janadhvani

Kannada Online News Paper

ಖತಾರ್: ಹಾರಾಡುವ ವಿಮಾನದಲ್ಲಿ ಇಂಟರ್ನೆಟ್ ಸೇವೆ- ಗಲ್ಫ್ ವಲಯದಲ್ಲೇ ಪ್ರಥಮ ಬಾರಿಗೆ

ದೋಹಾ: ಹಾರಾಡುವ ವಿಮಾನದಲ್ಲಿ ಸಂಪೂರ್ಣ ಅಂತರ್ಜಾಲ ಸೇವೆಯನ್ನು ಲಭ್ಯಗೊಳಿಸಲು ಕಮ್ಯುನಿಕೇಷನ್ಸ್ ರೆಗ್ಯುಲೇಟರಿ ಅಥಾರಿಟಿಯು (ಸಿಆರ್‌ಐ) ಅನುಮತಿ ನೀಡಿದೆ.

ಇದರೊಂದಿಗೆ, ಕತಾರ್ ಏರ್ವೇಸ್ ನಲ್ಲಿ ಪ್ರಯಾಣಿಕರಿಗೆ ಪೂರ್ಣ ಸಮಯ ಇಂಟರ್ನೆಟ್ ಸೇವೆ ಲಭಿಸಲಿದೆ.ಹಿಂದೆ, ಇದು ಸಮುದ್ರ ಮಟ್ಟಕ್ಕಿಂತ ಕನಿಷ್ಠ 3,000 ಮೀಟರ್ ಎತ್ತರದಲ್ಲಿ ಹಾರಾಡುವ ವೇಳೆ ಮಾತ್ರ ಇಂಟರ್ನೆಟ್ ಸೇವೆಗೆ ಅವಕಾಶ ನೀಡಲಾಗಿತ್ತು.

ಈ ತೀರ್ಮಾನದೊಂದಿಗೆ, ವಿಮಾನ ಯಾತ್ರೆಯಲ್ಲಿ ಗೇಟ್ ಟು ಗೇಟ್ ಇಂಟರ್ನೆಟ್‌ ಸಂಪರ್ಕ ನೀಡುವ ಮೆನ ವಲಯದ ಮೊದಲ ದೇಶವಾಗಲಿದೆ ಖತಾರ್.

2017  ನವಂಬರ್ ನಿಂದ 2018  ಜನವರಿ ರವರೆಗೆ, ಇಂಟರ್ನೆಟ್ ಸೇವೆ ಒದಗಿಸುವವರು, ಇತರ ಸಂಬಂಧಿತರು ಮತ್ತು ವಿಮಾನ ಯಾತ್ರಿಕರೊಂದಿಗೆ ಸಂವಹನ ನಡೆಸಿದ ನಂತರ ಸಿಆರ್‌ಐ ಈ ನಿರ್ಧಾರ ಕೈಗೊಂಡಿದೆ.

ಹೊಸ ಪರವಾನಗಿಯ ಪ್ರಕಾರ ಖತರ್‌ನಲ್ಲಿ ನೋಂದಣಿ ಮಾಡಿದ ವಿಮಾನ ನಿರ್ವಾಹಕರಿಗೆ  ಮಾತ್ರ ಇದನ್ನು ನೀಡ ಬಹುದಾಗಿದೆ.

ಪ್ರಯಾಣಿಕರು ವಿಮಾನ ಹತ್ತಿ  ಹೊರಬರುವವರೆಗೂ ಇಂಟರ್ನೆಟ್ ಅನ್ನು ಸಂಪೂರ್ಣವಾಗಿ ಬಳಸಲು ಹೊಸ ತೀರ್ಮಾನದ ಮೂಲಕ ಸಾಧ್ಯವಾಗಲಿದೆ.

ವಿಮಾನದ ಕಾರ್ಯಕ್ಷಮತೆ ಮತ್ತು ಮೊಬೈಲ್ ನೆಟ್ವರ್ಕ್ ಗಳ ಮೇಲೆ ಪರಿಣಾಮ ಬೀರದಂತೆ ಹಾರಾಡುವ ವಿಮಾನದಲ್ಲಿ  ಇಂಟರ್ನೆಟ್‌ ಸೇವೆಗಳನ್ನು ಒದಗಿಸಲು ಆಧುನಿಕ ವ್ಯವಸ್ಥೆಗಳಿವೆ.

ವಲಯದ ಯಾವುದೇ ಕ್ಷೇತ್ರದಲ್ಲಾಗಲಿ ಅತ್ಯುತ್ತಮ ತಂತ್ರಜ್ಞಾನವನ್ನು ಬಳಸಿಕೊಳ್ಳುವಲ್ಲಿ ಖತರ್ ಮುಂಚೂಣಿಯಲ್ಲಿದೆ ಎಂದು ಖತರ್‌ನ ಸಚಿವ ಜಾಸಿಂ ಬಿನ್ ಸೈಫ್ ಅಹ್ಮದ್ ಅಲ್ ಸುಲೈತಿ ಅವರು ಹೇಳಿದರು.

ಆದರೆ, ಸಮುದ್ರ ಮಟ್ಟಕ್ಕಿಂತ 3000 ಮೀಟರ್ಗಿಂತ ವಿಮಾನವು ಕೆಳಗಿರುವಾಗ ಮೊಬೈಲ್ ಫೋನ್ ಕರೆಗಳು, ಎಸ್ಎಂಎಸ್ ಮತ್ತು ಮೊಬೈಲ್ ಡೇಟಾ ಸೇವೆಗಳ ನಿಯಂತ್ರಣ ಮುಂದುವರಿಯಲಿದೆ.

ವಿಮಾನದ ಕಾರ್ಯಕ್ಷಮತೆ ಮತ್ತು ಇತರ ಮೊಬೈಲ್ ನೆಟ್ವರ್ಕ್‌ ಗಳ ಮೇಲೆ ಪರಿಣಾಮ ಬೀರುವುದನ್ನು ತಡೆಯಲು ಈ ಕ್ರಮ ಎನ್ನಲಾಗಿದೆ.ಆದರೆ ವಿಮಾನದ ವೈಫೈ ಮೂಲಕ ಮೊಬೈಲ್ ನಲ್ಲಿ ಇಂಟರ್ನೆಟ್‌ ಲಭ್ಯವಾಗಲಿದೆ.

error: Content is protected !! Not allowed copy content from janadhvani.com