ಕರ್ನಾಟಕ ರಾಜ್ಯ ಎಸ್ ಎಸ್ ಎಫ್ ವತಿಯಿಂದ ನಾಳೆ ಸಂಜೆ 4 30 ಗೆ ಸರಿಯಾಗಿ ಆನ್ಲೈನ್ ಮೂಲಕ ರಾಜ್ಯದಾದ್ಯಂತ ಮುತಅಲ್ಲಿಮರಿಗೆ ಈಜಿಪ್ಟ್ ನ ಅಲ್ ಅಝ್ಹರ್ ನ ರೌಲತುಲ್ ನಈಮ್ ಮುದರ್ರಿಸ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ ವಿದ್ವಾಂಸ ಶೈಖ್ ಅಹ್ಮದ್ ಅಝ್ಹರಿ ಯವರಿಂದ ಸೆಮಿನಾರ್ ನಡೆಯಲಿದೆ.

ಎಸ್ ಎಸ್ ಎಫ್ ಕರ್ನಾಟಕ ರಾಜ್ಯಾಧ್ಯಕ್ಷರಾದ ಅಬ್ದುಲ್ ಲತೀಫ್ ಸಅದಿ ಅಧ್ಯಕ್ಷತೆ ವಹಿಸಲಿದ್ದು ರಾಜ್ಯ ಕೋಶಾಧಿಕಾರಿ ಹಾಫಿಜ್ ಸುಫ್ಯಾನ್ ಸಖಾಫಿ ಉದ್ಘಾಟನೆ ಮಾಡಲಿದ್ದಾರೆ. ರಾಜ್ಯ ದಅವಾ ಸಿಂಡಿಕೇಟ್ ಸದಸ್ಯ ಹಬೀಬ್ ನೂರಾನಿ ಅಸ್ಸಖಾಫಿ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ರಾಜ್ಯ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ ಉಪಸ್ಥಿತರಿರುವರು ಎಂದು
ರಾಜ್ಯ ದಅವಾ ಕಾರ್ಯದರ್ಶಿ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಉಳ್ಳಾಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







