ಕುವೈತ್ ಸಿಟಿ: ರಮಝಾನ್‌ನಲ್ಲಿ ಅನಧಿಕೃತವಾಗಿ ಹಣ ಸಂಗ್ರಹ ಮಾಡುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕುವೈತ್ ಎಚ್ಚರಿಸಿದೆ.
ಒಂಟಿಯಾಗಿ ಅಥವಾ ಒಗ್ಗೂಡಿ ಹಣಸಂಗ್ರಹಿಸುವವರ ಮೇಲ್ವಿಚಾರಣೆಗಾಗಿ ನವೀನ ರೀತಿಯ ಕಾರ್ಯವಿಧಾನವನ್ನು ಜಾರಿಗೊಳಿಸಿರುವುದಾಗಿ ಔಖಾಫ್ ಸಚಿವಾಲಯವು ತಿಳಿಸಿದೆ. ಸೆರೆಹಿಡಿಯಲಾಗುವ ವಲಸಿಗರನ್ನು ಗಡೀಪಾರು ಮಾಡಲಾಗುತ್ತದೆ.
ಜೀವ ಕಾರುಣ್ಯ ಸೇವೆಗಾಗಿ ಕುವೈತ್ ನಲ್ಲಿ ಕಾನೂನುಬದ್ಧ ವ್ಯವಸ್ಥೆಗಳಿವೆ.ಅನುಮತಿ ಇಲ್ಲದ ಹಣ ಸಂಗ್ರಹವನ್ನು ಭಿಕ್ಷಾಟನೆ ಎಂದು ಪರಿಗಣಿಸಲಾಗುವುದು. ಬಿಕ್ಷಾಟನೆಯ ಮೂಲಕ ಕುವೈತ್ ನ ಚಿತ್ರನವನ್ನು ವಿಕಲಗೊಳಿಸುವುದನ್ನು ಕ್ಷಮಿಸಲು ಸಾಧ್ಯವಿಲ್ಲ.ಆದ್ದರಿಂದಲೇ ಅನಧಿಕೃತ ಸಂಗ್ರಹದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಇಂತಹ ಪ್ರಕರಣಗಳಲ್ಲಿ, ಬಂಧಿತರಾಗುವ ಕುವೈತ್ ವ್ಯಕ್ತಿಗಳ ಸಂಪೂರ್ಣ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗುತ್ತದೆ.
ಔಖಾಫ್, ಗೃಹ ಸಚಿವಾಲಯ ಮತ್ತು ಪುರಸಭೆಯು ಕಾನೂನುಬಾಹಿರ ಹಣ ಸಂಗ್ರದದ ವಿರುದ್ಧದ ಕ್ರಮಗಳನ್ನು ಒಪ್ಪಿಕೊಂಡಿವೆ. ಕಾನೂನು ಉಲ್ಲಂಘಿಸುವ ರೀತಿಯಲ್ಲಿ ಹಣ ಸಂಗ್ರಹಿಸುವುದು ಗಂಡು ಬಂದಲ್ಲಿ ,ತಿಳಿಸುವಂತೆ ಮೂಲ ನಿವಾಸಿಗಳು ಮತ್ತು ವಿದೇಶಿಯರಿಗೆ ಔಖಾಫ್ ಸಚಿವಾಲಯ ಮನವಿ ಮಾಡಿದೆ.