janadhvani

Kannada Online News Paper

ಫೆ.27:ಸುಪ್ರಸಿದ್ಧ ಖುರ್’ಆನ್ ತರಬೇತುದಾರ ಯೂಸುಫ್ ಲತೀಫಿ ವಾಣಿಯಂಬಲಂ ಕಬಕಕ್ಕೆ

ಪುತ್ತೂರು: ಎಸ್ಸೆಸ್ಸೆಫ್ ಮತ್ತು ಎಸ್.ವೈ. ಎಸ್ ಕಬಕ ಶಾಖೆಯ ವತಿಯಿಂದ ಫೆ.27 ರಂದು ಕೆ.ಜಿ.ಎನ್ ಕ್ಯಾಂಪಸ್ ಮಿತ್ತೂರ್ ನಲ್ಲಿ ಏಕದಿನ ತಜ್ ವೀದ್ ಕ್ಯಾಂಪ್ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದಲ್ಲಿ, ಸುಪ್ರಸಿದ್ಧ ಖುರ್ ಆನ್ ತರಬೇತುದಾರ, ಸಮಸ್ತ ಕೇರಳ ಸುನ್ನಿ ವಿದ್ಯಾಭ್ಯಾಸ ಬೋರ್ಡಿನ ಪ್ರಸಿದ್ಧ ಖಾರಿಅ್ ಮತ್ತು ಟ್ರೈನರ್ ಕೂಡ ಆಗಿರುವ ಯೂಸುಫ್ ಲತೀಫಿ ವಾಣಿಯಂಬಲಂ ಉಸ್ತಾದ್ ತರಬೇತಿ ನೀಡಲಿದ್ದಾರೆ.

ಕಾರ್ಯಕ್ರಮವು ಬೆಳಗ್ಗೆ 9:00 ರಿಂದ ಸಂಜೆ 4:00 ರ ವರೆಗೆ ನಡೆಯಲಿದೆ ಎಂದು ಕಬಕ ಎಸ್ಸೆಸ್ಸೆಫ್ ತಿಳಿಸಿದೆ.