ಅಜ್ಮಾನ್ :ಕೆ.ಸಿ.ಎಫ್ ರಾಷ್ಟ್ರೀಯ ಸಮಿತಿ ಯು.ಎ.ಇ ಹಾಗೂ ತುಂಬೆ ಯೂನಿವರ್ಸಿಟಿ ಹಾಸ್ಪಿಟಲ್ ಸಹಭಾಗಿತ್ವದಲ್ಲಿ ತಾಜುಲ್ ಫುಖಹಾಅ್ ಬೇಕಲ್ ಉಸ್ತಾದ್ ಅನುಸ್ಮರಣೆಯ ಪ್ರಯುಕ್ತ ಮೆಗಾ ಆರೋಗ್ಯ ತಪಾಸಣಾ ಶಿಬಿರವು ನಡೆಯಲಿದೆ.
ಶಿಬಿರವು ಸೆಪ್ಟೆಂಬರ್ 18, ಆದಿತ್ಯವಾರ ಬೆಳಿಗ್ಗೆ 9 ರಿಂದ 5 ರ ತನಕ ತುಂಬೆ ಮೆಡಿಸಿಟಿ ಜರ್ಫ್ ಅಜ್ಮಾನ್ ನಲ್ಲಿ ನಡೆಯಲಿದ್ದು, ಹಲವಾರು ಪ್ರಸಿದ್ಧ ವೈದ್ಯರುಗಳು ಈ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ.
ಸಾರ್ವಜನಿಕರು ಇದರ ಸದುಪಯೋಗ ಪಡೆದು ಕೊಳ್ಳಬೇಕೆಂದು ಸಂಘಟಕರು ವಿನಂತಿಸಿದ್ದಾರೆ.








