janadhvani

Kannada Online News Paper

ಹೊಸ್ಮಾರು SMJM ವಾರ್ಷಿಕ ಮಹಾಸಭೆ

ಶೈಖ್ ಮೊಹಿಯಿದ್ದೀನ್ ಜುಮ್ಮಾ ಮಸೀದಿ ಹೊಸ್ಮಾರು ಇದರ ವಾರ್ಷಿಕ ಮಹಾಸಭೆಯು ಮಾರ್ಚ್ 27ರಂದು ನಡೆಯಿತು.ಜಮಾಅತ್ ಗೌರವಾಧ್ಯಕ್ಷರಾದ ಎನ್.‌ಸಿ. ಅಹ್ಮದ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸ್ಥಳೀಯ ಖತೀಬ್ ಉಮರ್ ಸಅದಿ ಅಫ್ಳಲಿ ದುಆ ನೆರವೇರಿಸಿದರು.SJU ಕಾರ್ಕಳ ಝೋನ್ ಅಧ್ಯಕ್ಷ ಸುಲೈಮಾನ್ ಸಅದಿ ಹಾಜರಿದ್ದರು.

2022/23 ರ ನೂತನ ಅಧ್ಯಕ್ಷರಾಗಿ MS ಅನ್ವರ್ , ಪ್ರ. ಕಾರ್ಯದರ್ಶಿಯಾಗಿ ಎನ್. ಸಿ. ರಹೀಂ ಹೊಸ್ಮಾರ್ , ಕೋಶಾಧಿಕಾರಿಯಾಗಿ ಉಮರ್ ಕರಿಂಬ್ಯಾಲ್ ರವರು ಸರ್ವಾನುಮತದಿಂದ ಆಯ್ಕೆಯಾದರು.ಉಪಾಧ್ಯಕ್ಷರಾಗಿ ಅಬ್ದುಲ್ ಅಝೀಝ್, ಜೊತೆ ಕಾರ್ಯದರ್ಶಿಗಳಾಗಿ ಕಾಸಿಂ ಈದು ಕ್ರಾಸ್, ಮುನೀಬ್ ಬೊಳ್ಳೋಟ್ಟುರವರನ್ನು ಆಯ್ಕೆ ಮಾಡಲಾಯಿತು.

ಸಮಿತಿ ಸದಸ್ಯರುಗಳಾಗಿ MH ಸುಲೈಮಾನ್ ಸಅದಿ, KM ಉಸ್ಮಾನ್, ಸಿದ್ದೀಕ್ ಗುಂಪಕಲ್ಲು, ಹುಸೈನ್ ಸಅದಿ, ಜಮಾಲ್, ಇಕ್ಬಾಲ್, ಶರೀಫ್ ಮದನಿ, ಸಲೀಂ MH, ಯಾಕೂಬ್ MH. ಆಯ್ಕೆಯಾದರು.
ಸಭೆಯಲ್ಲಿ KM ಉಸ್ಮಾನ್ ಸ್ವಾಗತಿಸಿ, ನೂತನ ಪ್ರ.‌ಕಾರ್ಯದರ್ಶಿ ಎನ್.ಸಿ. ರಹೀಂ ವಂದಿಸಿದರು.