janadhvani

Kannada Online News Paper

ಎಸ್ಸೆಸ್ಸೆಫ್ ರಾಜ್ಯ ಮಟ್ಟದ ಡಿವಿಷನ್ ಕಾನ್ಪರೆನ್ಸ್ ಗೆ ಅದ್ದೂರಿ ಚಾಲನೆ

ಮುಡಿಪು: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ವತಿಯಿಂದ ಮಾರ್ಚ್ 10 ರಿಂದ ಮಾರ್ಚ್ 31 ರೊಳಗೆ “ಸಂವಿಧಾನ,ಧರ್ಮ,ರಾಜಕೀಯ” ಎಂಬ ಶಿರ್ಷಿಕೆಯಲ್ಲಿ ರಾಜ್ಯದ ನೂರಾರು ಡಿವಿಷನ್ ಗಳಲ್ಲಿ ನಡೆಯಲಿರುವ ಡಿವಿಷನ್ ಕಾನ್ಪರೆನ್ಸ್ ನ ಉದ್ಘಾಟನಾ ಸಮಾವೇಶವು ಎಸ್ಸೆಸ್ಸೆಫ್ ಮುಡಿಪು ಡಿವಿಷನ್ ವತಿಯಿಂದ ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅಬ್ದುಲ್ ಲತೀಫ್ ಸಅದಿ ಶಿವಮೊಗ್ಗರವರ ಅಧ್ಯಕ್ಷತೆಯಲ್ಲಿ ಮುಡಿಪು ಸಮೀಪದ ಪೊಟ್ಟೊಳಿಕೆ ಮೈದಾನದಲ್ಲಿ ನಡೆಯಿತು.

ಕರ್ನಾಟಕ ರಾಜ್ಯ ಸುನ್ನೀ ಜಂಇಯ್ಯತುಲ್ ಉಲಮಾದ ರಾಜ್ಯಾಧ್ಯಕ್ಷ ಝೈನುಲ್ ಉಲಮಾ ಮಾಣಿ ಉಸ್ತಾದ್ ಉದ್ಘಾಟಿಸಿದರು.ಸಯ್ಯಿದ್ ಶಿಹಾಬುದ್ದೀನ್ ಮಶ್ಹೂರ್ ತಂಙಳ್ ತಲಕ್ಕಿ ಸಮಾರೋಪ ದುಆ:ಗೆ ನೇತೃತ್ವ ನೀಡಿದರು.

ಎಸ್ಸೆಸ್ಸೆಫ್ ಕೇರಳ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಎನ್ ಜಾಫರ್, ಕರ್ನಾಟಕ SSF ನ ರಾಜ್ಯ ಕೋಶಾಧಿಕಾರಿ ಸುಫ್ಯಾನ್ ಸಖಾಫಿ ರವರು ವಿಷಯವನ್ನು ಮಂಡಿಸಿದರು.ರಾಜ್ಯ ಕಾರ್ಯದರ್ಶಿಹುಸೈನ್ ಸ ಅದಿ ಹೊಸ್ಮಾರ್ ಮುನ್ನುಡಿ ಭಾಷಣ ಮಾಡಿದರು.

ಮಂಜನಾಡಿ ಅಲ್ ಮದೀನಾ ಜನರಲ್ ಮ್ಯಾನೇಜರ್ ಅಬ್ದುಲ್ ಖಾದರ್ ಸಖಾಫಿ , ರಾಜ್ಯ ಕಾರ್ಯದರ್ಶಿ ಮುನೀರ್ ಸಖಾಫಿ, ದ.ಕ ವೆಸ್ಟ್ ಜಿಲ್ಲಾಧ್ಯಕ್ಷ ನವಾಝ್ ಸಖಾಫಿ ಸಂದೇಶ ಭಾಷಣ ಮಾಡಿದರು.

ರಾಜ್ಯ ನಾಯಕರು, ದ.ಕ ವೆಸ್ಟ್ ಜಿಲ್ಲಾ ನಾಯಕರು, ಮುಡಿಪು ಡಿವಿಷನ್ ನಾಯಕರು ಉಪಸ್ಥಿತರಿದ್ದರು.ಎಸ್ಸೆಸ್ಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ ಸ್ವಾಗತಿಸಿದರು,ಕಾರ್ಯದರ್ಶಿ ಮಹಮ್ಮದಲಿ ತುರ್ಕಳಿಕೆ ವಂದಿಸಿದರು.