janadhvani

Kannada Online News Paper

ಆಸಿಫಾ ಪ್ರಕರಣ:ಭಾರತೀಯತೆಯ ಕಗ್ಗೊಲೆ .ಹಾಫಿಳ್ ಯಾಕೂಬ್ ಸಅದಿ

ಜನಧ್ವನಿ ವಾರ್ತೆ: ಇತ್ತೀಚೆಗೆ ಕಾಶ್ಮೀರದ ಕಥುವಾದಲ್ಲಿ ಎಂಟರಹರೆಯದ ಬಾಲಕಿ ಆಸಿಫಾಳನ್ನು ದಿನಗಳ ಕಾಲ ಅತ್ಯಾಚಾರ ಮಾಡಿ ಕೊಲೆ ಮಾಡುವುದರಿಂದ ಭಾರತ ದೇಶವನ್ನೆ ಪ್ರಪಂಚದ ಮುಂದೆ ತಲೆತಗ್ಗಿಸುವಂತೆ ಮಾಡಿದ್ದು ಇದು ಭಾರತೀಯ ಸಂಸ್ಕೃತಿಯನ್ನು ಕಗ್ಗೊಲೆ ಮಾಡಿದ್ದಾಗಿದೆ .

ಆಸಿಫಾ ಅಪರಾಧಿಗಳನ್ನು ಗಲ್ಲಿಗೇರಿಸುವ ಮೂಲಕ ನಮ್ಮ ದೇಶದ ಸಂಸ್ಕೃತಿಯನ್ನು ಪ್ರಪಂಚದ ಮುಂದೆ ಮತ್ತೊಮ್ಮೆ ಸಾಬೀತು ಪಡಿಸಬೇಕೆಂದು ಎಸ್. ಎಸ್. ಎಫ್ ರಾಜ್ಯ ನಾಯಕ ಹಾಫಿಳ್ ಯಾಕೂಬ್ ಸಅದಿ ಹೇಳಿದರು .ಅವರಿಂದು ಎಸ್ ಎಸ್ ಎಫ್ ನಾವೂರು ಶಾಖೆಯ ವತಿಯಿಂದ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಮಾತನಾಡಿದರು. ಇತ್ತೀಚೆಗಿನ ಮಕ್ಕಳ ಮೇಲಿನ ದೌರ್ಜನ್ಯ ಹೆಚ್ಚಾಗುತ್ತಿದ್ದು ಆಡಳಿತ ವರ್ಗಗಳು ಕುರುಡಾಗಿವೆಯಲ್ಲದೆ ಕೆಲವೊಂದು ಶಾಸಕರು ಸಚಿವರುಗಳು ಇಂತಹ ಪ್ರಕರಣಗಳಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಶಾಮೀಲಾಗಿರುವುದು ನಾಚಿಕಕೇಡು ಮತ್ತು ರಾಜಕಾರಣಿಗಳ ಮೇಲಿನ ನಂಬಿಕೆಯನ್ನು ಜನಸಾಮಾನ್ಯರು ಕಳೆದು ಕೊಳ್ಳುವಂತಾಗಿದೆ ಎಂದರು.ಇಂತಹ ಸಂದರ್ಭದಲ್ಲಿ ಜಾತಿ ಧರ್ಮ ಪಕ್ಷ ಸಂಘಟೆಗಳ ಭೇಧವಿಲ್ಲದೆ ಪ್ರತಿಭಟಿಸಬೇಕು.ಮುಂದಿನ ದಿನಗಳಲ್ಲಿ ಸೆಕ್ಟರ್, ಡಿವಿಷನ್ ಮುಂತಾದ ಘಟಕಗಳಲ್ಲಿ ಸುನ್ನೀ ಸಂಘಟನೆಗಳ ಸಹಕಾರದೊಂದಿಗೆ ಬೃಹತ್ ಪ್ರತಿಭಟನೆಗಳನ್ನು ಹಮ್ಮಿಕೊಂಡು ಸಂತ್ರಸ್ತರಿಗೆ ನ್ಯಾಯಕ್ಕಾಗಿ ಒತ್ತಾಯಿಸಲಾಗುವುದು ಎಂದರು.

ಆಸಿಫಾಳ ಬಿಸಿ ರಕ್ತದಿಂದ ಭಾರತ ಕುದಿಯುತ್ತಿದೆ ಎನ್ನುವ ಘೋಷವಾಕ್ಯದೊಂದಿಗೆ ಬೆಳಿಗ್ಗೆ 9.30.ಕ್ಕೆ ಮುರ ಮಸೀದಿ ಸಮೀಪದಲ್ಲಿ ಪ್ರತಿಭಟನೆಯು ನಡೆಯಿತು. ಈ ಕಾರ್ಯಕ್ರಮನ್ನು ಡಿವಿಷನ್ ಕಾರ್ಯದರ್ಶಿಯಾದದ ಪಿ.ಎ.ಶರೀಪ್ ನವರು ಘೋಷ ವಾಕ್ಯದೊಂದಿಗೆ ಪ್ರತಿಭಟನೆಗೆ ಚಾಲನೆ ನೀಡಿದರು .ಕಾರ್ಯಕ್ರಮದಲ್ಲಿ ಮುರ ಮಸೀದಿ ಸಹಾಯಕ ಖತೀಬರಾದ ಜಮಾಲುದ್ದೀನ್ ಅಹ್ಸನಿ, SYS ನಾಯಕರಾದ ಪಿ.ಯು.ಅಬ್ದುರಹ್ಮಾನ್ ಮುಸ್ಲಿಯಾರ್, ಸೆಕ್ಟೆರ್ ಅದ್ಯಕ್ಷರಾದ ಡಿ.ಎಂ.ಕಮಾಲ್ ಮುಸ್ಲಿಯಾರ್. ಮುರ ಮಸೀದಿ ಪ್ರ.ಕಾರ್ಯದರ್ಶಿ ಶಾಹುಲ್ ಹಮೀದ್ ಐಡಿಯಲ್. ಮಸೀದಿ ಕೋಶಾದಿಕಾರಿ ಪಿ.ಎ.ಯೂಸುಫ್. ಶಾಖೆಯ ಉಪಾದ್ಯಕ್ಷರಾದ ಇಬ್ರಾಹಿಂ ಪಿ.ಎ ಮುಂತಾದ ಉಲಮಾ ಉಮರಾ ಹಾಗೂ ಹಲವಾರು ಕಾರ್ಯಕರ್ತರು ಬಾಗವಹಿಸಿದರು.

ವರದಿ ಶರೀಫ್ ಪಿ.ಎ

error: Content is protected !! Not allowed copy content from janadhvani.com