janadhvani

Kannada Online News Paper

ದಮ್ಮಾಮ್ ವಿಮಾನ ನಿಲ್ದಾಣದಲ್ಲಿ 5 ಮಾದರಿಯ ಲಗೇಜ್ ಗೆ ನಿರ್ಬಂಧ

ವಿಮಾನ ನಿಲ್ದಾಣಕ್ಕೆ ತೆರಳುವ ಮುಂಚಿತವಾಗಿ ಬ್ಯಾಗೇಜ್ ನೀತಿಯನ್ನು ಪರಿಶೀಲಿಸುವಂತೆ ಯಾತ್ರಿಕರೊಂದಿಗೆ ವಿನಂತಿಸಲಾಗಿದೆ.

ದಮ್ಮಾಮ್: ಸೌದಿ ಅರೇಬಿಯಾದ ದಮ್ಮಾಮ್‌ನ ಕಿಂಗ್ ಫಹದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡುವ ಪ್ರಯಾಣಿಕರಿಗೆ ಚೆಕ್ಡ್ ಇನ್ ಬ್ಯಾಗೇಜ್‌ಗೆ ಸಂಬಂಧಿಸಿದ ಹೊಸ ನೀತಿಗಳನ್ನು ಪ್ರಕಟಿಸಿದೆ.

ದಮ್ಮಾಮ್ ಏರ್‌ಪೋರ್ಟ್ ಕಂಪನಿ (DACO) ಎಲ್ಲಾ ವಿಮಾನಯಾನ ಕಂಪೆನಿಗಳಿಗೆ ಹೊಸ ನೀತಿಯ ಸುತ್ತೋಲೆಯನ್ನು ಹೊರಡಿಸಿದೆ.ವಿಮಾನ ನಿಲ್ದಾಣಕ್ಕೆ ತೆರಳುವ ಮುಂಚಿತವಾಗಿ ಬ್ಯಾಗೇಜ್ ನೀತಿಯನ್ನು ಪರಿಶೀಲಿಸುವಂತೆ ಯಾತ್ರಿಕರೊಂದಿಗೆ ವಿನಂತಿಸಲಾಗಿದೆ. ಇದು ವಿಮಾನ ನಿಲ್ದಾಣದಲ್ಲಿ ಉಂಟಾಗಬಹುದಾದ ತೊಂದರೆಯನ್ನು ತಡೆಗಟ್ಟಲು ಸಹಕಾರಿ.

ಅನುಮತಿಸಲಾದ ಲಗೇಜ್ ಮಾದರಿ:

* 76 ಸೆಂ.ಮೀ ಉದ್ದ, 51 ಸೆಂ.ಮೀ ಅಗಲ ಮತ್ತು 31 ಸೆಂ.ಮೀ ಎತ್ತರ, ಕನಿಷ್ಠ ಒಂದು ಸಮತಟ್ಟಾದ ಮೇಲ್ಮೈ ಹೊಂದಿರುವ ಬ್ಯಾಗೇಜ್.

* 76 ಸೆಂ.ಮೀ ಉದ್ದ, 51 ಸೆಂ.ಮೀ ಅಗಲ ಮತ್ತು 31 ಸೆಂ.ಮೀ ಎತ್ತರದೊಳಗೆ ಸಮತಟ್ಟಾದ ಮೇಲ್ಮೈ ಹೊಂದಿರುವ ಸರಿಯಾಗಿ ಪ್ಯಾಕ್ ಮಾಡಿರುವ ಪೆಟ್ಟಿಗೆಗಳು.

* ನಿಯಮಿತ ಆಕಾರದ ಸಾಮಾನ್ಯ ಟ್ರಾವೆಲ್ ಬ್ಯಾಗೇಜ್

ಅನುಮತಿಸಲಾಗದ ಬ್ಯಾಗೇಜ್ ಮಾದರಿ:

  • 76 ಸೆಂ.ಮೀ ಗಿಂತ ಹೆಚ್ಚು ಉದ್ದ, 51 ಸೆಂ.ಮೀ ಗಿಂತ ಅಗಲ ಮತ್ತು 31 ಸೆಂ.ಮೀ ಗಿಂತ ಎತ್ತರ ಇರುವ ಬ್ಯಾಗೇಜ್.
  • ದುಂಡಗಿನ ಮತ್ತು ಅನಿಯಮಿತ ಆಕಾರದ ಲಗೇಜ್.
  • ಹಗ್ಗದಿಂದ ಕಟ್ಟಲಾದ ಅನಿಯಮಿತ ಆಕಾರದ ಚೀಲಗಳು.
  • ಉದ್ದವಾದ ಅಥವಾ ಸಡಿಲವಾದ ಪಟ್ಟಿಗಳನ್ನು ಹೊಂದಿರುವ ಲಗೇಜ್.
  • ಝಂಝಂ ಅಥವಾ ಇತರ ಲಿಕ್ವಿಡ್ ಹೊಂದಿರುನ ಲಗೇಜ್.