ರಿಯಾದ್: ಸೌದಿಯಿಂದ ಕೆಲಸಬಿಟ್ಟು ತೆರಳುವ ವಿದೇಶೀ ಪ್ರಜೆಗಳ ಸಂಖ್ಯೆಯಲ್ಲಿ ಭಾರೀ ಹೆಚ್ಚಳ ಕಂಡು ಬಂದಿದೆ. ವರದಿಯ ಪ್ರಕಾರ, ರಜಾದಲ್ಲಿ ತಾಯ್ನಾಡಿಗೆ ತೆರಳಿದವರ ಪೈಕಿ ಸೌದಿಗೆ ಮರಳುವವರ ಸಂಖ್ಯೆಯು ಕಳೆದ ವರ್ಷಕ್ಕಿಂತ ಅರ್ಧದಷ್ಟು ಕಡಿಮೆಯಿದೆ. ಸುಮಾರು ಐದು ಲಕ್ಷಕ್ಕಿಂತಲೂ ಹೆಚ್ಚು ಕಾನೂನು ಉಲ್ಲಂಘನೆಗಾರರನ್ನು ಕಳೆದ ಐದು ತಿಂಗಳಲ್ಲಿ ಬಂಧಿಸಲಾಗಿದೆ.
ಪಾಸ್ಪೋರ್ಟ್ ಇಲಾಖೆಯ ಪ್ರಕಾರ, ಸಾವಿರದ ಐನೂರು ಮಂದಿ ವಿದೇಶಿಯರು ಸೌದಿ ಅರೇಬಿಯಾದಿಂದ ದಿನವೊಂದಕ್ಕೆ ಫೈನಲ್ ಎಕ್ಸಿಟ್ ನಲ್ಲಿ ತಾಯ್ನಾಡಿಗೆ ಹಿಂದಿರುಗುತ್ತಿದ್ದಾರೆ. ಕಳೆದ ಒಂದು ವರ್ಷದಲ್ಲಿ 8,11,000 ವಿದೇಶೀಯರು ಹಿಂದಿರುಗಿದ್ದಾರೆ.
ಹೊಸ ಸ್ವದೇಶೀಕರಣ ನೀತಿಯ ಯೋಜನೆಗಳು, ವಿದೇಶಿಯರ ತೆರಿಗೆ ಮತ್ತು ಇತರ ವೆಚ್ಚಗಳನ್ನು ತಾಳಲಾರದ ಕಾರಣದಿಂದ ತಮ್ಮ ಉದ್ಯೋಗವನ್ನು ತ್ಯಜಿಸಿ ತೆರಳುವವರೂ ಇದ್ದಾರೆ.
ಈ ವರ್ಷದ ಮೊದಲ ನಾಲ್ಕು ತಿಂಗಳಲ್ಲಿ ಕೇವಲ ಹನ್ನೆರಡು ಲಕ್ಷ ವಿದೇಶಿಗಳು ಎಕ್ಸಿಟ್ ನಲ್ಲಿ ತೆರಳಿದ್ದಾರೆ . ಕಳೆದ ವರ್ಷ ಇದೇ ಅವಧಿಯಲ್ಲಿ ಅದು ಮೂವತ್ತು ಲಕ್ಷ ದಾಟಿತ್ತು. ಅದೇ ವೇಳೆ ‘ಕಾನೂನು ಉಲ್ಲಂಘನೆ ರಹಿತ ದೇಶ ‘ ಎಂಬ ಕಾಂಬೈನ್ ನ ಭಾಗವಾಗಿ ಇದುವರೆಗೆ ಒಟ್ಟು 928,857 ಜನರನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ. ಕಳೆದ ನವೆಂಬರ್ 17 ರಂದು ಕಾಂಬೈನ್ ಪ್ರಾರಂಭವಾಗಿತ್ತು.
674,033 ವಾಸ ಕಾನೂನು ಉಲ್ಲಂಘಕರು, 177,230 ಕಾರ್ಮಿಕ ಕಾನೂನು ಉಲ್ಲಂಘಕರು ಮತ್ತು 77,594 ಗಡಿ ರಕ್ಷಣಾ ಕಾನೂನು ಉಲ್ಲಂಘಕರನ್ನು ಬಂಧಿಸಲಾಯಿತು. ಗಡಿದಾಟಿ ಸೌದಿ ಅರೇಬಿಯಾವನ್ನು ನುಸುಳಲು ಪ್ರಯತ್ನಿಸಿದ, 13,468 ಜನರನ್ನು ಬಂಧಿಸಲಾಯಿತು. ಇವರ ಪೈಕಿ ಬಹುತೇಕ ಯೆಮೆನಿಗಳು ಮತ್ತು ಇಥಿಯೋಪಿಯ ನಾಗರಿಕರಾಗಿದ್ದಾರೆ.
ವಿವಿಧ ಸಂದರ್ಭಗಳಲ್ಲಿ ಪೊಲೀಸ್ ತನಿಖೆಯಲ್ಲಿ ಉಳಿದಿದ್ದ 21,374 ಆರೋಪಿಗಳನ್ನು ಒಂದು ವಾರದಲ್ಲಿ ಬಂಧಿಸಲಾಗಿದೆ ಎಂದು ಸಚಿವಾಲಯವ ತಿಳಿಸಿದೆ. 3726 ಶಸ್ತ್ರಾಸ್ತ್ರಗಳನ್ನು ತಪಾಸಣಾ ವೇಳೆ ಪತ್ತೆ ಹಚ್ಚಲಾಗಿದೆ.