janadhvani

Kannada Online News Paper

ಇಂದು ಸಾಲೆತ್ತೂರು BH ನಗರದಲ್ಲಿ ಮದನೀಸ್ ಬಂಟ್ವಾಳ ತಾಲೂಕು ವಾರ್ಷಿಕ ಕೌನ್ಸಿಲ್

ಸಾಲೆತ್ತೂರು :ಮದನೀಸ್ ಅಸೋಸಿಯೇಶನ್ ಬಂಟ್ವಾಳ ತಾಲೂಕು ಸಮಿತಿ ಇದರ ವಾರ್ಷಿಕ ಕೌನ್ಸಿಲ್ ಹಾಗೂ ತಾಜುಲ್ ಉಲಮಾ ಅಸ್ಸಯ್ಯಿದ್ ಅಬ್ದುರ್ರಹ್ಮಾನ್ ಅಲ್ ಬುಖಾರಿ ತಂಙಳ್ ಉಸ್ತಾದರ ಉರೂಸಿನ ಪ್ರಚಾರ ಸಭೆ ಇಂದು
(ಸಪ್ಟೆಂಬರ್ 24 ಶನಿವಾರ) ಬೆಳಿಗ್ಗೆ 10:30 ಕ್ಕೆ ಸಾಲೆತ್ತೂರು BH ನಗರ ಸುನ್ನೀ ಮಸ್ಜಿದ್ ನಲ್ಲಿ ನಡೆಯಲಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿ ಎ ಸಲೀಮ್ ಮದನಿ ಬೈರಿಕಟ್ಟೆ ವಹಿಸಲಿಸಲಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಮದನೀಸ್ ವೆಸ್ಟ್ ವಿಭಾಗದಿಂದ ವೀಕ್ಷಕರಾಗಿ ಮುಫತ್ತಿಶ್ ಸಿದ್ದೀಕ್ ಮದನಿ ನಾಟೆಕ್ಕಲ್ ಆಗಮಿಸಲಿದ್ದಾರೆ ಹಾಗೂ ಉರೂಸ್ ಪ್ರಚಾರ ಸಭೆ ಬಗ್ಗೆ ಹಂಝ ಮದನಿ ಮಿತ್ತೂರು ಮಾತನಾಡಲಿದ್ದಾರೆ.
ಎಂದು ಬಂಟ್ವಾಳ ಮದನೀಸ್ ಪ್ರ.ಕಾರ್ಯದರ್ಶಿ ಅಕ್ಬರ್ ಅಲಿ ಮದನಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.