SDTU ಜಿಲ್ಲಾ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದ ಝಾಕಿರ್ ಉಳ್ಳಾಲ ಹಾಗೂ SDTU ಮಂಗಳೂರು ವಿಧಾನ ಸಭಾ ಕ್ಷೇತ್ರ ಅಧ್ಯಕ್ಷರಾಗಿ ಆಯ್ಕೆಯಾದ ರಹ್ಮಾನ್ ಮುನ್ನೂರು ರವರಿಗೆ SDPI ಮುನ್ನೂರು ಗ್ರಾಮದ ವತಿಯಿಂದ ಸನ್ಮಾನ ಕಾರ್ಯಕ್ರಮ ಜರುಗಿತು.
SDTU ಜಿಲ್ಲಾ ಅಧ್ಯಕ್ಷರಾದ ಝಾಕಿರ್ ಉಳ್ಳಾಲರವರಿಗೆ SDPI ಮದನಿನಗರ ಅಧ್ಯಕ್ಷರಾದ ಝುಬೈರ್ ಮದನಿನಗರರವರು ಶಾಲುಹೊದಿಸಿ, ಹೂಗುಚ್ಚ ನೀಡಿ ಸನ್ಮಾನಿಸಿದರು.SDTU ಮಂಗಳೂರು ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷರಾಗಿ ಆಯ್ಕೆಯಾದ ರಹ್ಮಾನ್ ಮುನ್ನೂರು ರವರಿಗೆ SDPI ಸಂತೋಷ್ ನಗರ ವಾರ್ಡ್ ಅಧ್ಯಕ್ಷರಾದ ಫಾರೂಕ್ ಹಾಗೂ ಉಪಾಧ್ಯಕ್ಷ ಜಬ್ಬಾರ್ ರವರು ಶಾಲು ಹೊದಿಸಿ ಹೂಗುಚ್ಚ ನೀಡಿ ಸನ್ಮಾನಿಸಿದರು.
ಪಕ್ಷ ಚಟುವಟಿಕೆ ಬಗ್ಗೆ ಕ್ಷೇತ್ರ ಅಧ್ಯಕ್ಷರಾದ ಇರ್ಷಾದ್ ಅಜ್ಜಿನಡ್ಕ ರವರು ಹಿತವಚನ ನೀಡಿದರು.ಕ್ಷೇತ್ರ ಕಾರ್ಯದರ್ಶಿ ಝಾಹಿದ್ ಮಲಾರ್ ರವರು ಸನ್ಮಾನ ಸಭೆಯನ್ನುದ್ದೇಶಿಸಿ ಮಾತನಾಡಿದರು.ಸನ್ಮಾನ ಸೀಕರಿಸಿ ಹಿತವಚನ ನೀಡಿದ ಝಾಕಿರ್ ಉಳ್ಳಾಲ ಹಾಗೂ ರಹ್ಮಾನ್ ಮುನ್ನೂರು ರವರು,SDPI ಮುನ್ನೂರು ಗ್ರಾಮ ಸಮಿತಿಗೆ ಧನ್ಯವಾದ ತಿಳಿಸುತ್ತಾ ಕಾರ್ಯಕರ್ತರುನ್ನುದ್ದೇಶಿಸಿ ಹಿತವಚನ ನೀಡಿದರು.
ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ SDPI ಮುನ್ನೂರು ಬ್ಲಾಕ್ ಕಾರ್ಯದರ್ಶಿ ನವಾಝ್ ಕುತ್ತಾರ್,SDTU ಕ್ಷೇತ್ರ ಕಾರ್ಯದರ್ಶಿ ಅಬ್ದುಲ್ಲಾ ಕೆಸಿರೋಡ್,ಮುಸ್ಲಿಂ ಒಕ್ಕೂಟ ಉಳ್ಳಾಲ ಇದರ ಅಧ್ಯಕ್ಷರಾದ ಇಸ್ಮಾಯಿಲ್ ಉಳ್ಳಾಲ, SDPI ಮದನಿನಗರ ಬೂತ್ ಕಾರ್ಯದರ್ಶಿ ಮುನೀರ್ ಉಪಸ್ಥಿತರಿದ್ದರು.ಸಭೆಯಲ್ಲಿ ಮುನ್ನೂರು ಗ್ರಾಮ ಪಂಚಾಯತ್ ಸದಸ್ಯರಾದ ಆರಿಫ್ ಮದನಿನಗರರವರು ಸ್ವಾಗತಿಸಿ ನಿರೂಪಿಸಿದರು. ರಹ್ಮಾನ್ ಮುನ್ನೂರು ರವರು ವಂದಿಸಿದರು.