janadhvani

Kannada Online News Paper

ಸೌದಿ ಅರೇಬಿಯಾದಲ್ಲಿ ಪೋಲೀಸ್ ಚೆಕ್ ಪೋಸ್ಟ್ ಮೇಲೆ ದಾಳಿ

ರಿಯಾದ್(ಜನಧ್ವನಿ ವಾರ್ತೆ): ಸೌದಿ ಅರೇಬಿಯಾದ ಅಸೀರ್ ಪ್ರಾಂತ್ಯದಲ್ಲಿ ಮೂವರು ದುಷ್ಕರ್ಮಿಗಳ ತಂಡವು ಪೋಲೀಸ್ ಚೆಕ್ ಪೋಸ್ಟ್ ಮೇಲೆ ಗುಂಡಿನ ದಾಳಿ ನಡೆಸಿದ ಪರಿಣಾಮ ನಾಲ್ವರು ಸೌದಿ ಪೋಲೀಸ್ ಅಧಿಕಾರಿಗಳು ಮೃತರಾಗಿ ಇತರ ನಾಲ್ವರು ಗಂಭೀರ ಗಾಯಗೊಂಡಿದ್ದಾರೆ.
ಗುರುವಾರ ತಡ ರಾತ್ರಿ ದಕ್ಷಿಣ ಸೌದಿ ಅರೇಬಿಯಾದ ಅರ್ಖೂಬ್ ರಸ್ತೆಯಲ್ಲಿ ಮಜರಾದ ಹಾಗೂ ಬರೇಖ್ ನಡುವೆಯಿರುವ ಚೆಕ್ ಪೋಸ್ಟ್ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ ಮೂವರು ದುಷ್ಕರ್ಮಿಗಳ ತಂಡವು ನಾಲ್ವರು ಪೋಲೀಸ್ ಅಧಿಕಾರಿಗಳನ್ನು ಕೊಂದು ಹಾಕಿದ್ದು ಇತರ ನಾಲ್ವರು ಅಧಿಕಾರಿಗಳನ್ನು ಗಾಯಗೊಳಿಸಿದ್ದಾರೆ. ಘಟನೆ ನಡೆದ ತಕ್ಷಣ ದುಷ್ಕರ್ಮಿಗಳನ್ನು ಬೆನ್ನಟ್ಟಿದ ಪೋಲೀಸರು ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಓರ್ವ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಪೋಲೀಸರು ಹಾರಿಸಿದ ಗುಂಡು ತಗುಲಿ ಸಾವಿಗೀಡಾಗಿದ್ದಾನೆ ಎಂದು ಸೌದಿ ಆಂತರಿಕ ಸಚಿವಾಲಯವು ತಿಳಿಸಿದೆ.

ಮೂವರು ದುಷ್ಕರ್ಮಿಗಳು ಸೌದಿ ಪ್ರಜೆಗಳಾಗಿದ್ದು ತನಿಖೆ ಮುಂದುವರಿಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.