ದುಬೈ :ಕೆಸಿಎಫ್ ದುಬೈ ನೋರ್ತ್ ಝೋನ್ ವತಿಯಿಂದ ಬೃಹತ್ ಮೀಲಾದ್ ಕಾನ್ಫರೆನ್ಸ್ 16 ಅಕ್ಟೋಬರ್ 2022 ರಂದು ದುಬೈ ಪರ್ಲ್ ಕ್ರಿಕ್ ಹೋಟೆಲ್ ನಲ್ಲಿ ನಡೆಯಲಿದೆ.
ಈ ಕಾರ್ಯಕ್ರಮಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಸಂಯುಕ್ತ ಖಾಝಿ ಖುರ್ರತುಸ್ಸಾದಾತ್ ಫಝಲ್ ಕೋಯಮ್ಮ ತಂಙಳ್ ಕೂರತ್ ಹಾಗೂ ಮುಖ್ಯ ಭಾಷಣಕಾರರಾಗಿ ಅನಸ್ ಸಿದ್ದೀಕಿ ಖಾಮಿಲ್ ಸಖಾಫಿ ಭಾಗವಹಿಸಲಿದ್ದಾರೆ. ಹಾಗೂ ಇನ್ನಿತರ ಉಲಮಾ ಉಮರಾ ನಾಯಕರು ಈ ಕಾರ್ಯಕ್ಕೆ ಆಗಮಿಸಲಿದ್ದಾರೆ ಎಂದು ಸಂಘಟಕರು ಪ್ರತಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮೀಲಾದ್ ಸಮಿತಿಯ ವರ್ಕಿಂಗ್ ಚೇರ್ಮನ್ ನಜೀರ್ ಮುಡಿಪು, ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ಸದಸ್ಯ ಅಬ್ದುಲ್ ಅಝೀಝ್ ಲೇತ್ವಿಫಿ, ದುಬೈ ನಾರ್ತ್ ಝೋನ್ ಪ್ರಧಾನ ಕಾರ್ಯದರ್ಶಿ ನಿಯಾಜ್ ಬಸರ, ಇಹ್ಸಾನ್ ವಿಭಾಗದ ಚೈರ್ಮಾನ್ ಇಬ್ರಾಹಿಂ ಮದನಿ, ಸಂಘಟನಾ ವಿಭಾಗದ ಕಾರ್ಯದರ್ಶಿ ಮುಸ್ತಫ ಮಾಸ್ಟರ್, ಮೀಲಾದ್ ಸ್ವಾಗತ ಸಮಿತಿ ವೈಸ್ ಕನ್ವೀನರ್ ಸಿದ್ದೀಕ್ ಮುಡಿಪು, ಝೋನ್ ಕ್ಯಾಬಿನೆಟ್ ನಾಯಕರಾದ ಮಜೀದ್ ಮಂಜನಾಡಿ, ಬಶೀರ್ ಪಡುಬಿದ್ರಿ, ಹಬೀಬ್ ಸಜಿಪ ಮುಂತಾದರು ಉಪಸ್ಥಿತಿಯಿದ್ದರು.