janadhvani

Kannada Online News Paper

SSF ಪರಪ್ಪುಶಾಖೆ ಸಾಂತ್ವನ ಯೋಜನೆ: ನೂತನ ಮನೆಯ ಹಸ್ತಾಂತರ- ಫೆ.20 ಕ್ಕೆ

ಇರಾ: ಇಲ್ಲಿನ ಪರಪ್ಪು ಶಾಖಾ ಸಮಿತಿ SSF ಸಾಂತ್ವನ ಯೋಜನೆಯ ಭಾಗವಾಗಿ ನಿರ್ಮಿಸಿದ ನೂತನ ಮನೆಯ ಉಧ್ಘಾಟನಾ ಕಾರ್ಯಕ್ರಮವು ನಾಳೆ (ಫೆ.20) ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಅಹ್ಲ್ ಬೈತಿನ ಧನ್ಯ ವ್ಯಕ್ತಿ, ಸಮುದಾಯದ ಆಶಾ ಕಿರಣ ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ ದುವಾ ಮಜ್ಲಿಸ್ ಗೆ ನೇತೃತ್ವ ನೀಡಲಿದ್ದು, ಕರ್ನಾಟಕ ರಾಜ್ಯ SSF ಕೋಶಾಧಿಕಾರಿ, ಸುನ್ನೀ ಕಾರ್ಯಕರ್ತರ ಆವೇಶಭರಿತ ನಾಯಕರಾದ ಹಾಫಿಳ್ ಸುಫ್ಯಾನ್ ಸಖಾಫಿ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ.

ಪರಪ್ಪು ಜುಮಾ ಮಸೀದಿಯ ಖತೀಬರಾದ ಅಬ್ದುಲ್ ಹಮೀದ್ ಸಖಾಫಿ, ಮೂಲೆ ಜುಮಾ ಮಸೀದಿಯ ಖತೀಬರಾದ ಹಾರಿಸ್ ಹನೀಫಿ, ಕರ್ನಾಟಕ ವಿಧಾನಸಭೆಯ ವಿಪಕ್ಷ ಉಪನಾಯಕರಾದ ಯು. ಟಿ. ಖಾದರ್, ಯುವ ಉದ್ಯಮಿ ಶಾಂತಿಭಾಗ್ ಜುಮಾ ಮಸೀದಿಯ ಅಧ್ಯಕ್ಷರೂ ಆದ ಹಾಜಿ ಮಹಮ್ಮದ್ ಕುತ್ತಾರ್,SSF ಯುನಿಟ್ ಅಧ್ಯಕ್ಷ ಫಾರೂಕ್ BM, ಪ್ರಧಾನ ಕಾರ್ಯದರ್ಶಿ ಮುಸ್ತಫ ಸಖಾಫಿ, ಜುಮಾ ಮಸೀದಿಯ ಅಧ್ಯಕ್ಷರಾದ ಯಂ. ಬಿ ಉಮ್ಮರ್ ಹಾಗೂ ಊರಿನ ಗಣ್ಯ ವ್ಯಕ್ತಿಗಳು, ಸಂಘಟನಾ ಹಿರಿಯ ನೇತಾರರು ಭಾಗವಹಿಸಲಿದ್ದಾರೆ.