janadhvani

Kannada Online News Paper

ಚಿಕ್ಕಮಗಳೂರು ಜಿಲ್ಲಾ ವಕ್ಫ್ ಮಂಡಳಿ- ಹರ್ ಘರ್ ತಿರಂಗಾ ಅಭಿಯಾನಕ್ಕೆ ಚಾಲನೆ

ಚಿಕ್ಕಮಗಳೂರು,ಆಗಸ್ಟ್. 12: ಜನಾಬ್ ಅಲ್ ಹಾಜ್ ಮುಹಮ್ಮದ್ ಶಾಹಿದ್ ರಜ್ವಿ ರವರು ಚಿಕ್ಕಮಗಳೂರು ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷರಾಗಿ ಇಂದು ಅಧಿಕಾರ ಸ್ವೀಕರಿಸಿದರು.

ಅಧಿಕಾರ ಸ್ವೀಕರಿಸಿದ ಮೊದಲ ದಿನದ ಪ್ರಾರಂಭದಲ್ಲಿ 75ನೇ ಸ್ವತಂತ್ರ ದಿನಾಚರಣೆಯ ಅಮೃತ ಮಹೋತ್ಸವ ಅಂಗವಾಗಿ ಜಿಲ್ಲಾ ವಕ್ಫ್ ಮಂಡಳಿಯಲ್ಲಿ ಇಂದು ಘರ್ ಘರ್ ತಿರಂಗಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ದಿನಾಂಕ 13/08/2022 ರಂದು ಜಿಲ್ಲಾದ್ಯಂತ ರಾಷ್ಟ್ರಧ್ವಜ ದೊಂದಿಗೆ ವಕ್ಫ್ ಅಧೀನದಲ್ಲಿರುವ ಸಂಸ್ಥೆಗಳಿಗೆ ಭೇಟಿ ನೀಡಲಾಗುವದೆಂದು ತೀರ್ಮಾನ ಕೈಗೊಳ್ಳಲಾಗಿದೆ.

ಈ ಸಂದರ್ಭದಲ್ಲಿ ಜಿಲ್ಲಾ ವಕ್ಫ್ ಸಲಹಾ ಸಮಿತಿ ಉಪಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಅಲ್ ಹಾಜ್ ಫೈರೋಜ್ ಅಹಮದ್ ರಜ್ವೀ, ಇರ್ಫಾನ್ ಬೈಗ್, ಸದಸ್ಯರಾದ ಅಫ್ರೋಜ್ ಕಡೂರು,
ಮೌಲಾನ ಸಾದಿಕ್ ರಜ್ವಿ ಕಡೂರು, ಯೂಸುಫ್ ಹಾಜಿ ಇನ್ನಿತರೆ ಮುಖಂಡರಾದ ಹಾಜಿ ಆರ್ ಎ ಸಲೀಂ ಆರಿಫ್ ಅಲಿ ಖಾನ್ ಇನ್ನಿತರರು ಉಪಸ್ಥತರಿದ್ದರು.