ರಿಯಾದ್: ಸೌದಿ ಅರೇಬಿಯಾದಿಂದ ಹೊರಡುವ ವಿಮಾನಗಳಲ್ಲಿ ಝಮ್ ಝಮ್ ನೀರನ್ನು ಲಗೇಜ್ ನ ಒಳಗಡೆ ಇರಿಸಿ ಸಾಗಿಸುವುದನ್ನು ನಿಷೇಧಿಸಲಾಗಿದೆ. ಸಿವಿಲ್ ಏವಿಯೇಷನ್‌ನ ಜನರಲ್ ಅಥಾರಿಟಿಯು ವಿವಿಧ ದ್ರವಗಳನ್ನು ಸಾಮಾನು ಲಗೇಜ್ ಗಳಲ್ಲಿ ಕೊಂಡೊಯ್ಯುವ ನಿಷೇಧವನ್ನು ಬಿಗಿಗೊಳಿಸಿದೆ. ಉಲ್ಲಂಘಿಸಿದರೆ ವಿಮಾನಯಾನ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ವಿಶೇಷವಾಗಿ ಪ್ಯಾಕೇಜ್ ಮಾಡಿದ ವಸ್ತುಗಳನ್ನು ಮಾತ್ರ ಅನುಮತಿಸಲಾಗುತ್ತದೆ.
ದ್ರವ ಪದಾರ್ಥಗಳನ್ನು ಲಗೇಜ್ ಗಳಲ್ಲಿ ಸಾಗಿಸುವ ನಿರ್ಬಂಧವು ಹಿಂದಿನಿಂದಲೇ ಜಾರಿಯಿದ್ದು, ಆದರೆ ದೂರುಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಿಯಂತ್ರಣ ಬಿಗಿಗೊಳಿಸಲಾಗುತ್ತಿದೆ. ಚೆಕ್-ಇನ್ ಲಗೇಜ್ ಒಳಗೆ ಝಮ್ ಝಮ್ ನೀರನ್ನು ಒಯ್ಯುವುದಕ್ಕೂ ನಿಷೇಧವಿದೆ. ಝಮ್ ಝಮ್ ನೀರನ್ನು ಸಾಗಿಸಲು ಬಯಸುವವರು ಪ್ರತ್ಯೇಕವಾಗಿ ಏರ್ಪ್ಯಾಕ್ ಮಾಡಬೇಕು. ವಿಮಾನದೊಳಗೆ ಲಗೇಜ್ ಗಳನ್ನು ಒಟ್ಟಿಗೆ ಜೋಡಿಸಿ ಇಡುವುದು ವಿಧಾನವಾಗಿದೆ. ಇದರ ಅಡಿಯಲ್ಲಿ, ಲಗೇಜ್‌ನೊಳಗಿನ ದ್ರವ ಬಾಟಲಿಗಳು ಸ್ಫೋಟಗೊಳ್ಳದಂತೆ ತಡೆಯುವುದಾಗಿದೆ ನಿಷೇಧವನ್ನು ಬಿಗಿಗೊಳಿಸುವ ಉದ್ದೇಶ. ವಿಶೇಷವಾಗಿ ಪ್ಯಾಕ್ ಮಾಡಲಾದ ಝಮ್ ಝಮ್ ಸೇರಿದಂತೆ ವಸ್ತುಗಳನ್ನು ವಿಶೇಷ ಕನ್ವೇಯರ್ ಬೆಲ್ಟ್ ಕೌಂಟರ್ ಮೂಲಕ ಸ್ವೀಕರಿಸಲಾಗುತ್ತದೆ.
ದ್ರವಗಳ ಲಗೇಜ್ ಮೇಲಿನ ನಿಷೇಧವು ದೇಶದ ಎಲ್ಲಾ ವಿಮಾನ ನಿಲ್ದಾಣಗಳಿಂದ ಹೊರಡುವ ವಿಮಾನಗಳಿಗೆ ಅನ್ವಯಿಸುತ್ತದೆ. GAKA, ವಿಮಾನಯಾನ ಸಂಸ್ಥೆಗಳಿಗೆ ಕಳುಹಿಸಿದ ಸುತ್ತೋಲೆಯಲ್ಲಿ ಝಮ್ ಝಮ್ ಅನ್ನು ಚೆಕ್-ಇನ್ ಲಗೇಜ್‌ನಲ್ಲಿ ಸಾಗಿಸಲು ಅನುಮತಿಸಬಾರದು ಎಂದು ಉಲ್ಲೇಖಿಸಲಾಗಿದೆ. ನಿರ್ದೇಶನವನ್ನು ಪಾಲಿಸದಿರುವುದು ಸರ್ಕಾರದ ಆದೇಶಗಳ ಉಲ್ಲಂಘನೆಯಾಗಿದ್ದು, ಇದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸುತ್ತೋಲೆಯಲ್ಲಿ ಎಚ್ಚರಿಸಲಾಗಿದೆ. ಜಿದ್ದಾ ಸೇರಿದಂತೆ ಸೌದಿ ಅರೇಬಿಯಾದ ವಿಮಾನ ನಿಲ್ದಾಣಗಳು ಝಮ್ ಝಮ್ ಏರ್‌ಪ್ಯಾಕ್ ಸೌಲಭ್ಯಗಳನ್ನು ಹೊಂದಿವೆ. ಹೊರಗಿನಿಂದಲೂ ಏರ್ಪ್ಯಾಕ್ ಮಾಡಬಹುದಾಗಿದೆ.
















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ