janadhvani

Kannada Online News Paper

ಸೌದಿ ಅರೇಬಿಯಾ ಸಹಿತ ಗಲ್ಫ್ ರಾಷ್ಟ್ರಗಳಲ್ಲಿ ಜುಲೈ 9 ರಂದು ಬಕ್ರೀದ್

ಹಜ್ಜ್‌ನ ಪವಿತ್ರ ದಿನಗಳಲ್ಲಿ ಒಂದಾದ ಅರಫಾ ದಿನವು ಜುಲೈ 8 ಶುಕ್ರವಾರದಂದು

ಮಕ್ಕಾ | ಸೌದಿ ಅರೇಬಿಯಾದಲ್ಲಿ ದುಲ್-ಹಿಜ್ಜ ಚಂದ್ರ ದರ್ಶನವಾಗಿರುವ ಹಿನ್ನೆಲೆಯಲ್ಲಿ ಜೂನ್ 30 ದುಲ್ ಹಿಜ್ಜ ಪ್ರಥಮ ದಿನವಾಗಿದೆ.

ಹಜ್ಜ್‌ನ ಪವಿತ್ರ ದಿನಗಳಲ್ಲಿ ಒಂದಾದ ಅರಫಾ ದಿನವು ಜುಲೈ 8 ಶುಕ್ರವಾರದಂದು ಮತ್ತು ತ್ಯಾಗ ಬಲಿದಾನದ ಹಬ್ಬವಾದ ಬಕ್ರೀದ್ ಜುಲೈ 9 ರಂದು ಆಗಿರಲಿದೆ. ಇದರೊಂದಿಗೆ ಪವಿತ್ರ ಹಜ್ ಯಾತ್ರೆಗೆ ಯಾತ್ರಿಕರ ಹರಿವು ಆರಂಭಗೊಂಡಿದೆ.

ಹಜ್ ಯಾತ್ರಾರ್ಥಿಗಳು ದುಲ್ ಹಜ್ ಏಳರಂದು ಸಂಜೆ ಮಕ್ಕಾದಿಂದ ಡೇರೆಗಳ ನಗರವಾದ ಮಿನಾಗೆ ಹೊರಡುವರು. ದುಲ್ ಹಿಜ್ಜ 13 ರಂದು ಹಜ್ ಕರ್ಮಗಳು ಕೊನೆಗೊಳ್ಳುತ್ತದೆ.

ಯುಎಇ, ಖತಾರ್, ಬಹ್ರೇನ್‌, ಕುವೈತ್ ಹಾಗೂ ಒಮಾನ್ ಮುಂತಾದ ಗಲ್ಫ್ ರಾಷ್ಟ್ರಗಳಲ್ಲಿ ಜುಲೈ 9 ರಂದು ಈದುಲ್ ಅದ್’ಹಾ ಆಚರಿಸಲಾಗುತ್ತದೆ.