janadhvani

Kannada Online News Paper

ಕೆಸಿಎಫ್ ಬಹರೈನ್ ಸೌತ್ ಝೋನ್ ವತಿಯಿಂದ ಮಾರ್ಚ್ 18ರಂದು ಬೃಹತ್ ರಕ್ತದಾನ ಶಿಬಿರ

ಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಅನಿವಾಸಿ ಕನ್ನಡಿಗರ ಮನಗೆದ್ದ ಕೆಸಿಎಫ್ 9 ವರುಷಗಳನ್ನು ಪೂರ್ತಿಗೊಳಿಸಿ ದಶ ವರ್ಷಕ್ಕೆ ಕಾಲಿಟ್ಟಿದೆ.

ಕೆಸಿಎಫ್ ಫೌಂಡೇಶನ್ ಡೇ ಭಾಗವಾಗಿ ಬಹರೈನ್ ಸೌತ್ ಝೋನ್ ವತಿಯಿಂದ ಬೃಹತ್ ರಕ್ತದಾನ ಶಿಬಿರವನ್ನು ಮಾರ್ಚ್ 18ರಂದು ಆಯೋಜಿಸಲು ತೀರ್ಮಾನಿಸಲಾಗಿದೆ.

ಬೆಳಿಗ್ಗೆ 6 ರಿಂದ 11: 30ರ ವರೆಗೆ ಸಲ್ಮಾನಿಯಾ ಮೆಡಿಕಲ್ ಸೆಂಟರ್ ನಲ್ಲಿ ನಡೆಯಲಿರುವ ರಕ್ತದಾನ ಶಿಬಿರವನ್ನು ಯಶಸ್ವಿಗೊಳಿಸಬೇಕಾಗಿ ಸೌತ್ ಝೋನ್ ಸಮಿತಿಯ ನೂತನ ಅಧ್ಯಕ್ಷರಾದ ಶಾಫಿ ಕಂಬಳ ಬೆಟ್ಟು ಹಾಗೂ ನಿಕಟ ಪೂರ್ವ ಅಧ್ಯಕ್ಷರಾದ ಶಾಫಿ ಮಾದಾಪುರ ರವರು ತಿಳಿಸಿದ್ದಾರೆ.

ರಕ್ತದಾನ ಶಿಬಿರದಲ್ಲಿ ಭಾಗಿಯಾಗಲು ಇಚ್ಚಿಸುವವರು 33015150 /34660888 ಸಂಖ್ಯೆಯಲ್ಲಿ ಸಂಪರ್ಕಿಸಿ ನೊಂದಾವಣೆ ಮಾಡಬಹುದಾಗಿದೆ.