janadhvani

Kannada Online News Paper

ಇಸ್ಲಾಂ ಧರ್ಮ‌ ಶಾಂತಿ ಬಯಸುತ್ತದೆ: ತೋಕೆ ಮುಹಿಯುದ್ದೀನ್ ಕಾಮಿಲ್ ಸಖಾಫಿ

ಬೆಂಗಳೂರು: ಎಸ್ಸೆಸ್ಸೆಫ್ ಡಿವಿಷನ್ ಕಾನ್ಫರೆನ್ಸ್

ಬೆಂಗಳೂರು: ದ್ವೇಷವನ್ನು ಪ್ರೀತಿಯಿಂದ ಎದುರಿಸುವ ಮೂಲಕ ಫ್ಯಾಸಿಸ್ಟ್ ಶಕ್ತಿಗಳನ್ನು ಸೋಲಿಸಬೇಕು ,ಇಸ್ಲಾಂ ಧರ್ಮ ಎಂದಿಗೂ ದ್ವೇಷವನ್ನು ಬೋಧಿಸುವುದಿಲ್ಲ . ಇಸ್ಲಾಂ ಧರ್ಮದ ವಿರುದ್ದದ ದ್ವೇಷಕಾರುವವರನ್ನು ವಿನಯ ,ಸಾಹೋದರ್ಯತೆಯ ಮೂಲಕ ಎದುರಿಸಬೇಕೆಂದು ಸುನ್ನೀ ಜಂಇಯತುಲ್ ಉಲಮಾ ರಾಜ್ಯ ಕಾರ್ಯದರ್ಶಿ ತೋಕೆ ಮುಹಿಯುದ್ದೀನ್ ಕಾಮಿಲ್ ಸಖಾಫಿ ಹೇಳಿದರು.

ಅವರು ಎಸ್ ಎಸ್ ಎಫ್ ಬೆಂಗಳೂರು ಜಿಲ್ಲೆ ಆಯೋಜಿಸಿದ
ಡಿವಿಷನ್ ಕಾನ್ಫರೆನ್ಸ್ ಸಮ್ಮೇಳನದಲ್ಲಿ ಮಾತನಾಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಎಸ್ ಎಸ್ ಎಫ್ ರಾಜ್ಯಾಧ್ಯಕ್ಷ ಅಬ್ದುಲ್‌ ಲತೀಫ್ ಸಅದಿ ರವರು ಮಾತನಾಡಿ, ಧರ್ಮ ಹಾಗೂ ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ರಾಜ್ಯಾದ್ಯಂತ ಕಾರ್ಯಕ್ರಮ ಹಮ್ಮಿಕೊಂಡಿದ್ದು ಎಲ್ಲರೂ ಸಂವಿಧಾನವನ್ನು ಅರಿತುಕೊಂಡು ಉಲಮಾಗಳ ನಿರ್ದೇಶನದಂತೆ ಮುಂದುವರಿಯಬೇಕೆಂದು ಹೇಳಿದರು.

ವೇದಿಕೆಯಲ್ಲಿ ಸಯ್ಯದ್ ಸಫ್ವಾನ್ ತಂಙಳ್ , ಸಂಶುದ್ದೀನ್ ಅಝ್ಹರಿ ,ಬಶೀರ್ ಸಅದಿ ಪೀಣ್ಯ, ವಹಾಬ್ ಮೌಲವಿ, ಅಬ್ದುರಹ್ಮಾನ್ ಹಾಜಿ, ಸ್ವಾಲಿಹ್ ಶಿವಾಜಿ ನಗರ, ತಾಜುದ್ದೀನ್ ಫಾಲಿಳಿ, ಹಕೀಂ ಆರ್.ಟಿ.ನಗರ ಉಪಸ್ಥಿತರಿದ್ದರು .

ಶಬೀಬ್ ಸ್ವಾಗತಿಸಿ, ಸ್ವಾದಿಕ್ ಸಖಾಫಿ ವಂದಿಸಿದರು.

error: Content is protected !! Not allowed copy content from janadhvani.com