janadhvani

Kannada Online News Paper

KCF ಒಮಾನ್ ಸೊಹಾರ್ ಝೋನ್ ವತಿಯಿಂದ ಮೀಲಾದ್ ಕಾನ್ಫರೆನ್ಸ್ & ಇಹ್ಸಾನ್ ಕನ್ವೆನ್ಶನ್ -2022

ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಒಮಾನ್ ಸೊಹಾರ್ ಝೋನ್ ವತಿಯಿಂದ ಮಾನವೀಯತೆಯ ಮಹಾನಾಯಕ ಎಂಬ ಧ್ಯೇಯ ವಾಕ್ಯದೊಂದಿಗೆ ಬ್ರಹತ್ ಮೀಲಾದ್ ಕಾನ್ಫರೆನ್ಸ್ ಹಾಗೂ ಇಹ್ಸಾನ್ ಕನ್ವೆನ್ಶನ್-2022 ಶುಕ್ರವಾರ ರಾತ್ರಿ ಫಲಜ್ ನ ಫುಡ್ ಸ್ಟುಡಿಯೋ ರೆಸ್ಟೋರೆಂಟ್ ಸಭಾಂಗಣದಲ್ಲಿ ನಡೆಯಿತು.

ಬುರ್ದಾ ಮಜ್ಲಿಸ್ ಮತ್ತು ಮಕ್ಕಳ ಸಾಹಿತ್ಯ ವೇದಿಕೆ ಗೆ ಇಕ್ಬಾಲ್ ಮದನಿ ಚೆನ್ನಾರ್ ರವರು ನೇತೃತ್ವ ವಹಿಸಿದ್ದರು.

KCF ಅಂತರಾಷ್ಟ್ರೀಯ ಸಮಿತಿಯ ಶಿಕ್ಶಣ ವಿಭಾಗದ ಕಾರ್ಯದರ್ಶಿಗಳಾಗ ಸೈಯಿದ್ ಆಬಿದ್ ಅಲ್ ಹೈದ್ರೋಸಿ ತಂಗಳ್ ರವರ ದುಆದೊಂದಿಗೆ ಪ್ರಾರಂಭವಾದ ಸಭಾ ಕಾರ್ಯಕ್ರಮದಲ್ಲಿ ಸೊಹಾರ್ ಝೋನ್ ಅಧ್ಯಕ್ಷರಾದ ಉಮರುಲ್ ಫಾರೂಕ್ ಕುಕ್ಕಾಜೆಯವರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮವನ್ನು ಕೆಸಿಎಫ್ ಒಮಾನ್ ಸಂಘಟನಾ ಅಧ್ಯಕ್ಷ ಉಬೈದುಲ್ಲಾ ಸಖಾಫಿ ಮಿತ್ತೂರು ರವರು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಇಹ್ಸಾನ್ ಕರ್ನಾಟಕದ EO ಆದ ಮುಹಮ್ಮದ್ ಅನ್ವರ್ ಅಸ್ ಅದಿ ಉಸ್ತಾದರು ಮುಖ್ಯ ಪ್ರಭಾಷಣ ಗೈದರು ಹಾಗೂ ಇವರನ್ನು ಕಾರ್ಯಕ್ರಮ ದಲ್ಲಿ ಸನ್ಮಾನಿಸಲಾಯಿತು. ಖ್ಯಾತ ಅರಬೀ ಮದ್ಹ್ ಹಾಡುಗಾರರಾದ ಮಜ್ದಿ ಅಲ್ ಬಲೂಷಿ ಸುಲ್ತಾನತ್ ಓಫ್ ಒಮಾನ್ ಇವರಿಂದ ಅರಬೀ ನಶೀದವು ಕಾರ್ಯಕ್ರಮವನ್ನು ಮೆರಗು ಗೊಳಿಸಿತು.

ಕೆಸಿಎಫ್ ಸೊಹಾರ್ ಝೋನ್ 75 ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಅಂಗವಾಗಿ ಹಮ್ಮಿಕೊಂಡ ದೇಶ ಭಕ್ತಿ ಗೀತೆ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಗಳಿಸಿದವರಿಗೆ ಬಹುಮಾನ ವಿತರಿಸಲಾಯಿತು.
ಕೆಸಿಎಫ್ ಅಂತರಾಷ್ಟ್ರೀಯ ಸಮಿತಿಯ ವಿವಿಧ ನೂತನ ಕಾರ್ಯದರ್ಶಿ ಗಳಾಗಿ ಆಯ್ಕೆಯಾದ ಕೆಸಿಎಫ್ ಒಮಾನಿನ ನಾಯಕರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.
KCF ಸೊಹಾರ್ ಝೋನ್ ಕೊಡಮಾಡುವ KCF ಎಕ್ಸಲೆನ್ಸ್ ಅವಾರ್ಡ್ಸ್ 2022 ಕೆಸಿಎಫ್ ಒಮಾನ್ ಆಡಳಿತ ವಿಭಾಗದ ಅಧ್ಯಕ್ಷ ಸಿದ್ದೀಕ್ ಮಾಂಬ್ಳಿ ಸುಳ್ಯ ಪಡೆದು ಕೊಂಡರು.

ಮುಖ್ಯ ಅತಿಥಿಗಳಾಗಿ KCF ಒಮಾನ್ ಅಧ್ಯಕ್ಷರಾದ ಜನಾಬ್ ಅಯ್ಯೂಬ್ ಕೋಡಿ, KCF ಒಮಾನ್ ಪ್ರಧಾನ ಕಾರ್ಯದರ್ಶಿಗಳಾದ ಸ್ವಾದಿಕ್ ಹಾಜಿ ಸುಳ್ಯ, KCF ಒಮಾನ್ ಕೋಶಾಧಿಕಾರಿ ಆರಿಫ್ ಕೋಡಿ, ಉಮರ್ ಸಖಾಫಿ ಎಡಪ್ಪಾಲ, KCF INC ಸಾಂತ್ವನ ವಿಭಾಗದ ಕಾರ್ಯದರ್ಶಿಗಳಾದ ಇಕ್ಬಾಲ್ ಬೊಳ್ಮಾರ್ ಬರ್ಕ, KCF INC ಇಹ್ಸಾನ್ ವಿಭಾಗದ ಕಾರ್ಯದರ್ಶಿಗಳಾದ ಹಂಝ ಹಾಜಿ ಕನ್ನಂಗಾರ್, ಜನಾಬ್ ಮುಹಮ್ಮದ್ ರಫೀಕ್, ಜನಾಬ್ ರಫೀಕ್ ಚೆನ್ನೈ, KCF ಅಂತರಾಷ್ಟ್ರೀಯ ಕೌನ್ಸಿಲರ್ ಇಬ್ರಾಹೀಂ ಹಾಜಿ ಅತ್ರಾಡಿ, ಇಕ್ಬಾಲ್ ಎರ್ಮಾಳ್, ಇರ್ಫಾನ್ ಕೂರ್ನಡ್ಕ, ಮುಅಲ್ಲಿಮ್ ಹಬೀಬುಲ್ಲಾಹ್ ಅದನಿ, ಸಲೀಮ್ ಮಿಸ್ಬಾಯಿ, ಜಸೀಮ್ ಅಹ್ಮದ್, ಹಾಗೂ ಕೆಸಿಎಫ್ ಒಮಾನ್ ರಾಷ್ಟ್ರೀಯ ನಾಯಕರು, ವಿವಿಧ ಝೋನ್ ನಾಯಕರು, ಸದಸ್ಯರು ಭಾಗವಹಿಸಿದ್ದರು. ಕೆಸಿಎಫ್ ಸೊಹಾರ್ ಝೋನ್ ಕೋಶಾಧಿಕಾರಿ ಜನಾಬ್ ಅಝೀಝ್ ಉಪ್ಪಳ, ಪ್ರದಾನ ಕಾರ್ಯದರ್ಶಿ ಜನಾಬ್ ಮುಬೀನ್ ಜೋಕಟ್ಟೆ,ಹಾಗೂ ಕೆಸಿಎಫ್ ಸೊಹಾರ್ ಝೋನ್ ನಾಯಕರಾದ ಶಫೀಕ್ ಎಲಿಮಲೆ , ಆರಿಫ್ ಮದಕ, ಮಜೀದ್ ಕರೋಪಾಡಿ ಇವರು ಕಾರ್ಯಕ್ರಮಕ್ಕೆ ಸಹಕರಿಸಿದರು. ಸಿದ್ದೀಕ್ ಮಾಂಬ್ಳಿ ಸುಳ್ಯ ಸ್ವಾಗತಿಸಿ ಅಶ್ರಫ್ ಕುತ್ತಾರ್ ವಂದಿಸಿರು. ಕಲಂದರ್ ಬಾವ ಪರಪ್ಪು ಕಾರ್ಯಕ್ರಮ ನಿರೂಪಿಸಿದರು.

error: Content is protected !! Not allowed copy content from janadhvani.com