janadhvani

Kannada Online News Paper

ಹಿಜಾಬ್,ಹಲಾಲ್, ಅಝಾನ್ ಮರೆಯಲ್ಲಿ ಸಾರ್ವಜನಿಕರ ಕಿಸೆಗೆ ಕತ್ತರಿ- ವಿದ್ಯುತ್ ದರದಲ್ಲೂ ಏರಿಕೆ

ಜನರ ಮಧ್ಯೆ ಕೋಮುಭಾವನೆ ಕೆರಳಿಸಿ, ಪರಸ್ಫರ ಕಚ್ಛಾಡಿಸಿ ವಿಕೃತ ಆನಂಧ ಪಡೆಯುತ್ತಿರುವ ರಾಜ್ಯ ಸರ್ಕಾರ

ಬೆಂಗಳೂರು,ಏ.4: ರಾಜ್ಯದ ಜನತೆ ತೈಲ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ ನಡುವೆಯೇ ಈಗ ವಿದ್ಯುತ್ ದರ ಏರಿಕೆಯ ಬಿಸಿಮುಟ್ಟಿದ್ದು ಇಂದು ಪ್ರತಿ ಯೂನಿಟ್ ಗೆ 35 ಪೈಸೆ ದರವನ್ನು ಹೆಚ್ಚಳ ಮಾಡಲಾಗಿದೆ. ಈ ಪರಿಷ್ಕೃತ ದರ ಏಪ್ರಿಲ್ 1ರಿಂದಲೇ ಜಾರಿಗೆ ಬರಲಿದೆ.

ಈ ಕುರಿತಂತೆ ಕರ್ನಾಟಕ ವಿದ್ಯುತ್ ಶಕ್ತಿ ನಿಯಂತ್ರಣ ಆಯೋಗದಿಂದ ವಿದ್ಯುತ್ ದರ ಪರಿಷ್ಕರಣೆ ಸಂಬಂಧ ಸುದ್ಧಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.

ಪ್ರತಿ ಯೂನಿಟ್ ಗೆ 35 ಪೈಸೆ ವಿದ್ಯುತ್ ದರ ಹೆಚ್ಚಳದ ಮಹತ್ವದ ಘೋಷಣೆಯನ್ನು ಘೋಷಿಸಿದೆ. ಏಪ್ರಿಲ್ 1ರಿಂದ ಈ ದರ ಏರಿಕೆ ಜಾರಿಗೆ ಬರಲಿದೆ.

ಜೆಸ್ಕಾ, ಮೆಸ್ಕಾಂ, ಬೆಸ್ಕಾಂ ವ್ಯಾಪ್ತಿಯಲ್ಲಿ ಏಪ್ರಿಲ್ 1ರಿದಂ ಜಾರಿಗೆ ಬರುವಂತೆ ಪ್ರತಿ ಯೂನಿಟ್ ಗೆ 35 ಪೈಸೆ ಹೆಚ್ಚಳ ಮಾಡಲಾಗುತ್ತಿದೆ ಎಂಬುದಾಗಿ ಘೋಷಿಸಲಾಗಿದೆ.
ವಿದ್ಯುತ್ ದರದ ಹೆಚ್ಚಳದ ಜೊತೆಗೆ ನಿಗದಿತ ಶುಲ್ಕವನ್ನು ಕೂಡ ಏರಿಕೆ ಮಾಡಲಾಗಿದೆ.

ಫಿಕ್ಸಿಡ್ ಚಾರ್ಜ್ ಅನ್ನೂ ರೂ.10 ರಿಂದ 30ಕ್ಕೆ ಹೆಚ್ಚಳ ಮಾಡಲಾಗಿದೆ. ಈ ಮೂಲಕ ಕೆ ಇ ಆರ್ ಸಿ ವಿದ್ಯುತ್ ಬಳಕೆದಾರರಿಗೆ ಬಿಗ್ ಶಾಕ್ ನೀಡಿದೆ.

ರಾಜ್ಯ ಸರ್ಕಾರವು ಹಿಜಾಬ್, ಹಲಾಲ್ ಕಟ್ ಮತ್ತೆ ಇದೀಗ ಅಝಾನ್ ವಿವಾದಗಳನ್ನು ಹತೋಟಿಗೆ ತರಲು ಮುಂದಾಗದೆ, ಜನರ ಮಧ್ಯೆ ಕೋಮುಭಾವನೆ ಕೆರಳಿಸಿ, ಪರಸ್ಫರ ಕಚ್ಛಾಡಿಸಿ, ಇದರ ಮರೆಯಲ್ಲಿ ನಿತ್ಯೋಪಯೋಗಿ ವಸ್ತುಗಳ ಬೆಲೆಯನ್ನು ಏರಿಸುತ್ತಲೇ ಬಂದಿದೆ. ಇಂಧನ ಬೆಲೆ ಗಗನಕ್ಕೇರಿದೆ. ಆದರೆ, ಹಿಂದುತ್ವ ತಲೆಗಡರಿದ ಕೋಮುವಾದಿ ಶಕ್ತಿಗಳು ರಾಜ್ಯದ ಜನತೆಯ ಮಧ್ಯೆ ಕೋಮು ವಿಷಬೀಜವನ್ನು ಬಿತ್ತುತ್ತಿದ್ದು,ಅದರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ಸರ್ಕಾರ ಮೌನಿಯಾಗಿ ನಿಂತು ವಿಕೃತವಾಗಿ ಆನಂದಿಸುತ್ತಿದೆ.

error: Content is protected !! Not allowed copy content from janadhvani.com