janadhvani

Kannada Online News Paper

ತ್ವೈಬಾ ಎಜ್ಯುಕೇಶನ್ ಸೆಂಟರ್ ಈಶ್ವರಮಂಗಳ: ಅಬುಧಾಬಿ ಸಮಿತಿಯ ಅಧ್ಯಕ್ಷರಾಗಿ ಎಂ.ಎ.ಕುಂಞಿ ಪುನರಾಯ್ಕೆ

ಈಶ್ವರಮಂಗಳದ ಹೃದಯ ಭಾಗದಲ್ಲಿ ತಲೆ ಎತ್ತಿ ನಿಂತಿರುವ ತ್ವೈಬಾ ಎಜ್ಯುಕೇಶನ್ ಸೆಂಟರ್ ಇದರ ಅಬುಧಾಬಿ ಘಟಕದ ವಾರ್ಷಿಕ ಮಹಾ ಸಭೆಯು ದಿನಾಂಕ 24-04-2022 ಆದಿತ್ಯವಾರ ತರಾವೀಹ್ ನಮಾಝಿ ನ ಬಳಿಕ ಬಹು ಅಬ್ದುಲ್ ಹಮೀದ್ ಹಮೀದ್ ಸ‍ಅದಿ ಉಸ್ತಾದರವರ ನಿವಾಸದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ತ್ವೈಬಾ ಅಬುಧಾಬಿಯ ಅಧ್ಯಕ್ಷರಾದ ಬಹು ಎಂ.ಎ. ಮುಹಮ್ಮದ್ ಕುಂಞಿ, ತ್ವೈಬಾ ಸೆಂಟರ್ ಈವರೆಗೆ ನಡೆದು ಬಂದ ಹಾದಿಯನ್ನು ವಿವರವಾಗಿ ವಿವರಿಸಿದರು.

ಬಹು ಅಬ್ದುಲ್ ಹಮೀದ್ ಸ‍ಅದಿ ಈಶ್ವರಮಂಗಳ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಊರಿನಿಂದ ತ್ವೈಬಾ ಪ್ರಚರಣಾರ್ತ ಯು.ಎ.ಇ. ಪ್ರವಾಸದಲ್ಲಿರುವ ತ್ವೈಬಾ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಬಹು ಬಹು ಅಬ್ದುಲ್ ಅಝೀಜ್ ಮಿಸ್ಬಾಹಿ, ತ್ವೈಬಾ ಸೆಂಟರ್ ನ ಈಗಿನ ಸ್ಥಿತಿಗತಿಗಳ ಕುರಿತು ವಿವರವಾಗಿ ತ್ವೈಬಾ ಕಾರ್ಯಕರ್ತರಿಗೆ ಭೋದಿಸಿದರು.

ನೂತನ ಸಮಿತಿಯ ಅಧ್ಯಕ್ಷರಾಗಿ ಎಂ.ಎ.ಮುಹಮ್ಮದ್ ಕುಂಞಿ ಈಶ್ವರಮಂಗಳ, ಪ್ರಧಾನ ಕಾರ್ಯದರ್ಶಿಯಾಗಿ ಸಿದ್ದಿಕ್ ಕನ್ನಡ್ಕ, ಕೋಶಾಧಿಕಾರಿಯಾಗಿ ಅನ್ವರ್ ಮೀನಾವು, ಸಂಘಟನಾ ಕಾರ್ಯದರ್ಶಿಗಳಾಗಿ ಶರೀಫ್.ಜಿ.ಕೆ. ಯವರನ್ನು ಆರಿಸಲಾಯಿತು.

ಸಲಹೆಗಾರರಾಗಿ ಬಹು ಹಮೀದ್ ಸ‍ಅದಿ ಈಶ್ವರಮಂಗಲ, ಪಿ.ಎಮ್. ಅಬ್ದುಲ್ ಹಮೀದ್, ಮುಹಮ್ಮದ್ ಕುಂಞಿ ಸಖಾಫಿ, ಉಪಾಧ್ಯಕ್ಷರುಗಳಾಗಿ ಲತೀಫ್ ಕನ್ನಡ್ಕ, ಶರಫುದ್ದೀನ್ ಅಡೂರ್, ಜೊತೆ ಕಾರ್ಯದರ್ಶಿಯಾಗಿ ಉಮ್ಮರ್ ಎಂ.ಇ. ಹಾಗೂ 11 ಮಂದಿ ಕಾರ್ಯಕಾರೀ ಸಮಿತಿಯನ್ನು ಆರಿಸಲಾಯಿತು.

ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ಸ್ವಾಗತಿಸಿ ಕೊನೆಯಲ್ಲಿ ಧನ್ಯವಾದ ಸಲ್ಲಿಸಿದರು.