ಉಪ್ಪಿನಂಗಡಿ :2021 -2022 ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕರಾಯ ಪ್ರೌಢಶಾಲಾ ವಿದ್ಯಾರ್ಥಿನಿ .ಕೆ. ಹೆಚ್ ನಫೀಸತ್ ಸಾಜಿದಾ 625 ರಲ್ಲಿ 611 ಅಂಕಗಳನ್ನು ಪಡೆಯುವ ಮೂಲಕ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ.
ಸದ್ರಿ ವಿಧ್ಯಾರ್ಥಿನಿಯು ಪ್ರಮುಖ ವಿದ್ವಾಂಸರೂ ಜಂಇಯ್ಯತುಲ್ ಉಲಮಾ ಮುಶಾವರ ಸದಸ್ಯರೂ ಅಲ್ ಅಝ್ಹರಿಯಾ ಮಂಗಳೂರು ಇದರ ಪ್ರಾಂಶುಪಾಲರೂ ಆದ ಶೈಖುನಾ ಕೆ ಯಂ ಹೈದರ್ ಮದನಿ ಕರಾಯ ಉಸ್ತಾದ್ ಹಾಗೂ ಅವ್ವಮ್ಮ ಹಜ್ಜುಮ್ಮದಂಪತಿಗಳ ಕಿರಿಯ ಪುತ್ರಿ.
ವಿದ್ಯಾರ್ಥಿನಿಯ ಅಮೋಘ ಸಾಧನೆಗೆ ಶಾಲಾ ಅದ್ಯಾಪಕ ವೃಂದ, ಆಡಳಿತ ಸಮಿತಿ, ಕೆ. ಹೆಚ್ ಫ್ಯಾಮಿಲಿ, ಚೊಕ್ಕಬೆಟ್ಟು ಫ್ಯಾಮಿಲಿ ಪ್ರತ್ಯೇಕ ಅಭಿನಂದನೆಯನ್ನು ಸಲ್ಲಿಸಿದೆ.