ಸುಳ್ಯ :SSF ಸುಳ್ಯ ಡಿವಿಷನ್ ಕ್ಯಾಂಪಸ್ ಚೇಂಬರ್ ವತಿಯಿಂದ ‘ಕ್ಯಾಂಪಸ್ ಮೀಟ್’ ಕಾರ್ಯಕ್ರಮವು ಫೆ,13-2022 ರಂದು ಸುನ್ನೀ ಸೆಂಟರ್ ಸುಳ್ಯ ದಲ್ಲಿ ನಡೆಯಿತು. SSF ಸುಳ್ಯ ಡಿವಿಷನ್ ಕ್ಯಾಂಪಸ್ ಕನ್ವೀನರ್ ಸ್ವಾಲಿಹ್ ಹನೀಫಿ ಉಸ್ತಾದರು ಉದ್ಘಾಟಿಸಿದರು.
SSF ಸುಳ್ಯ ಡಿವಿಷನ್ ಕ್ಯಾಂಪಸ್ ಕಾರ್ಯದರ್ಶಿ ಸ್ವಾದಿಕ್ ಸರ್ ಕಲ್ಲುಗುಂಡಿರವರು ಮಾತನಾಡಿ ‘SSF ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ನಿರಂತರ ಶ್ರಮಿಸುತ್ತಿದೆ. ವಿದ್ಯಾರ್ಥಿಗಳು ಕ್ಯಾಂಪಸ್ ಗಳಲ್ಲಿ ಶಿಸ್ತಿನಿಂದ ವರ್ತಿಸಿ, ಎಲ್ಲರಲ್ಲೂ ಸಾಮರಸ್ಯತೆಯಿಂದ ಬೆರೆಯಬೇಕು. ವಿದ್ಯಾರ್ಥಿಗಳಲ್ಲಿ ಉಜ್ವಲ ಭವಿಷ್ಯದ ಗುರಿ ಮುಖ್ಯ. ಸಿವಿಲ್ ಸರ್ವೀಸ್ ಮೌಲ್ಯವನ್ನು ವಿವರಿಸಿ ಅದಕ್ಕೆ ಬೇಕಾದ ಪೂರ್ವತಯಾರಿ ಇಂದಿನಿಂದಲೇ ನಡೆಸಬೇಕು.’ ಎಂದರು.
ಕಾರ್ಯಕ್ರಮದಲ್ಲಿ SSF ಸುಳ್ಯ ಸೆಕ್ಟರ್ ಅಧ್ಯಕ್ಷರಾದ ಬಶೀರ್ ಕಲ್ಲುಮುಟ್ಲು, ಇರ್ಶಾದ್ ಇರುವಂಬಳ್ಳ, SSF ಜಾಲ್ಸೂರು ಸೆಕ್ಟರ್ ಕ್ಯಾಂಪಸ್ ಕಾರ್ಯದರ್ಶಿ ಮುಫೀದ್ ಜಾಲ್ಸೂರು ಸೇರಿ ಹಲವಾರು ವಿದ್ಯಾರ್ಥಿಗಳು ಭಾಗವಹಿಸಿದರು. SSF ಸುಳ್ಯ ಸೆಕ್ಟರ್ ಕ್ಯಾಂಪಸ್ ಕಾರ್ಯದರ್ಶಿ ಇಜಾಝ್ ಗೂನಡ್ಕರವರು ಸ್ವಾಗತಿಸಿ, ಕ್ಯಾಂಪಸ್ ವಿದ್ಯಾರ್ಥಿ ಇಸಾಕ್ ಗೂನಡ್ಕರವರು ವಂದಿಸಿದರು.








