ಬೀಜಿಂಗ್: ಏಪ್ರಿಲ್ 05: ಹೊಸ ಕೊರೋನ ವೈರಸ್ ಪ್ರಕರಣಗಳು 13,000 ಕ್ಕಿಂತ ಹೆಚ್ಚಾದ ನಂತರ ಚೀನಾ ಮಂಗಳವಾರ ತನ್ನ ಅತಿದೊಡ್ಡ ನಗರವಾದ ಶಾಂಘೈನಲ್ಲಿ ಕೋವಿಡ್ -19 ನಿರ್ಬಂಧಗಳನ್ನು ವಿಸ್ತರಿಸಿದೆ.
ಶಾಂಘೈನ ಪಶ್ಚಿಮ ಜಿಲ್ಲೆಗಳಲ್ಲಿ ಮೂಲತಃ ಮಂಗಳವಾರ ಕೊನೆಗೊಳ್ಳಲಿದ್ದ ಎರಡು ಹಂತದ ಲಾಕ್‌ಡೌನ್ ಅನ್ನು ಈಗ ಮುಂದಿನ ಸೂಚನೆಯವರೆಗೆ ವಿಸ್ತರಿಸಲಾಗಿದೆ. ಹೆಚ್ಚಿನ ಸುರಂಗಮಾರ್ಗಗಳನ್ನು ಸ್ಥಗಿತಗೊಳಿಸುವುದರೊಂದಿಗೆ ಮಂಗಳವಾರದಿಂದ ನಗರ ಸಾರಿಗೆ ಜಾಲಗಳ ಮೇಲೆ ಹೆಚ್ಚಿನ ನಿರ್ಬಂಧಗಳನ್ನು ಇರಿಸಲಾಗುವುದು ಎಂದು ಅಧಿಕಾರಿಗಳು ಸೋಮವಾರ ತಡವಾಗಿ ಘೋಷಿಸಿದರು.
ಏಪ್ರಿಲ್ 4 ರಂದು ಶಾಂಘೈ ದಾಖಲೆಯ 13,086 ಹೊಸ ಲಕ್ಷಣರಹಿತ ಕೋವಿಡ್ -19 ಸೋಂಕುಗಳು ವರದಿಯಾಗಿದೆ. ಆದರೆ ಹಿಂದಿನ ದಿನ ಅಂದರೆ ಏಪ್ರಿಲ್ 3ರಂದು 8,581 ಪ್ರಕರಣಗಳು ವರದಿಯಾಗಿತ್ತು ಎಂದು ಸರ್ಕಾರ ಹೇಳಿದೆ. ಓಮಿಕ್ರಾನ್ ರೂಪಾಂತರದ ವಿರುದ್ಧ ಹೋರಾಡಲು ಇತರ ಪ್ರದೇಶಗಳಿಂದ ಶಾಂಘೈಗೆ ಕನಿಷ್ಠ 38,000 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.