ಉಳ್ಳಾಲ,ಮಾ.3: ಇತಿಹಾಸ ಪ್ರಸಿದ್ಧ ಉಳ್ಳಾಲದ ಸಯ್ಯಿದ್ ಮದನಿ ಉರೂಸ್ ಕಾರ್ಯಕ್ರಮಕ್ಕೆ ಜಾಗತಿಕ ಮುಸಲ್ಮಾನರ ನೇತಾರರಾಗಿರುವ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎಪಿ ಉಸ್ತಾದ್ ಆಗಮಿಸಲಿದ್ದು ಮುಖ್ಯ ಪ್ರಭಾಷಣ ನಡೆಸಿಕೊಡಲಿದ್ದಾರೆ.
ಉಳ್ಳಾಲದ ಗೌರವಾನ್ವಿತ ಖಾಝಿಯಾದ ಖುರ್ರತುಸ್ಸಾದಾತ್ ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಕೂರತ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಉಳ್ಳಾಲದ ಉರೂಸ್ ಕಾಯಕ್ರಮಕ್ಕೆ ಇಂದು (ಮಾರ್ಚ್ 03 – ಗುರುವಾರ) ಶೈಕ್ಷಣಿಕ ಅಭಿವೃದ್ಧಿಯ ಹರಿಕಾರ ಎಂದೆನಿಸಿಕೊಂಡಿರುವ ಭಾರತದ ಮಹೋನ್ನತ ಮುಫ್ತಿ ಸುಲ್ತಾನುಲ್ ಉಲಮಾ ಎಪಿ ಉಸ್ತಾದ್ ಅವರು ಆಗಮಿಸಲಿದ್ದು ಲಕ್ಷಾಂತರ ಮಂದಿ ಪಾಲ್ಗೊಳ್ಳುವ ಸಾಧ್ಯತೆ ಇದೆ ಎಂದು ಉರೂಸ್ ಪ್ರಚಾರ ಸಮಿತಿ ತಿಳಿಸಿದೆ.
ಕಾರ್ಯಕ್ರಮದಲ್ಲಿ ಸಯ್ಯಿದ್ ಅಬ್ಬಾಸ್ ಅಲಿ ಶಿಹಾಬ್ ತಂಙ್ಞಳ್ ಪಾಣಕ್ಕಾಡ್ ದುಆ ನೇತೃತ್ವ ನೀಡಲಿದ್ದು, ಹಾಫಿಳ್ ಸಿರಾಜುದ್ದೀನ್ ಖಾಸಿಮಿ ಮುಖ್ಯ ಭಾಷಣ ನಡೆಸಲಿದ್ದಾರೆ.
ಗ್ರ್ಯಾಂಡ್ ಮುಫ಼್ತಿ ಆಗಮಿಸುವ ಕಾರಣ ಉಳ್ಳಾಲದಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಬರಬಹುದೆಂಬ ನಿಟ್ಟಿನಲ್ಲಿ ವಾಹನ ಸಂಚಾರದಲ್ಲಿ ಸ್ವಲ್ಪಮಟ್ಟಿನ ಬದಲಾವಣೆ ಮಾಡಲಾಗಿದ್ದು, ಕೇರಳದ ಮೂಲಕ ಉರೂಸಿಗೆ ಬರುವವರು ಸೋಮೇಶ್ವರ ಭಾಗದಲ್ಲಿ ಪಾರ್ಕಿಂಗ್ ಹಾಗೂ ಇತರೆಡೆಯಿಂದ ಬರುವವರಿಗೆ ತೊಕ್ಕೋಟ್ಟು ಭಾಗದಲ್ಲೀ ಪಾರ್ಕಿಂಗ್ ಕಲ್ಪಿಸಲಾಗಿದೆ, ಹೆಚ್ಚಿನ ಸಂಖ್ಯೆಯಲ್ಲಿ ಪೋಲೀಸ್ ಬಂದೋಬಸ್ತ್ ಕಲ್ಪಿಸಿದ್ದು ಜನರ ಸಹಕಾರವನ್ನೂ ನಿರೀಕ್ಷಿಸಲಾಗಿದೆ. ದರ್ಗಾಕ್ಕೆ ಆಗಮಿಸುವ ಭಕ್ತರು ಮಗ್ರಿಬಿಗೆ ಮುಂಚಿತವಾಗಿಯೇ ಉಳ್ಳಾಲ ತಲುಪಲು ಪ್ರಯತ್ನಿಸಿ ಎಂದು ಆಡಲಿತ ಕಮಿಟಿ ತಿಳಿಸಿದೆ.








ಇವತ್ತು ಪಾಣಕ್ಕಾಡ್ ಶಿಹಾಬ್ ತಂಙಳ್ ದುಆ ನೇತೃತ್ವ
ಮುಖ್ಯ ಪ್ರಭಾಷಣ ಸಿರಾಜುದ್ದೀನ್ ಖಾಸಿಮಿ.
ಇವುಗಳನ್ನು ಹಾಕದಿರಲು ಕಾರಣವೇನು
ಜನಧ್ವನಿ ಪರವಾಗಿ ಅಪ್ಡೇಟ್ ಮಾಡಲಾಗಿದೆ
ಎ.ಪಿ ಹಲವೆಡೆ ಬರುತ್ತಿದ್ದು ಅಲ್ಲೆಲ್ಲೂ ಇಲ್ಲದ ಟ್ರಾಫಿಕ್ ಜಾಮ್ ಉಳ್ಳಾಲದಲ್ಲಿ ಮಾತ್ರ ಆಗುವುದು ಹೇಗೆ?.
ನಿಮಗೆ ಯಾರು ಇಂತಹ ಶುದ್ಧ ಸುಳ್ಳು ವರದಿ ನೀಡುವುದು?