖ್ಯ ಶಿಕ್ಷಕ ಅಬ್ದುಲ್ ಅಝೀಝ್ ಸಅದಿ ಮುಂತಾದವರು ಉಪಸ್ಥಿತರಿದ್ದರು.ಸಾಯಂಕಾಲ ನಡೆದ ಮೀಲಾದ್ ಸಂದೇಶ ಕಾಲ್ನಡಿಗೆ ಜಾಥಾವು ಊರಿನಲ್ಲಿ ಹರ್ಷದ ವಾತಾವರಣ ಸೃಷ್ಟಿಸಿತು, ಕಿನ್ಯ ಖುತುಬಿನಗರ ಸುನ್ನೀ ಸೆಂಟರ್ ನಿಂದ ಸಯ್ಯಿದ್ ಶಿಹಾಬುದ್ದೀನ್ ಅಲ್ ಹುಮೈದಿ ತಂಙಳ್ ಅಲ್ ಬುಖಾರಿ ರವರು SჄS ದ.ಕ (ವೆಸ್ಟ್) ಅಧ್ಯಕ್ಷ ಅಶ್ಅರಿಯ್ಯಾ ಮುಹಮ್ಮದ್ ಅಲಿ ಸಖಾಫಿ ರವರಿಗೆ ಧ್ವಜ ಹಸ್ತಾಂತರಿಸಿ ದುಆ ನಡೆಸಿ ರ‌್ಯಾಲಿಗೆ ಚಾಲನೆ ನೀಡಿದರು.ಅತ್ಯಂತ ಆಕರ್ಷಕ ಸ್ಕೌಟ್,ದಫ್ ಪ್ರದರ್ಶನ ದೊಂದಿಗೆ ಮುಂದೆ ಸಾಗಿದ ಜಾಥಾಗೆ ಶೇಖಾ ಮರ್ಕಝ್, ಎಸ್, ವೈ,ಎಸ್ ಹಾಗೂ ಎಸ್ಸೆಸ್ಸೆಫ್ ಬ್ರಾಂಚ್ ಸಮಿತಿ,ಅನ್ಸಾರುಲ್ ಮುಸ್ಲಿಮೀನ್, ಸಿರಾಜ್ ಕಿನ್ಯ,ಫಾರೂಖ್ ಕಿನ್ಯ ನೇತೃತ್ವದ ಕಾಂಗ್ರೆಸ್ ತಂಡ ತಂಪು ಪಾನೀಯ,ಸಿಹಿ ತಿಂಡಿ ಗಳನ್ನು ನೀಡಿ ಬರಮಾಡಿ ಸ್ವೀಕರಿಸಿದರು.ಎಸ್ಸೆಸ್ಸೆಫ್ ಕಿನ್ಯ ಸೆಕ್ಟರ್ ಅಧ್ಯಕ್ಷ ನೌಫಲ್ ಅಹ್ಸನಿ ಕಾರ್ಯಕ್ರಮಕ್ಕೆ ಆಗಮಿಸಿದ ಸರ್ವರಿಗೂ ಸ್ವಾಗತ ಮಾಡಿ ಪ್ರಧಾನ ಕಾರ್ಯದರ್ಶಿ ಬಷೀರ್ ಕೂಡಾರ ಕೊನೆಯಲ್ಲಿ ವಂದಿಸಿದರು.

error: Content is protected !! Not allowed copy content from janadhvani.com