janadhvani

Kannada Online News Paper

ಶಾರ್ಜಾ: ತಾಜುಲ್ ಉಲಮಾ, ನೂರುಲ್ ಉಲಮಾ ಅನುಸ್ಮರಣೆ- ಸ್ವಾಗತ ಸಮಿತಿ ರಚನೆ

ಶಾರ್ಜಾ: ಜಾಮಿಅ ಸಅದಿಯ್ಯ ಶಾರ್ಜಾ ಸಮಿತಿ ಹಾಗೂ ICF, KCF, RSC ಸಂಘಟನೆಗಳ ನೇತೃತ್ವದಲ್ಲಿ ನವಂಬರ್ 5, 2022 ರಂದು ತಾಜುಲ್ ಉಲಮಾ, ನೂರುಲ್ ಉಲಮಾ ಅನುಸ್ಮರಣೆಯನ್ನು ನಡೆಸಲಾಗುವುದು.

ಸೆಪ್ಟೆಂಬರ್ 1ರಂದು ಸಅದಿಯ್ಯ ಶಾರ್ಜಾ ಸೆಂಟರಿನಲ್ಲಿ ನಡೆದ ಬುರ್ದಾ ಮಜ್ಲಿಸ್ ಬಳಿಕ, ವರ್ಷಂಪ್ರತಿ ಬಹಳ ವಿಜೃಂಭಣೆಯಿಂದ ನಡೆಸಲಾಗುವ ಅನುಸ್ಮರಣೆ ಕಾರ್ಯಕ್ರಮದ ಯಶಸ್ವಿಗಾಗಿ ಸ್ವಾಗತ ಸಮಿತಿಯನ್ನು ರೂಪಿಸಲಾಯಿತು.