janadhvani

Kannada Online News Paper

ಸೌದಿ: ಖಾಸಗಿ ವಲಯಗಳಿಗೆ ನಾಲ್ಕು ದಿನಗಳ ಈದ್ ರಜೆ ಘೋಷಣೆ

ರಿಯಾದ್: ಸೌದಿ ಅರೇಬಿಯಾ ಖಾಸಗಿ ವಲಯಕ್ಕೆ ಈದ್ ಉಲ್ ಫಿತರ್ ರಜೆಯನ್ನು ಘೋಷಿಸಿದೆ. ಖಾಸಗಿ ವಲಯಕ್ಕೆ ನಾಲ್ಕು ದಿನಗಳ ರಜೆ ಘೋಷಿಸಲಾಗಿದೆ.

ಭಾನುವಾರ, ಮೇ 1 ರಿಂದ ಮೇ 4 ರವರೆಗೆ ರಜೆ ಘೋಷಿಸಲಾಗಿದೆ. ಏಪ್ರಿಲ್ 30 (ರಂಜಾನ್ 29) ಕೊನೆಯ ಕೆಲಸದ ದಿನವಾಗಿರುತ್ತದೆ. ರಜಾದಿನಗಳ ನಂತರ ಮೇ 5 ರಂದು ಕಚೇರಿಗಳು ಮತ್ತು ಸಂಸ್ಥೆಗಳು ಪುನರಾರಂಭಗೊಳ್ಳಲಿವೆ ಎಂದು ಮಾನವ ಸಂಪನ್ಮೂಲ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವಾಲಯ ಪ್ರಕಟಿಸಿದೆ.