ಬೋಳಿಯಾರು:ಇತಿಹಾಸ ಪ್ರಸಿದ್ದ ಜಾರದಗುಡ್ಡೆ ದರ್ಗಾ ಶರೀಫ್ ಮತ್ತು ರಿಫಾಯಿಯ ಜುಮಾ ಮಸೀದಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ನೂರುಲ್ ಹುದಾ ಮದ್ರಸಾದಲ್ಲಿ 2022-23 ನೆ ಸಾಲಿನ ಸಾಹಿತ್ಯ ಸಮಾಜಕ್ಕೆ ಹೊಸ ವಿದ್ಯಾರ್ಥಿ ಸಮಿತಿ ರಚನೆ ಕಾರ್ಯಕ್ರಮವು ಸದರ್ ಉಸ್ತಾದ್ ಫಾರೂಕ್ ಸಅದಿ ತುಂಬೆ ರವರ ಅಧ್ಯಕ್ಷತೆಯಲ್ಲಿ ತಾಜುಲ್ ಉಲಮಾ ಆಡಿಟೋರಿಯಂ ನಲ್ಲಿ ನಡೆಯಿತು .
ಕಾರ್ಯಕ್ರಮವನ್ನು ಜಮಾತ್ ಖತೀಬ್ ಉಸ್ತಾದ್ ಹಾಫಿಲ್ ಮುಈನುದ್ದೀನ್ ರಝಾ ಅಮ್ಜದಿ ಉಳ್ಳಾಲ ರವರು ಉದ್ಘಾಟಿಸಿದರು , ಸಭೆಯಲ್ಲಿ ಒಂದು ವರ್ಷದ ಕಲಾ ಸಾಹಿತ್ಯ ಕಾರ್ಯಕ್ಕೆ ರೂಪುರೇಷಗಳನ್ನು ಮಾಡಲಾಯಿತು.
2022-23 ನೆ ಸಾಲಿನ ಹೊಸ ಸಮಿತಿಯ ನಿರ್ದೇಶಕರಾಗಿ ಖತೀಬ್ ಉಸ್ತಾದ್, ಗೌರವಾಧ್ಯಕ್ಷರಾಗಿ ಸದರ್ ಉಸ್ತಾದ್, ಅದ್ಯಕ್ಷರಾಗಿ ಹುಸೈನ್ ಝಿಯಾ ಫರ್ಹಾನ್, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ರಾಶಿದ್ ಮತ್ತು ಕೋಶಾಧಿಕಾರಿಯಾಗಿ ಹಮೀದ್ ಉಸ್ತಾದ್ ಉರುವಾಳುಪದವು ಹಾಗೂ ಕ್ಯಾಂಪಸ್ ಲೀಡರಾಗಿ ಮುಹಮ್ಮದ್ ಸಬೀದ್ ಎನ್ ಇವರನ್ನೊಳಗೊಂಡ ಸಮಿತಿಯನ್ನು ರಚಿಸಲಾಯಿತು.
ನಂತರ ಗಂಡು ಮತ್ತು ಹೆಣ್ಣು ಮಕ್ಕಳ ಸಾಹಿತ್ಯ ಸಮಾಜಕ್ಕೆ ತಲಾ ಎರಡು ತಂಡಗಳನ್ನು ಮಾಡಿ ಮುಹಮ್ಮದ್ ಸಬೀಬ್, ಮತ್ತು ಮೊಹಮ್ಮದ್ ಶಾಹಿದ್, ನಫೀಸಾ, ಹವ್ವಾ ಸ್ವಾಬಿರ ಇವರನ್ನು ತಂಡಗಳ ಲೀಡರ್ಗಳಾಗಿ ನೇಮಿಸಲಾಯಿತು,
ಕೊನೆಯಲ್ಲಿ ಕಾರ್ಯದರ್ಶಿ ಧನ್ಯವಾದ ಹೇಳಿದರು.