janadhvani

Kannada Online News Paper

ಸವರ್ಣೀಯರ ಪಿತೂರಿಗೆ ಬಲಿಯಾಗದಿರಿ- ಕೆ.ಅಶ್ರಫ್,ಮುಸ್ಲಿಮ್ ಒಕ್ಕೂಟ

ಸಂಯಮ, ಕಾನೂನು ಮತ್ತು ಪ್ರಜಾ ಸತ್ತಾತ್ಮಕ ನಡೆಯನ್ನು ಮಾತ್ರ ಪಾಲಿಸಿ
ಈ ವರದಿಯ ಧ್ವನಿಯನ್ನು ಆಲಿಸಿ

ಮಂಗಳೂರು: ಸರಕಾರ ತನ್ನ ಸಂಪೂರ್ಣ ವಿಫಲತೆಯನ್ನು ಮರೆಮಾಚಲು, ರಾಜ್ಯದ ಮೂಲ ನಿವಾಸಿಗಳ ಆಡಳಿತ ವಿರೋಧಿ ನಡೆಯನ್ನು ವಿಫಲ ಗೊಳಿಸಲು, ಮತೀಯ ಉದ್ವಿಗ್ನತೆ ಯನ್ನು ಪರಾಕಾಷ್ಠೆಗೆ ತಂದು, ಆ ಮೂಲಕ ಈ ರಾಜ್ಯದ ದಲಿತ, ಹಿಂದುಳಿದ ವರ್ಗ, ಬುಡಕಟ್ಟು ಜನರನ್ನು ಪ್ರಚೋದಿಸುತ್ತಿದೆ.

ಧಾರ್ಮಿಕ ಹಬ್ಬಗಳ ನೆಪದಲ್ಲಿ, ಮಸೀದಿ ಆಝಾನ್ ವಿರುದ್ಧ ಈ ಮುಗ್ದ ಜನರನ್ನು ಚೂ ಬಿಟ್ಟು, ಆ ಮೂಲಕ ಮಸೀದಿಗಳಲ್ಲಿ ದ್ವಜ ಸ್ಥಾಪನೆ ಗೊಳಿಸಿ, ಮುಸ್ಲಿಮರು ಪ್ರಚೋದನೆ ಹೊಂದುವಂತೆ ಮಾಡಿ, ಕಾನೂನು ಕೈಗತ್ತಿ ಕೊಳ್ಳುವ ಸ್ಪಷ್ಟ ಷಡ್ಯಂತ್ರವನ್ನು ಈ ನೆಲದ ಸವರ್ಣೀಯ ಮೈಕ್ರೋ ಮೈನಾರಿಟಿ ದುಷ್ಕರ್ಮಿಗಳು ಮಾಡುತ್ತಿದ್ದಾರೆ ಎಂದು ಈ ನೆಲದ ಮುಸ್ಲಿಮರು ಮತ್ತು ಮುಸ್ಲಿಮೇತರ ಜನತೆ ಅರಿಯಬೇಕು.

ಬಸವಣ್ಣ, ಸ್ವಾಮಿ ವಿವೇಕಾನಂದ, ಟಿಪ್ಪು ಸುಲ್ತಾನ್, ಬ್ರಹ್ಮ ಶ್ರೀ ನಾರಾಯಣ ಗುರು ಸ್ವಾಮಿ, ನಿತ್ಯಾನಂದ ಸ್ವಾಮಿ, ಉಳ್ಳಾಲ ಶ್ರೀನಿವಾಸ ಮಲ್ಯ, ಮಂಜೇಶ್ವರ ಗೋವಿಂದ ಪೈ, ಕಯ್ಯಾರ ಕಿಞ್ಞಣ್ಣ ರೈ, ಬೀ. ಎ. ಮೊಯಿದಿನ್, ಮುಂತಾದ ಸಾಮಾಜಿಕ ನಾಯಕರು ಈ ಜನಾಂಗದ ಸೌಹಾರ್ದತೆ ಪ್ರತಿ ಪಾದಿಸಿದ ಮೇರು ವ್ಯಕ್ತಿಗಳು ಗತಿಸಿ ಹೋದ ಈ ನಾಡಿನಲ್ಲಿ , ನಾವು ಯಾವುದೇ ರೀತಿಯಲ್ಲಿಯೂ ಪ್ರಚೋದನೆಗೆ ಒಳಾಗಾಗಬಾರದು, ಬದಲಾಗಿ ಸವರ್ಣೀಯರ ಗಲಭೆಯ ಪಿತೂರಿಯನ್ನು ಅರಿಯಬೇಕು, ಮುಸ್ಲಿಮರು ಯಾವುದೇ ಕಾರಣಕ್ಕೂ ಸಂಯಮ ಮೀರಬಾರದು.

ಸವರ್ಣೀಯರ ವಿಧ್ವಂಸಕ ನಡೆಯನ್ನು, ಆದಷ್ಟು ನಾಜೂಕಾಗಿ ಪರಿಹರಿಸುವ ನಡೆ ಹೊಂದಬೇಕು. ಈ ದೇಶದ ಕಾನೂನು ಮತ್ತು ಸಂವಿಧಾನ ಪ್ರಧಾನಿಸಿದ ಪ್ರಜಾ ಸತ್ತಾತ್ಮ ಕ ಹೋರಾಟ ದಿಂದ ಮಾತ್ರ ನ್ಯಾಯ ಪಡೆಯಲು ಸಾಧ್ಯ, ಕಾನೂನನ್ನು ಕೈಗೆತ್ತಿದರೆ ಅದರಿಂದ ವೈರಿ ವರ್ಗಕ್ಕೆ ಲಾಭ, ಇದನ್ನು ಮುಸ್ಲಿಮರು ಅರಿಯಬೇಕು. ಗಲಭೆ ಹುನ್ನಾರದಲ್ಲಿ ಸ್ಪಷ್ಟವಾಗಿ ಸವರ್ಣೀಯ ಹಸ್ತದ ವಾಸನೆ ಎದ್ದು ಕಾಣುವುದನ್ನು ನಾವು ಅರಿಯಬೇಕು ಎಂದು ಕೆ.ಅಶ್ರಫ್ (ಅಧ್ಯಕ್ಷರು.ದ.ಕ. ಜಿಲ್ಲಾ ಮುಸ್ಲಿಮ್ ಒಕ್ಕೂಟ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com