ದೋಹಾ : ಕರ್ನಾಟಕ ಕಲ್ಚರಲ್ ಫೌಂಡೇಶನ್ – ಕೆಸಿಎಫ್ ಖತ್ತರ್ ರಾಷ್ಟ್ರೀಯ ಸಮಿತಿ ವತಿಯಿಂದ ಪವಿತ್ರ ರಬೀವುಲ್ ಅವ್ವಲ್ ಮಾಸದ ಪ್ರಯುಕ್ತ ಮಹಬ್ಬ ಕಾನ್ಫರೆನ್ಸ್ ಕಾರ್ಯಕ್ರಮವು ದಿನಾಂಕ 07-10-2022 ರಂದು ದೋಹಾದ ಫೀನಿಕ್ಸ್ ಸ್ಕೂಲ್ ಸಭಾಂಗಣದಲ್ಲಿ ನಡೆಯಿತು.

ಮೀಲಾದ್ ಸ್ವಾಗತ ಸಮಿತಿಯ ಅಧ್ಯಕ್ಷರಾದ ಅಂದುಮಾಯಿ ನಾವುಂದ ರವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರವನ್ನು, ಐಸಿಎಫ್ ಖತ್ತರ್ ರಾಷ್ಟ್ರೀಯ ಸಮಿತಿ ಎಜುಕೇಶನ್ ವಿಭಾಗ ಅಧ್ಯಕ್ಷರಾದ ಅಬ್ದುಲ್ ಸಲಾಂ ಹಾಜಿ ಪಾಪಿನಶ್ಶೇರಿ ಕೆ.ಸಿ.ಎಫ್ ನಡೆಸುವ ಸಮಾಜಮುಖಿ ಚಟುವಟಿಕೆಗಳ ಬಗ್ಗೆ ಬಹಳ ಸಂತೋಷ ವ್ಯಕ್ತಪಡಿಸಿದರು.

ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಮುಹಮ್ಮದ್ ಅಝ್ಹರಿ ಪೆರೋಡ್ ರವರು ಪ್ರವಾದಿ (ಸ.ಅ) ರವರ ಜೀವನ ಚರಿತ್ರೆ ಹಾಗೂ ನಾವು ಪ್ರವಾದಿ ಪ್ರೇಮಿಗಳಾಗಿ ಜೀವನದಲ್ಲಿ ಅದನ್ನು ಯಾವ ರೀತಿ ಅಳವಡಿಸಿಕೊಳ್ಳಬೇಕೆಂದು ಸಭಿಕರನ್ನು ಉದ್ದೇಶಿಸಿ ಮಾತನಾಡಿದರು. ವಿಶೇಷ ಆಹ್ವಾನಿತ ವ್ಯಕ್ತಿಗಳಾಗಿ ಆಗಮಿಸಿದ್ದ ಮರ್ಕಝ್ ಖತ್ತರ್ ಚಾಪ್ಟರ್ ಇದರ ಪ್ರಧಾನ ಕಾರ್ಯದರ್ಶಿ ಅಝೀಝ್ ಸಖಾಫಿ ಪಾಲೊಳಿ, ಐಸಿಎಫ್ ಖತರ್ ನ ಪ್ರಧಾನ ಕಾರ್ಯದರ್ಶಿ ಡಾ। ಬಶೀರ್ ಪುತ್ತುಪಾಡಂ, ಆರ್ ಎಸ್ ಸಿ ಖತ್ತರ್ ರಾಷ್ಟ್ರೀಯ ಅಧ್ಯಕ್ಷರಾದ ನೌಫಲ್ ಲತೀಫಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ ಶುಭಹಾರೈಸಿದರು.
ವೇದಿಕೆಯಲ್ಲಿ ಕೆ.ಸಿ.ಎಫ್ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಹನೀಫ್ ಪಾತೂರು, ಮೀಲಾದ್ ಸ್ವಾಗತ ಸಮಿತಿ ಕನ್ವೀನರ್ ಸಾದಿಮ್ ಮೂಳೂರು, ಕೆ.ಸಿ.ಎಫ್ ಅಂತರಾಷ್ಟ್ರೀಯ ಸಮಿತಿ ಅಡ್ಮಿನ್ ವಿಭಾಗ ಚೆರ್ಮಾನ್ ಕಬೀರ್ ದೇರಳಕಟ್ಟೆ ಹಾಗೂ ಹಾಫಿಳ್ ಉಮರುಲ್ ಫಾರೂಖ್ ಎಮ್ಮೆಮ್ಮಾಡು ಕೆ.ಸಿ.ಎಫ್. ದೋಹಾ ಝೋನ್ ನಾಯಕರಾದ ಸಯ್ಯಿದ್ ಅರ್ಶದ್ ಅಲಿ ತಂಙಳ್, ರಾಷ್ಟ್ರೀಯ ಸಮಿತಿ ಅಡ್ಮಿನ್ ಚೇರ್ಮಾನ್ ಸತ್ತಾರ್ ಅಶ್ರಫಿ ಮಠ, ರಾಷ್ಟ್ರೀಯ ಸಮಿತಿ ಕೋಶಾಧಿಕಾರಿ ಮುನೀರ್ ಮಾಗುಂಡಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಭಾಗವಾಗಿ ಕೆ.ಸಿ.ಎಫ್ ಸನ್ನದ್ಧ ಪಡೆ ಐ.ಟೀಂ ಸಮರ್ಪಣೆ ಹಾಗೂ ಇಹ್ಸಾನ್ ಡಾಕ್ಯುಮೆಂಟರಿ ಪ್ರದರ್ಶಿಸಲಾಯಿತು.
ಕೆ.ಸಿ.ಎಫ್. ಅಂತರಾಷ್ಟ್ರೀಯ ಸಮಿತಿ ಅಡ್ಮಿನ್ ವಿಭಾಗದ ಸದಸ್ಯರಾದ ಯೂಸುಫ್ ಸಖಾಫಿ ಅಯ್ಯಂಗೇರಿ ನೇತೃತ್ವದಲ್ಲಿ ಮೌಲಿದ್ ಹಾಗೂ ಸ್ವಲಾತ್ ಮಜ್ಲಿಸ್ ನಡೆಸುವ ಮೂಲಕ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಲಾಯ್ತು. ಆಸಿಫ್ ಅಹ್ಸನಿ ಅನ್ವರಿ ಕೊಡಗು, ಇಸ್ಹಾಖ್ ನಿಝಾಮಿ, ಝಾಕಿರ್ ಚಿಕ್ಕಮಗಳೂರು ಸಂಗಡಿಗರಿಂದ ಬುರ್ದಾ ಹಾಗೂ ದಫ್ ಕಾರ್ಯಕ್ರಮವು ನೆರೆದಿರುವ ಅತಿಥಿಗಳು ಮತ್ತು ಕಾರ್ಯಕರ್ತರಿಗೆ ವಿಶೇಷ ಮನರಂಜನೆಯಾಗಿತ್ತು. ಕೆಸಿಎಫ್ ಖತ್ತರ್ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಫಾರೂಕ್ ಕೃಷ್ಣಾಪುರ ಸ್ವಾಗತಿಸಿದರು. ರಾಷ್ಟ್ರೀಯ ಸಮಿತಿ ಪಬ್ಲಿಶಿಂಗ್ ವಿಭಾಗ ಕಾರ್ಯದರ್ಶಿ ಸಿದ್ದೀಖ್ ಹಂಡುಗೂಳಿ ಧನ್ಯವಾದಗೈದರು. ಮಹ್’ರೂಫ್ ಸುಲ್ತಾನಿ ಕಾರ್ಯಕ್ರಮ ನಿರೂಪಿಸಿದರು.







