ಬಂಟ್ವಾಳ: ಎಸ್.ಬಿ.ಎಸ್ ಕುಲಾಲು ಶಾಖೆಯ ವತಿಯಿಂದ ಮದ್ರಸ ವಿದ್ಯಾರ್ಥಿಗಳಿಗೆ ಒಂದು ದಿನದ ಪಿ ಪಿ ಎಸ್ ಶಿಬಿರವು ಇತ್ತೀಚೆಗೆ ಇಲ್ಲಿನ ಬದ್ರಿಯಾ ಮದ್ರಸದಲ್ಲಿ ನಡೆಯಿತು.
‘ಆಧ್ಯಾತ್ಮಿಕತೆಯ ಮೂಲಕ ವ್ಯಕ್ತಿತ್ವ ವಿಕಸನ’ ಎಂಬ ವಿಷಯದಲ್ಲಿ ಅಬ್ದುರಹ್ಮಾನ್ ಸಖಾಫಿ ಅಳಕೆ ಹಾಗೂ ‘ನನ್ನ ಪ್ರಾರ್ಥನೆ’ ಎಂಬ ವಿಷಯದ ಕುರಿತು ಮಸೂದ್ ಸಅದಿ ಮಕ್ಕಳಿಗೆ ಪ್ರಾಯೋಗಿಕ
ತರಗತಿ ಮಂಡಿಸಿದರು.
ಕಾರ್ಯಕ್ರಮದಲ್ಲಿ ಕುಲಾಲು ಜುಮಾ ಮಸೀದಿ ಅಧ್ಯಕ್ಷ ಅಹ್ಮದ್, ಕಾರ್ಯದರ್ಶಿ ಕರೀಂ, ಕೋಶಾದಿಕಾರಿ ಸಾದು ಮೋನು,ಸದಸ್ಯರಾದ ಇಬ್ರಾಹೀಂ, SSF ಕುಲಾಲು ಶಾಖೆಯ ಅಧ್ಯಕ್ಷ ಸಂಶೀರ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಸ್ಥಳೀಯ ಮದ್ರಸ ಅಧ್ಯಾಪಕ ಶಿಹಾಬುದ್ದೀನ್ ಸಅದಿ ಸ್ವಾಗತಿಸಿದರು.
ಎಸ್.ಬಿ.ಎಸ್ ಕುಲಾಲು ಶಾಖೆಯ ಅಧ್ಯಕ್ಷ ತ್ವಾಹಿರ್ ವಂದಿಸಿದರು.