janadhvani

Kannada Online News Paper

ಇಂದು ಉಡುಪಿಯಲ್ಲಿ ಸಹಬಾಳ್ವೆ ಸಂಸ್ಥೆಯಿಂದ ರಾಜ್ಯ ಮಟ್ಟದ ಬೃಹತ್ ಸಾಮರಸ್ಯ ಸಭೆ

ನಾಡಿನ ಸೌಹಾರ್ಧ ಸಾರುವ ಅನೇಕ ಟ್ಯಾಬ್ಲೋ, ಸ್ತಬ್ಧ ಚಿತ್ರಗಳು, ಸಾಂಸ್ಕೃತಿಕ ದೃಶ್ಯಗಳ ಅನಾವರಣ ನಡೆಯಲಿದೆ

ಮಂಗಳೂರು: ಉಡುಪಿ ಜಿಲ್ಲಾ ಕೇಂದ್ರಿತವಾದ, ಹಲವಾರು ವರ್ಷದಿಂದ ಸಾಮರಸ್ಯ, ಸಹಿಷ್ಣುತೆ ಬಾತೃತ್ವದ ಉದ್ದೇಶದಿಂದ ಕಾರ್ಯಾಚರಿಸುತ್ತಿರುವ ಸಹಬಾಳ್ವೆ ಸಂಸ್ಥೆಯು,ರಾಜ್ಯಮಟ್ಟದ ರೈತ ಸಂಘಟನೆಗಳು ಮತ್ತು ಇತರ ಸಮಾನ ಮನಸ್ಕ ಸಂಘಟನೆಗಳ ಪ್ರಾಯೋಜಕತ್ವದಲ್ಲಿ ಇಂದು ತಾರೀಕು 14 ರಂದು ಅಪರಾಹ್ನ 2.00 ಘಂಟೆ ಯಿಂದ ಉಡುಪಿಯಲ್ಲಿ ಬೃಹತ್ ಸಾಮರಸ್ಯ ನಡೆ ರ್ಯಾಲಿ ಮತ್ತು ಸೌಹಾರ್ಧ ವೇದಿಕಾ ಕಾರ್ಯಕ್ರಮ ನಡೆಸಲಿದೆ.

ರಾಜ್ಯದಲ್ಲಿ ಬದಲಾದ ರಾಜಕೀಯ ಬೆಳವಣಿಗೆಗಳಿಂದಾಗಿ ಮತೀಯ ವಿದ್ವೇಶ ಘಟನೆಗಳು ವ್ಯವಸ್ಥಿತವಾಗಿ ನಡೆದು, ರಾಜ್ಯದಲ್ಲಿ ಅಲ್ಪ ಸಂಖ್ಯಾತ ಸಮುದಾಯಕ್ಕೆ ನಿರಂತರ ಅಸಹಿಷ್ಣುತೆ, ಅಬಧ್ರತೆ ಮತ್ತು ಅರಾಜಕತೆ ಸೃಷ್ಟಿಯಾಗಿ ಆ ಮೂಲಕ ಉಡುಪಿಯಲ್ಲಿ ಹಿಜಾಬ್, ಹಲಾಲ್, ವ್ಯವಾಹರ ನಿಷೇಧ, ಆಝಾನ್ ಮುಂತಾದ ಧಾರ್ಮಿಕ ಸಂಕೇತಗಳ ಮೇಲೆ ನಿರಂತರ ದಾಳಿ ಸಂಭವಿಸಿದ ಕಾರಣದಿಂದಾಗಿ ಉಡುಪಿ ಜಿಲ್ಲೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗೇಡು ಸಂಭವಿಸುವಂತಹ ಪರಿಸ್ಥಿತಿ ಬಂದು ಒದಗಿತು. 8% ಮುಸ್ಲಿಮ್ ಜನಸಂಖ್ಯೆ ಇರುವ ಉಡುಪಿ ಜಿಲ್ಲೆಯ ಅಷ್ಟೂ ಜನರು ಜಾಗತಿಕವಾಗಿ ಹಿಜಾಬ್ ಘಟನೆಯ ಸಂತ್ರಸ್ತ ರಾಗುವ ಸ್ಥಿತಿ ಬಂದಿತ್ತು.

ಈ ಹಿನ್ನೆಲೆಯಲ್ಲಿ ಜಿಲ್ಲೆಯ ಮುಸ್ಲಿಮರು ಅಂದು ಹಿಜಾಬ್ ಸಮಸ್ಯೆಯನ್ನು ಸೌಹಾರ್ಧಯುತವಾಗಿ ಬಗೆ ಹರಿಸಲು ಗರಿಷ್ಟ ಪ್ರಯತ್ನದೊಂದಿಗೆ ಪ್ರಯತ್ನಿಸಿದ್ದರು ಮತ್ತು ಈ ಘಟನೆ ಉತ್ತರ ಭಾರತದ ರಾಜಕೀಯ ಉದ್ದೇಶಕ್ಕಾಗಿ ಬಳಕೆಯಾಗಿತ್ತು.

ಆದುದರಿಂದ ಜಿಲ್ಲೆಯ ಪ್ರಮುಖ ಸಮಾನ ಮನಸ್ಕರ ಸಂಘಟನೆಯಾದ ಸಹಬಾಳ್ವೆ ಸಂಸ್ಥೆಯು ರಾಜ್ಯ ಮಟ್ಟದ ರೈತ ಸಂಘಟನೆಗಳೊಂದಿಗೆ ಚರ್ಚಿಸಿ ಉಡುಪಿಯಲ್ಲಿ ಬೃಹತ್ ಸಾಮರಸ್ಯ ನಡೆ ಜಾಥಾ ಮತ್ತು ಸಭಾ ಕಾರ್ಯಕ್ರಮ ಆಯೋಜಿಸಿದೆ.
ಇಂದು ನಡೆಯುವ ಈ ಕಾರ್ಯಕ್ರಮದಲ್ಲಿ ರಾಜ್ಯದ ಪ್ರಮುಖ ಧಾರ್ಮಿಕ ಮುಖಂಡರು ಭಾಗವಿಸಲಿದ್ದಾರೆ. ಅದೇ ರೀತಿಯಲ್ಲಿ ರೈತ ಹೋರಾಟಗಾರರೂ, ಮಾನವ ಹಕ್ಕು ಕಾರ್ಯಕರ್ತರು, ಸಾಹಿತಿಗಳು, ಚಿಂತಕರು, ಕಲಾವಿದರು ಬೃಹತ್ ಸಂಖ್ಯೆಯಲ್ಲಿ ಸೇರುವ ಸಾದ್ಯತೆ ಇದೆ.

ನಾಡಿನ ಸೌಹಾರ್ಧ ಸಾರುವ ಅನೇಕ ಟ್ಯಾಬ್ಲೋ, ಸ್ತಬ್ಧ ಚಿತ್ರಗಳು, ಸಾಂಸ್ಕೃತಿಕ ದೃಶ್ಯಗಳ ಅನಾವರಣ ನಡೆಯಲಿದೆ. ವಿಶೇಷ ಅತಿಥಿಗಳಾಗಿ ರಾಷ್ಟ್ರ ಮಟ್ಟದ ಮಾನವ ಹಕ್ಕುಗಳ ಹೋರಾಟಗಾರರಾದ ಶ್ರೀ ಯೋಗೇಂದ್ರ ಯಾದವ್ , ಕ್ರೈಸ್ತ ಸಂಘಟನೆಗಳ ಮುಖ್ಯಸ್ಥರಾದ ಡಾಕ್ಟರ್ ರೊನಾಲ್ಡ್ ಕೊಲಾಸೋ, ನಿವೃತ್ತ ಐ. ಎ. ಎಸ್ ಅಧಿಕಾರಿ ಶಶಿಕಾಂತ್ ಸೆಂತಿಲ್ ಭಾಗವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಮಾವಳ್ಳಿ ಶಂಕರ, ಆರ್.ಮೋಹನ್ ರಾಜ್, ಎಚ್ ಆರ್ ಬಸವ ರಾಜಪ್ಪ,ಚಾಮರಸ ಮಾಲಿ ಪಾಟೀಲ್, ಚುಕ್ಕಿ ನಂಜುಂಡ ಸ್ವಾಮಿ, ಕೆ. ನೀಲಾ, ಡಾಕ್ಟರ್ ಬೇಳಗಾಮಿ ಮೊಹಮ್ಮದ್ ಸಹೀದ್, ಸಬೀಹಾ ಫಾತಿಮಾ, ನಜ್ಮಾ ಚಿಕ್ಕ ನೇರಳೆ ಇವರು ಭಾಗವಹಿಸಲಿದ್ದಾರೆ.

ಈ ಸಾಮರಸ್ಯ ನಡೆಯಲ್ಲಿ ಶ್ರೀ ಗುರು ಬಸವ ಪಟ್ಟ ದೇವರು, ಸುಘುಣೆಂದ್ರ ಸ್ವಾಮೀಜಿ, ಬಹು. ಝೈನುಲ್ ಉಲಮಾ ಎಂ. ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ವರ್ಗೀಸ್ ಮಾರ್ ಮಕರಿಯೋಸ್, ಡಾ. ಮಾತೆ ಬಸವಾಂಜಾಲಿ ದೇವಿ, ಶ್ರೀ ಬಸವ ಪ್ರಕಾಶ್ ಸ್ವಾಮೀಜಿ, ಭಂತೆ ಮಾತೆ ಮೈತ್ರಿ, ಶ್ರೀ ಪ್ರಣವಾನಂದ ಸ್ವಾಮೀಜಿ, ಡಾ. ಎಂ. ಎಸ್. ಎಂ. ಅಬ್ದುಲ್ ರಶೀದ್ ಸಖಾಫಿ ಝೈನಿ ಕಾಮಿಲ್. ಡಾ. ಹರ್ಬರ್ಟ್ ಎಂ. ವಾಟ್ಸನ್ ,ಮೌಲಾನ ಯು. ಕೆ.ಅಬ್ದುಲ್ ಅಝೀಝ್ ದಾರಿಮಿ ಚೊಕ್ಕ ಬೆಟ್ಟು, ಫಾದರ್ ಚೇತನ್ ಲೋಬೋ, ಜ್ಞಾನಿ ಬಾಲರಾಜ್ ಸಿಂಗ್ ಮಣಿಪಾಲ, ಮುಂತಾದ ಪ್ರಮುಖರು ಭಾಗವಹಿಸಲಿದ್ದಾರೆ.

ಈ ಸಹಬಾಳ್ವೆ ಸಾಮರಸ್ಯ ನಡೆ ಕಾರ್ಯಕ್ರಮದಲ್ಲಿ ಸರ್ವ ಶಾಂತಿ ಪ್ರಿಯ , ಪ್ರಜಾ ಸತ್ತಾತ್ಮಕ ಚಿಂತನಾ ಪ್ರಿಯ, ಮತೇತರ ಜಾತ್ಯಾತೀತ ವ್ಯವಸ್ಥೆಯಲ್ಲಿ ನಂಬಿಕೆ ಇರುವ ಸರ್ವರೂ ಜಾತಿ ಭೇದ ಭಾವ ವಿಲ್ಲದೆ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಬೇಕೆಂದು ಆಯೋಜಕ ಪ್ರಮುಖರಾದ ರಾಜ್ಯ ಕೋಮು ಸೌಹಾರ್ಧ ವೇದಿಕೆ ಅಧ್ಯಕ್ಷರಾದ ಶ್ರೀ ಕೆ.ಎಲ್.ಅಶೋಕ್, ಯಾಸೀನ್ ಮಲ್ಪೆ ಮುಸ್ಲಿಮ್ ಒಕ್ಕೂಟ ಉಡುಪಿ, ಕೆ. ಫಣಿರಾಜ್ ಸಹಬಾಳ್ವೆ ಉಡುಪಿ, ಯೂಸುಫ್ ಕುಂಞ, ಸುಂದರ ಮಾಸ್ಟರ್, ನೂರ್ ಶ್ರೀಧರ್,ಹುಸೇನ್ ಕೋಡಿ ಬೆಂಗ್ರೆ ರವರು ವಿನಂತಿಸಿದ್ದಾರೆ.