janadhvani

Kannada Online News Paper

ಕತಾರ್: ಮುಂದಿನ 2 ವಾರ ಭಾರೀ ಉಷ್ಣತೆಯಿಂದ ಕೂಡಿದ ಶುಷ್ಕ ಗಾಳಿ ಬೀಸಲಿದೆ

ಈ ಗಾಳಿಯು ಮನುಷ್ಯರಿಗೆ ಮತ್ತು ಸಸ್ಯಗಳಿಗೆ ಹಾನಿಕಾರಕ
ಈ ವರದಿಯ ಧ್ವನಿಯನ್ನು ಆಲಿಸಿ

ದೋಹಾ: ಕತಾರ್‌ನಲ್ಲಿ ಮುಂದಿನ ಎರಡು ವಾರಗಳ ಕಾಲ ಉಷ್ಣಾಂಶ ಹೆಚ್ಚಾಗಲಿದೆ ಮತ್ತು ಶುಷ್ಕ ಗಾಳಿ ಬೀಸಲಿದೆ ಎಂದು ಕತಾರ್ ಕ್ಯಾಲೆಂಡರ್ ಹೌಸ್ ಎಚ್ಚರಿಸಿದೆ.

ಈ ಗಾಳಿಯನ್ನು ಸ್ಥಳೀಯವಾಗಿ ‘ಸಿಮೂಮ್’ ಎಂದು ಕರೆಯಲಾಗುತ್ತದೆ. ಸಿಮೂಮ್ ಋತುವಿನ ಗಾಳಿಯಿಂದಾಗಿ ಧೂಳಿನಿಂದ ಭಾರೀ ಮೋಡಕವಿದ ವಾತಾವರಣ ಇರಲಿದ್ದು,ದೂರ ದೃಷ್ಟಿ ಕಡಿಮೆಯಾಗಿರಲಿದೆ.

ಇದು ಅರೇಬಿಯನ್ ಪ್ರದೇಶದಲ್ಲಿ ಅತ್ಯಂತ ಪ್ರಸಿದ್ಧವಾದ ಮಾರುತಗಳಲ್ಲಿ ಒಂದಾಗಿದೆ. ಈ ಗಾಳಿಯು ಮನುಷ್ಯರಿಗೆ ಮತ್ತು ಸಸ್ಯಗಳಿಗೆ ಹಾನಿಕಾರಕವಾಗಿದೆ. ಜುಲೈ 29 ರವರೆಗೆ ಎರಡು ವಾರಗಳ ಗಾಳಿ ಇರುತ್ತದೆ ಎಂದು ಕತಾರ್ ಕ್ಯಾಲೆಂಡರ್ ಹೌಸ್ ಎಚ್ಚರಿಸಿದೆ.

error: Content is protected !! Not allowed copy content from janadhvani.com