ಚಿಕ್ಕಮಗಳೂರು, ಆಗಸ್ಟ್ 15:
ನಗರದ ಪ್ರತಿಷ್ಠಿತ ಸುನ್ನಿ ಶಿಕ್ಷಣ ಸಂಸ್ಥೆ ಜಾಮಿಯಾ ಕಂಝುಲ್ ಈಮಾನ್ ನಲ್ಲಿ
75ನೇ ಸ್ವಾತಂತ್ರ ದಿನಾಚರಣೆಯ ಅಮೃತ ಮಹೋತ್ಸವ ಸಮಾರಂಭ ನಡೆಯಿತು.
ಚಿಕ್ಕಮಗಳೂರು ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷರಾದ ಅಲ್ಹಾಜ್ ಮುಹಮ್ಮದ್ ಶಾಹಿದ್ ರಜ್ವಿ ರವರು ಧ್ವಜಾರಹಣವನ್ನು ನೆರವೇರಿಸಿದರು. ಮದ್ರಸ ವಿದ್ಯಾರ್ಥಿಗಳು ಮತ್ತು ನೆರೆದಿದ್ದ ಸಾರ್ವಜನಿಕರು ರಾಷ್ಟ್ರಗೀತೆಯನ್ನು ಹಾಡುವ ಮೂಲಕ ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಿದರು. ನಂತರ ಮದ್ರಸ ವಿದ್ಯಾರ್ಥಿಗಳು ಡಾಕ್ಟರ್ ಅಲ್ಲಾಮಾ ಇಕ್ಬಾಲ್ ಸಾಬ್ ರವರ ರಾಷ್ಟ್ರಕೃತಿ ಸಾರೆ ಜಹಾನ್ ಸೆ ಅಚ್ಚ ಗಾಯನದ ಮೂಲಕ ರಾಷ್ಟ್ರಪ್ರೇಮ ವನ್ನು ಅರ್ಪಿಸಲಾಯಿತು.
ವೇದಿಕೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಧಾರ್ಮಿಕ ಮುಖಂಡರು ಆಸೀನರಾಗಿದ್ದರು.ಮದ್ರಸದ ಮುಖ್ಯೋಪಾಧ್ಯಾಯರಾದ ಖಾರಿ ಇರ್ಷಾದ್ ರಜಾ ಸ್ವಾಗತಿಸಿದರು.
ಮುಖ್ಯ ಭಾಷಣಕಾರರಾಗಿ ಆಗಮಿಸಿದ ಮೌಲಾನ ಅಬ್ದುಲ್ ಘನಿ ಸಾಬ್ ರವರು ಸ್ವತಂತ್ರ ಹೋರಾಟದಲ್ಲಿ ಪಾಲ್ಗೊಂಡು ಹುತಾತ್ಮರಾದ ಯೋಧರನ್ನು ಸ್ಮರಿಸಿ ವಿದ್ಯಾರ್ಥಿಗಳಿಗೆ ರಾಷ್ಟ್ರಪ್ರೇಮದ ಬಗ್ಗೆ ಮಾರ್ಗದರ್ಶನ ನೀಡಿದರು. ಅಂತಿಮವಾಗಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾದ ಅಲ್ ಹಜ್ ಫೈರೋಜ್ ಅಹಮದ್ ರಜ್ವಿರವರು ಅಭಿನಂದನೆ ಸಲ್ಲಿಸಿದರು. ಸಾರ್ವಜನಿಕರಿಗೆ ಲಘು ಉಪಹಾರ ಮತ್ತು ಸಿಹಿಯನ್ನು ಹಂಚಲಾಯಿತು.
ಈ ಸಮಾರಂಭದಲ್ಲಿ ನಗರಸಭಾ ಸದಸ್ಯರಾದ ಮುನೀರ್,ಕಲಂದರ್, ಮಸೀದಿಗಳ ಮುತವಲ್ಲಿಗಳು ಉಳಾಮಗಳು, ಕರ್ನಾಟಕ ಮುಸ್ಲಿಂ ಜಮಾತ್ ಪ್ರಮುಖರಾದ ಯೂಸುಫ್ ಹಾಜಿ, ಟಿಪ್ಪು ಸುಲ್ತಾನ್ ಮಹಾವೆದಿಕೆಯ ಜಂಶಿದ್ ಖಾನ್,ಧಾರ್ಮಿಕ ಮುಖಂಡರಾದ ಆರಿಫ್ ಅಲಿ ಖಾನ್, ಫಾರೂಖ್ ಅಹಮದ್ ರಜ್ವಿ, ಅಖ್ತರ್ ಹುಸೈನ್ ರಜ್ವಿ, ಜಮೀರ್ ಅಹಮದ್ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಸದಸ್ಯರು, ಹಾಗು ಇನ್ನಿತರೆ ಸಂಘ ಸಂಸ್ಥೆಗಳ ಮುಖಂಡರು ಸಾಮಾಜಿಕ ಕಾರ್ಯಕರ್ತರು,ಬುದ್ದಿಜೀವಿಗಳು ಸಮಾನ ಮನಸ್ಕರು ಭಾಗವಹಿಸಿದ್ದರು ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಲ್ ಹಜ್ ಫೈರೋಜ್ ಅಹಮದ್ ರಜ್ವಿ ರವರು ಪತ್ರಿಕಾ ಪ್ರಕಣೆಯಲ್ಲಿ ತಿಳಿಸಿದ್ದಾರೆ.