janadhvani

Kannada Online News Paper

ಎಸ್ಸೆಸ್ಸೆಫ್ ದ.ಕ ಜಿಲ್ಲೆ ವೆಸ್ಟ್ ವಾರ್ಷಿಕ ಸಭೆ

ಮಂಗಳೂರು: ಎಸ್ಸೆಸ್ಸೆಫ್ ದ.ಕ ಜಿಲ್ಲೆ ವೆಸ್ಟ್ ಸಮಿತಿಯ ವಾರ್ಷಿಕ ಸಭೆಯು ಫೆಬ್ರವರಿ 27ರಂದು ಜಿಲ್ಲಾಧ್ಯಕ್ಷರಾದ ನವಾಝ್ ಸಖಾಫಿ ಅಡ್ಯಾರ್ ಪದವುರವರ ಅಧ್ಯಕ್ಷತೆಯಲ್ಲಿ ದಾರುಲ್ ಇಝ್ಝ ಕೌಡೇಲ್,ಮೆಲ್ಕಾರ್ ನಲ್ಲಿ ನಡೆಯಿತು.

ಸ್ಸೆಸ್ಸೆಫ್ ದ.ಕ ಜಿಲ್ಲೆ ವೆಸ್ಟ್ ಕ್ಯೂಡಿ ಕಾರ್ಯದರ್ಶಿ ಇಬ್ರಾಹಿಂ ಅಹ್ಸನಿ ದುಆ ನೆರವೇರಿಸುವುದರ ಮೂಲಕ ಸಭೆಗೆ ಚಾಲನೆ ನೀಡಿದರು. ಎಸ್ಸೆಸ್ಸೆಫ್ ದ.ಕ ಜಿಲ್ಲಾ ನಿಕಟಪೂರ್ವ ಕಾರ್ಯದರ್ಶಿ ಅಬ್ದುಲ್ ರಶೀದ್ ಹಾಜಿ ವಗ್ಗ ರವರು ಸಭೆಯನ್ನು ಉಧ್ಘಾಟಿಸಿದರು.

ದ.ಕ. ಜಿಲ್ಲಾ ವೆಸ್ಟ್ ಪ್ರಧಾನ ಕಾರ್ಯದರ್ಶಿ ಹೈದರ್ ಕಾಟಿಪಳ್ಳ 2021-22ನೇ ಸಾಲಿನ ವರದಿ ವಾಚಿಸಿದರೆ, ಹಣಕಾಸು ಕಾರ್ಯದರ್ಶಿ ಇಕ್ಬಾಲ್ ಮಧ್ಯನಡ್ಕ ಲೆಕ್ಕ ಪತ್ರ ಮಂಡಿಸಿದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಇಸ್ಹಾಖ್ ಝುಹ್ರಿ ಕಾನಕೆರೆ ರವರಿಂದ ನೆರೆದಿದ್ದ ಕಾರ್ಯಕರ್ತರಿಗಾಗಿ ಸಂಘಟಣಾ ತರಗತಿ ಕೂಡ ಮೂಡಿ‌ಬಂತು. ಸಭೆಯ
ವೀಕ್ಷಕರಾಗಿ ಎಸ್ಸೆಸ್ಸೆಫ್ ಕರ್ನಾಟಕ
ರಾಜ್ಯ ಕಾರ್ಯದರ್ಶಿ ಹುಸೈನ್ ಸಅದಿ ಹೊಸ್ಮಾರ್ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ ಆಗಮಿಸಿದ್ದರು. ವೇದಿಕೆಯಲ್ಲಿ ದಕ್ಷಿಣ ‌ಕನ್ನಡ ಜಿಲ್ಲಾ ಎಸ್ಸೆಸ್ಸೆಫ್ ನಾಯಕರು ಉಪಸ್ಥಿತರಿದ್ದರು. ಕ್ಯಾಂಪಸ್ ಕಾರ್ಯದರ್ಶಿ ಹಮೀದ್ ತಲಪಾಡಿ ಸ್ವಾಗತಿಸಿ, ಕೊನೆಯಲ್ಲಿ
ಮನ್ಸೂರ್ ಬಜಾಲ್ ಧನ್ಯವಾದ ಸಮರ್ಪಿಸಿದರು.