ಮಂಗಳೂರು: ಮರ್ಕಝ್ ನೋಲೇಜ್ ಸಿಟಿ ದ.ಕ ಜಿಲ್ಲಾ ಯೋಜನಾ ಸಮಿತಿಯ ಅಧೀನದಲ್ಲಿ ಸರ್ಕಲ್ ಪದಾಧಿಕಾರಿಗಳ ಸಮಾವೇಶ ಜಿಲ್ಲಾಧ್ಯಕ್ಷ ಹಾಫಿಳ್ ಯಾಕೂಬ್ ಸಅದಿ ನಾವೂರು ರವರ ಅಧ್ಯಕ್ಷತೆಯಲ್ಲಿ ಕಣ್ಣೂರು ಸುನ್ನೀ ಸೆಂಟರ್ ನಲ್ಲಿ ನಡೆಯಿತು.
ಎಸ್ ವೈ ಎಸ್ ರಾಜ್ಯಾಧ್ಯಕ್ಷ ಡಾ ಎಂ ಎಸ್ ಎಂ ಝೈನಿ ಕಾಮಿಲ್ ಉದ್ಘಾಟಿಸಿದರು. ಮರ್ಕಝ್ ನೋಲೇಜ್ ಸಿಟಿ ಕರ್ನಾಟಕ ಯೋಜನಾ ಸಮಿತಿಯ ಜನರಲ್ ಕನ್ವೀನರ್ ಎಂ ಪಿ ಎಂ ಅಶ್ರಫ್ ಸಅದಿ ಮಲ್ಲೂರು ಮಾತನಾಡಿದರು. ಮರ್ಕಝ್ ನೋಲೇಜ್ ಸಿಟಿ ಕೋಆರ್ಡಿನೇಟರ್ ಮರ್ಝೂಖ್ ಸಅದಿ ಪಾಪಿನಶ್ಶೇರಿ ಮುಖ್ಯ ಭಾಷಣ ಮಾಡಿದರು.
ರಾಜ್ಯ ಸಮಿತಿ ಕನ್ವೀನರ್ ಕೆ ಎಚ್ ಇಸ್ಮಾಯಿಲ್ ಸಅದಿ ಕಿನ್ಯ ಜಿಲ್ಲಾ ಉಪಾಧ್ಯಕ್ಷ ಬದ್ರುದ್ದೀನ್ ಅಝ್ಹರಿ ಬಡಕಬೈಲು,ಇಬ್ರಾಹಿಮ್ ಖಲೀಲ್ ಮಾಲಿಕಿ ಬೋಳಂತೂರು, ಹನೀಫ್ ಅಲ್ ಮಫಾಝ್ ಮೂಡಬಿದ್ರೆ ,ಹಾಫಿಳ್ ಮಜೀದ್ ಫಾಳಿಲಿ,ಎಸ್ ಎಂ ಬಶೀರ್ ಹಾಜಿ ಮಿತ್ತಬೈಲು,ಅಬ್ದುಲ್ ಸಲಾಮ್ ಮದನಿ ಗುಂಡುಕಲ್ಲು,ಅಬ್ದುಲ್ ಅಝೀಝ್ ಸಖಾಫಿ ಪರಪ್ಪು,ಬಶೀರ್ ಸಾಜ,
ನಜೀಬ್ ಕೈಕಂಬ ,ಇರ್ಷಾದ್ ಹಾಜಿ ಗೂಡಿನಬಳಿ,ಮುಹಮ್ಮದ್ ಸಖಾಫಿ ಸಿಲ್ ಸಿಲಾ ,ಹಸನ್ ಹಾಜಿ ಮುಡಿಪು,ಕೆ ಎಚ್ ಬಾವ ಕಾವೂರು,ಅಸ್ಲಂ ಮಂಚಿ ಹಾಗೂ ಇತರ 13 ಸರ್ಕಲ್ ಗಳ ಪದಾಧಿಕಾರಿಗಳು ಭಾಗವಹಿಸಿದ್ದರು. ಜಿಲ್ಲಾ ಜನರಲ್ ಕನ್ವೀನರ್ ಅಶ್ರಫ್ ಕಿನಾರ ಸ್ವಾಗತಿಸಿ ವಂದಿಸಿದರು.