janadhvani

Kannada Online News Paper

SMA ಕಾರ್ಕಳ ರೀಜಿನಲ್ ‘ಶೈನ್-22’ ಯಶ್ವಸ್ವಿಯೊಂದಿಗೆ ಸಮಾಪ್ತಿ

ಕಾರ್ಕಳ: ಸುನ್ನೀ ಮ್ಯಾನೇಜ್ ಮೆಂಟ್ ಅಸೋಸಿಯೇಷನ್ ಎಸ್ ಎಮ್ ಎ ಕಾರ್ಕಳ ರೀಜಿನಲ್ ಸಮಿತಿ ನಡೆಸಿದ ರೀಜಿನಲ್ ಸಮಿತಿಗೆ ಒಳಪಟ್ಟ 15 ಮದ್ರಸಗಳ ಪದಾಧಿಕಾರಿಗಳಿಗೆ ಏಕ ದಿನ ಕ್ಯಾಂಪ್ ಬಹಳ ಯಶಸ್ವಿಯೊಂದಿಗೆ ಸಮಾಪ್ತಿಗೊಂಡಿತು.

ಬಜಗೋಳಿಯ ನೂರುಲ್ ಹುದಾ ಜುಮ್ಮಾ ಮಸ್ಜಿದ್ ಸಭಾಂಗಣದಲ್ಲಿ ಆರಂಭ ಗೊಂಡ ಶೈನ್-22 ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಿಜಿನಲ್ ಸಮಿತಿಯ ಅಧ್ಯಕ್ಷರಾದ H.ಸುಲೈಮಾನ್ ಹಾಜಿ ಬಜಗೋಳಿ ರವರು ವಹಿಸಿದ್ದರು
ಎಸ್ ಜೆ ಎಮ್ ಕಾರ್ಕಳ ರೇಂಜ್ ಅಧ್ಯಕ್ಷರಾದ ಉಮರ್ ಸ’ಅದಿ ಅಲ್ಅಫ್ಳಲಿ ಉದ್ಘಾಟಿಸಿದರು.

ಎಸ್ ವೈ ಎಸ್ ರಾಜ್ಯ ನಾಯಕರಾದ GM.ಮುಹಮ್ಮದ್ ಕಾಮಿಲ್ ಸಖಾಫಿಯವರು ಈಗಿನ ಮದ್ರಸ ಹಾಗೂ ಅದರ ಆಡಳಿತ ಸಮಿತಿ ಹೇಗಿರಬೇಕು ಎಂಬ ವಿಷಯಗಳ ಬಗ್ಗೆ ಸವಿಸ್ತಾರವಾಗಿ ತರಗತಿ ನಡೆಸಿದರು.

SMA ಪಡುಬಿದ್ರೆ ಝೋನಲ್ ಅಧ್ಯಕ್ಷರಾದ ಐಡಿಯಲ್ ಅಬ್ದುರ್ರಹ್ಮಾನ್, ಎಸ್.ಜೆ.ಯು ಕಾರ್ಕಳ ಝೋನಲ್ ಪ್ರ.ಕಾರ್ಯದರ್ಶಿ ಶರೀಫ್ ಮದನಿ ಎಸ್.ವೈ.ಎಸ್ ಕಾರ್ಕಳ ಸೆಂಟರ್ ಅಧ್ಯಕ್ಷ ಹೈದರ್ ಕಾಬೆಟ್ಟು, ಕಾರ್ಯದರ್ಶಿ ಮುಸ್ತಫಾ ಬಂಗ್ಲೆಗುಡ್ಡೆ, ಎಸ್.ಎಸ್.ಎಫ್ ರಾಜ್ಯ ಸಮಿತಿ ಕಾರ್ಯದರ್ಶಿ ಎನ್.ಸಿ.ರಹೀಮ್ ಎಸ್.ಎಸ್.ಎಫ್ ಕಾರ್ಕಳ ಡಿವಿಷನ್ ಅಧ್ಯಕ್ಷ ಅಬ್ದುರ್ರಹ್ಮಾನ್ ಅಮ್ಜದಿ, ಕಾರ್ಯದರ್ಶಿ ಮುನೀಬ್ ಬೊಳ್ಳೊಟ್ಟು, ಸ್ವಾದಿಖ್ ಬಜಗೋಳಿ (KCF) ಹಾಗೂ ರೇಂಜ್ ವ್ಯಾಪ್ತಿಗೊಳಪಟ್ಟ ಜಮಾಅತ್’ಗಳ ಅಧ್ಯಕ್ಷರುಗಳು-ಇಮಾಮ್’ಗಳು ಮತ್ತಿತರ ಪ್ರತಿನಿಧಿಗಳು ಉಪಸ್ಥಿತರಿದ್ದರು. ಅಗಲಿದ ಉಲಮಾಅ್’ಗಳು ಮತ್ತು ಕಾರ್ಯಕರ್ತರಿಗೆ ತಹ್’ಲೀಲ್ ಸಮರ್ಪಣೆಯೂ ನಡೆಯಿತು.
ರೀಜಿನಲ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಕಲಂದರ್ ಶಾಫಿ ಸ’ಅದಿ ಸ್ವಾಗತಿಸಿ ಅಬ್ದುರ್ರಹ್ಮಾನ್ ಮುಸ್ಲಿಯಾರ್ ನಿರೂಪಿಸಿದರು.